Advertisement
ಮಣಿಪಾಲ ಠಾಣೆಯ ತಿಮ್ಮಯ್ಯ ಮತ್ತು ಆನಂದಯ್ಯ ಅವರು ಮಣಿಪಾಲದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಿರಣ್ ಮತ್ತು ಸಂಗಮೇಶ್ ಅವರೂ ಜತೆಗಿದ್ದರು. ರವಿವಾರ ಮುಂಜಾನೆ ಸಿಂಡಿಕೇಟ್ ಸರ್ಕಲ್ ಕಡೆಯಿಂದ – ಉಪೇಂದ್ರ ಪೈ ಸರ್ಕಲ್ ಕಡೆಗೆ ಹೋಗುವ ವಿ.ಎಸ್. ಆಚಾರ್ಯ ರಸ್ತೆಯಲ್ಲಿ ತಿಮ್ಮಯ್ಯ ಮತ್ತು ಆನಂದಯ್ಯ ಅವರು ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚೇತನ್ ಎಂಬವರು ತನ್ನ ಸ್ಕೂಟರ್‌ನಲ್ಲಿ ಅಭಿಷೇಕ್ ಅವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತಿವೇಗದಲ್ಲಿ ಬಂದಿದ್ದಾರೆ. ನಿಲ್ಲಿಸುವಂತೆ ಸೂಚಿಸಿದರೂ ನಿರ್ಲಕ್ಷಿಸಿ ತಿಮ್ಮಯ್ಯ ಅವರಿಗೆ ಢಿಕ್ಕಿ ಹೊಡೆದಿದ್ದಾರೆ.
Advertisement
Manipal ಗಸ್ತು ನಿರತ ಪೊಲೀಸ್ ಸಿಬಂದಿಗೆ ಸ್ಕೂಟರ್ ಢಿಕ್ಕಿ
12:22 AM Jul 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.