ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯದ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸುಟಿಕಲ್ ಸೈನ್ಸಸ್ (ಎಂಕಾಪ್ಸ್) ವತಿಯಿಂದ ಡೈಮಂಡ್ ಜುಬಿಲಿ ಆಚರಣೆ ಮತ್ತು ಡಾ| ಟಿಎಂಎ ಪೈ ಅವರ 125 ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಅ. 10ರಂದು ಮೊದಲ ಬಾರಿಗೆ “ನ್ಯಾಶನಲ್ ಕರೆಂಟ್ ಗುಡ್ ಮ್ಯಾನು ಫ್ಯಾಕ್ಚರಿಂಗ್ ಪ್ರಾಕ್ಟಿಸ್ ಡೇ’ (ನ್ಯಾಶನಲ್ ಸಿಜಿಎಂಪಿ ಡೇ) ಎಂಕಾಪ್ಸ್‌ನ ಸಿಜಿಎಂಪಿ ಸೆಂಟರ್‌ನಲ್ಲಿ ನಡೆಯಲಿದೆ.
“ಸಿಜಿಎಂಪಿ: ಹೆಲ್ತ್‌ಕೇರ್‌ನಲ್ಲಿ ಪರಿವರ್ತನೆ’ ಎಂಬ ಥೀಮ್‌ನ ಪೋಸ್ಟರ್ ಅನ್ನು ವಿ.ವಿ.ಯ ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್, ಕುಲಸಚಿವ ಡಾ| ಗಿರಿಧರ ಕಿಣಿ ಬಿಡುಗಡೆಗೊಳಿಸಿದರು. ಎಂಕಾಪ್ಸ್ ಪ್ರಾಂಶುಪಾಲ ಡಾ| ಸಿ. ಮಲ್ಲಿಕಾರ್ಜುನ ರಾವ್, ಡಾ| ಮುದ್ದುಕೃಷ್ಣ ಬಿ.ಎಸ್., ಡಾ. ಗಿರೀಶ್ ತುಂಗ, ಡಾ| ಅರವಿಂದ ಪೈ, ಡಾ| ವಾಸುದೇವ್ ಆರ್. ಪೈ ಉಪಸ್ಥಿತರಿದ್ದರು.
ರಾಷ್ಟ್ರೀಯ ಸಿಜಿಎಂಪಿ ದಿನಾಚರ ಣೆಯು ಔಷಧೀಯ ಉದ್ಯಮದಲ್ಲಿ ಉತ್ಪನ್ನಗಳ ಗುಣಮಟ್ಟ ಮತ್ತು ಸುರ ಕ್ಷೆಯನ್ನು ಕಾಯ್ದುಕೊಳ್ಳಲು ಜಾಗೃತಿ ಮೂಡಿಸಲಾಗುವುದು ಎಂ ಸಿಜಿಎಂಪಿ ಕೇಂದ್ರ ದ ಸಂ ಯೋಜಕ ಡಾ| ಗಿರೀಶ್ ಪೈ ಕೆ. ಹೇಳಿದರು.
ಐಡಿಎಂಎಯ ರಾಷ್ಟ್ರೀಯ ಅಧ್ಯಕ್ಷ ಡಾ| ವಿರಾಂಚಿ ಶಾಹ, ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಡಾ| ರಾಜೀವ್ ಸಿಂಗ್ ರಘುವಂಶಿ, ಔಷಧ ರಫ್ತು ಉತ್ತೇಜಕ ಮಂಡಳಿಯ ಅಧ್ಯಕ್ಷ ಡಾ| ಎಸ್.ವಿ. ವೀರಮಣಿ, ಕೆಡಿಪಿಎಂಎ ಅಧ್ಯಕ್ಷ ಹರೀಶ್ ಕೆ. ಜೈನ್, ಐಡಿಎಂಎನ ಎಲ್ಲ ರಾಜ್ಯ ಮಂಡಳಿಗಳ ಮುಖ್ಯಸ್ಥರು, ದ.ಕ., ಉಡುಪಿ ಜಿಲ್ಲೆಗಳ ಔಷಧ ನಿಯಂತ್ರಕ ಮಂಡಳಿಯ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸುವರು. ವಿಚಾರಣ ಸಂಕಿರಣ, ಕಿರುಪ್ರಾತ್ಯಕ್ಷಿಕೆ, ತಜ್ಞರೊಂದಿಗೆ ಸಂವಾದ ಹಾಗೂ ಗುಣಮಟ್ಟ ಮತ್ತು ನಿಯಂತ್ರಕ ಸವಾಲುಗಳು ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.