Advertisement
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ), ಮಾಹೆ, ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಇಂಡಿಯ ಪ್ರೈ.ಲಿ., ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. (ಎಂಎಂಎನ್‌ಎಲ್) ಜಂಟಿಯಾಗಿ ಕೊಡಮಾಡಿದ 2022ರ ಹೊಸ ವರ್ಷದ ಪ್ರಶಸ್ತಿಯನ್ನು ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ಶುಕ್ರವಾರ ಸ್ವೀಕರಿಸಿ ಅವರು ಮಾತನಾಡಿದರು.
ಕಟೀಲಮ್ಮನ ಅನುಗ್ರಹ
ನಾನು ಕಟೀಲಿನಲ್ಲಿ ಆಸ್ಪತ್ರೆಯನ್ನು ನಿರ್ಮಿಸಿ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೆ ಗುಣ ಮಟ್ಟದ ಆರೋಗ್ಯ ಸೇವೆ ಒದಗಿಸುವ ಆಶಾವಾದ ಹೊಂದಿದ್ದೆ. ಅದರ ನಿರ್ವಹಣೆಗೆ ಮಾಹೆ ಒಪ್ಪಿ ಕೊಂಡಾಗಲೇ ಮಣಿಪಾಲ ಸಮೂಹ ಸಂಸ್ಥೆಯ ಪ್ರಶಸ್ತಿಯನ್ನು ಪಡೆದುಕೊಂಡಂತೆ. ಇದೆಲ್ಲವೂ ಸಾಧ್ಯ ವಾದದ್ದು ಕಟೀಲಮ್ಮನ ಅನುಗ್ರಹದಿಂದ ಎಂದು ಮುಂಬಯಿ ಸಂಜೀವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಸುರೇಶ್ ರಾವ್ ಹೇಳಿದರು. ಕೋವಿಡ್ 19 ಕಾಲಘಟ್ಟದಲ್ಲಿಯೂ ಆಸ್ಪತ್ರೆಯ ಲಾಭವನ್ನು ಜನರು ಪಡೆದುಕೊಂಡರು. ಕಟೀಲಿನ ಯೋಜನೆಗಾ ಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಹೀಗೆ ಆಸ್ಪತ್ರೆಯುಪ್ರತಿಷ್ಠಿತ ಗೌರವವನ್ನು ಪಡೆದುಕೊಂಡಂತಾಯಿತು ಎಂದು ತಿಳಿಸಿದರು.
ಯುವಪೀಳಿಗೆ ಹೊಣೆ
ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಬೆಳೆಸಿ ಉಳಿಸುವಲ್ಲಿ ಯುವ ಪೀಳಿಗೆಗೆ ಹೊಣೆಗಾರಿಕೆ ಇದೆ. ಪ್ರತಿಭಾನ್ವಿತ ಯುವ ಕಲಾವಿದರಿದ್ದು ಅವರು ಈ ಹೊಣೆಯನ್ನು ವಹಿಸಿಕೊ ಳ್ಳುತ್ತಾರೆಂಬ ಭರವಸೆ ನನಗಿದೆ ಎಂದು ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಹೇಳಿದರು.
Related Articles
ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಗೌರವಿಸಿದರು.
ಡಾ| ಎಚ್.ಎಸ್. ಬಲ್ಲಾಳ್ ಸ್ವಾಗತಿಸಿ ದರು. ಭಂಡಾರ್‌ಕಾರ್ ಕಾಲೇಜು ಪ್ರಾಂಶುಪಾಲ ಪ್ರೊ| ಎನ್. ನಾರಾಯಣ ಶೆಟ್ಟಿ ವಂದಿಸಿದರು. ಎಂಸಿಎಚ್‌ಪಿ ಸ. ಪ್ರಾಧ್ಯಾಪಕಿ ಡಾ| ನಿವೇದಿತಾ ಎಸ್. ಪ್ರಭು ನಿರ್ವಹಿಸಿದರು. ಎಂಇಎಂಜಿ ಅಧ್ಯಕ್ಷ, ಎಜಿಇ ಕುಲಸಚಿವ ಡಾ| ರಂಜನ್ ಪೈ ಆನ್‌ಲೈನ್‌ನಲ್ಲಿ ಪಾಲ್ಗೊಂಡರು.
Advertisement
ಶ್ರೇಷ್ಠ ಖಾಸಗಿ ವಿಶ್ವವಿದ್ಯಾನಿಲಯಮಣಿಪಾಲ ಸಂಸ್ಥೆಯು ಬೋಧನೆಯ ಆಧುನೀಕರಣವನ್ನು ಕಲಿಸಿದೆ. ಭಾರತದ ಶ್ರೇಷ್ಠ ಖಾಸಗಿ ವಿ.ವಿ.ಯಾಗಿ ನಾವು ವೈದ್ಯಕೀಯ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಸಾಧಿಸುವ ಹಾದಿಯಲ್ಲಿದ್ದೇವೆ ಎಂದು ಮಾಹೆ ಬೆಂಗಳೂರು ಕ್ಯಾಂಪಸ್ ಸಹಕುಲಪತಿ ಡಾ| ಪ್ರಜ್ಞಾ ರಾವ್ ಹೇಳಿದರು.
ಮಣಿಪಾಲ ಸಂಸ್ಥೆಗಳು ಜ್ಞಾನವನ್ನು ಸೃಷ್ಟಿಸುತ್ತಿವೆ, ಪ್ರತಿಭೆಗಳನ್ನು ಹೊರ ಜಗತ್ತಿಗೆ ತೋರಿಸುತ್ತಿವೆ. ನಾನು ಮಣಿಪಾಲ ಕುಟುಂಬದ ಭಾಗವಾಗಿರಲು ಹೆಮ್ಮೆಪಡುತ್ತೇನೆ. “ಪ್ರಜ್ಞಾನಂ ಬ್ರಹ್ಮ’ ಎಂಬ ನಮ್ಮ ಸಂಸ್ಥೆಯ ಧ್ಯೇಯವಾಕ್ಯದಂತೆ ಜೀವನದಿಂದ ಸ್ಫೂರ್ತಿ ಪಡೆಯುವಲ್ಲಿ ನಂಬಿಕೆ ಇದೆ. ಸಮಗ್ರತೆ, ಪಾರದರ್ಶಕತೆ, ಗುಣಮಟ್ಟ, ಸಮೂಹ ಕಾರ್ಯ, ಪ್ರೀತಿಯ ಕಾರ್ಯಾನುಷ್ಠಾನ, ಎಲ್ಲಕ್ಕಿಂತ ಮಿಗಿಲಾಗಿ ಮಾನವತೆಯ ಸ್ಪರ್ಶದೊಂದಿಗೆ ನಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರು ಮುನ್ನಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಚಿತ್ರಗಳು: ಆಸ್ಟ್ರೋ ಮೋಹನ್