Advertisement

Manipal ಸುರಕ್ಷಿತ ರಕ್ತ ವರ್ಗಾವಣೆಗೆ ಮೊನೊಕೈಟ್‌ ಮೊನೊಲೇಯರ್‌ ಅಸ್ಸೇ

11:17 PM Dec 04, 2023 | Team Udayavani |

ಮಣಿಪಾಲ: ಕೆಎಂಸಿ ಮತ್ತು ಆಸ್ಪತ್ರೆಯ ಟ್ರಾನ್ಸ್‌ಫ್ಯೂಷನ್‌ ಮೆಡಿಸಿನ್‌ ಸೆಂಟರ್‌ ವಿಭಾಗವು ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ ಮೊನೊಕೈಟ್‌ ಮೊನೊಲೇಯರ್‌ ಅಸ್ಸೇಯನ್ನು ಪರಿಚಯಿಸಿದ್ದು, ಇದು ಭಾರತದಲ್ಲೇ ಮೊದಲನೆಯದಾಗಿದೆ.

Advertisement

ಡಾ| ಶಮೀ ಶಾಸ್ತ್ರೀ ನೇತೃತ್ವದ ತಂಡ ಇದನ್ನು ಪರಿಚಯಿಸಿದೆ. ರಕ್ತ ವರ್ಗಾವಣೆಯ ಸಂದರ್ಭದಲ್ಲಿ ಗಮನಾರ್ಹ ಪ್ರತಿಕೂಲ ಪ್ರತಿಕ್ರಿಯೆಗಳ ಅಪಾಯವನ್ನು ಊಹಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಹೊಂದಾಣಿಕೆಯ ರಕ್ತ ಲಭ್ಯವಿಲ್ಲದಿದ್ದಾಗ ಹೊಂದಾಣಿಕೆಯ ರಕ್ತ ಕಂಡುಹಿಡಿಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌, ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌, ಕೆಎಂಸಿ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ ಅವರು ತಂಡದ ಕಾರ್ಯಸಾಧನೆಯನ್ನು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next