Advertisement

ಮಣಿಪಾಲ ಎಂಐಟಿ-ಎಂಟಿಎಲ್‌ “ಇಂಪ್ರಶನ್‌-17′; ಮಣಿಪಾಲ ಎಂಐಟಿ ಚಾಂಪಿಯನ್‌

03:45 AM Feb 05, 2017 | |

ಉಡುಪಿ: ಮಣಿಪಾಲ ಎಂಐಟಿಯ ಪ್ರಿಂಟಿಂಗ್‌ ಆ್ಯಂಡ್‌ ಮೀಡಿಯಾ ಎಂಜಿನಿಯರಿಂಗ್‌ ವಿಭಾಗ ಮತ್ತು ಮಣಿಪಾಲ ಟೆಕ್ನಾಲಜೀಸ್‌ ಲಿ. (ಎಂಟಿಎಲ್‌) ವತಿಯಿಂದ “ತಂತ್ರಜ್ಞಾನಗಳ ಸವಾಲುಗಳು’ ಇದರ ಕುರಿತು ಮಣಿಪಾಲ ಎಂಐಟಿಯಲ್ಲಿ ನಡೆದ “ಇಂಪ್ರಶನ್‌-17′ ಎನ್ನುವ 5ನೇ ರಾಷ್ಟ್ರೀಯ ಮಟ್ಟದ ಅಂತರ್‌ ಕಾಲೇಜು ಸ್ಪರ್ಧಾ ಕಾರ್ಯಕ್ರಮದಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ) ಚಾಂಪಿಯನ್‌ ಆಗಿದೆ.

Advertisement

ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಥಮ-ಮಣಿಪಾಲ ಎಂಐಟಿ, ದ್ವಿತೀಯ-ಕ್ಯಾಲಿಕಟ್‌ ವಿಶ್ವವಿದ್ಯಾನಿಲಯ. ಪಾಲಿಟೆಕ್ನಿಕ್‌ ಡಿಪ್ಲೋಮಾ ವಿಭಾಗದಲ್ಲಿ ಪ್ರಥಮ-ಶೋರೂ°ರ್‌ ಪಾಲಿಟೆಕ್ನಿಕ್‌, ದ್ವಿತೀಯ-ಸಿಗಾ ಪಾಲಿಟೆಕ್ನಿಕ್‌ ಚೆನ್ನೈ ಪಡೆದುಕೊಂಡಿತು.

ಎಂಜಿನಿಯರಿಂಗ್‌ ವಿಭಾಗದಲ್ಲಿ ವಿನ್ನರ್‌ ಆದ ಎಂಐಟಿ ತಂಡಕ್ಕೆ ಹಾಗೂ ಡಿಪ್ಲೋಮಾ ವಿಭಾಗದಲ್ಲಿ ವಿನ್ನರ್‌ ಆದ ಶೋರೂ°ರ್‌ ತಂಡಕ್ಕೆ ಡಾ| ಟಿಎಂಎ ಪೈ ಸ್ಮಾರಕ ಪ್ರಶಸ್ತಿ ಫ‌ಲಕ ಮತ್ತು ಎಂಜಿನಿಯರಿಂಗ್‌ ರನ್ನರ್‌ ಅಪ್‌ ತಂಡಕ್ಕೆ ದಿ| ಪ್ರೊ| ಪಿ.ಎಸ್‌. ಶಿವರಾಮ್‌ ಸ್ಮಾರಕ ಪ್ರಶಸ್ತಿ ಹಾಗೂ ಡಿಪ್ಲೋಮಾ ರನ್ನರ್‌ ಅಪ್‌ ತಂಡಕ್ಕೆ ದಿ| ಪ್ರೊ| ಭಾಸ್ಕರ್‌ ರಾವ್‌ ಸ್ಮಾರಕ ಪ್ರಶಸ್ತಿ ನೀಡಲಾಯಿತು.

ಕಠಿನ ಪರಿಶ್ರಮವಿರಲಿ: ಶಶಿರಂಜನ್‌
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಹುಮಾನ ವಿತರಿಸಿದ ಮಣಿಪಾಲ ಟೆಕ್ನಾಲಜೀಸ್‌ ಲಿ.ನ (ಎಂಟಿಎಲ್‌) ಉಪಾಧ್ಯಕ್ಷ ಮತ್ತು ಎಸ್‌ಬಿಯು ಹೆಡ್‌ ಶಶಿರಂಜನ್‌ ಮಾತನಾಡಿ, ಜೀವನವನ್ನು ಹೇಗೆ ಸಾಗಿಸಬೇಕು ಎನ್ನುವುದರ ಕುರಿತು ನಿರ್ದಿಷ್ಟ ಗುರಿ ಇರಬೇಕು. ಸಂತೋಷದ ಬದುಕು, ಉತ್ತಮ ಕೆಲಸ ಸಿಗಬೇಕಾದರೆ ಜೀವನದಲ್ಲಿ ಕಷ್ಟ ಪಡಲೇಬೇಕು. ಕಠಿನ ಪರಿಶ್ರಮವಿಲ್ಲದೆ ಏನೂ ಸಾಧಿಸಲು ಸಾಧ್ಯವಾಗದು. ತಂತ್ರಜ್ಞಾನಗಳು ಇಂದಿನ ಸವಾಲಾಗಿದೆ. ಡಿಜಿಟಲ್‌ ಯುಗಕ್ಕೆ ನಾಂದಿಯಾಗುತ್ತಲಿದೆ. ಪ್ರತಿದಿನ ಕಲಿಯುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು. ಬದಲಾವಣೆಗಳು ಸಾಗುತ್ತಿರುತ್ತದೆ. ಅಪ್‌ಡೇಟ್‌ ಆಗುತ್ತಾ ಮುನ್ನಡೆಯಬೇಕು ಎಂದರು.

ಎಂಐಟಿಯ ಜಂಟಿ ನಿರ್ದೇಶಕ ಡಾ| ಬಿ.ಎಚ್‌.ವಿ. ಪೈ ಅಧ್ಯಕ್ಷತೆ ವಹಿಸಿದ್ದರು. ಅಡ್ಮಿಶನ್‌ ನಿರ್ದೇಶಕ ಡಾ| ಶ್ರೀಕಾಂತ್‌ ರಾವ್‌, ಎಂಐಟಿಯ ಪ್ರಿಟಿಂಗ್‌ ಆ್ಯಂಡ್‌ ಮೀಡಿಯಾ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ| ಅಮೃತರಾಜ್‌ ಎಚ್‌.ಕೆ. ಉಪಸ್ಥಿತರಿದ್ದರು.

Advertisement

ಉಪನ್ಯಾಸಕ ನಾಗರಾಜ್‌ ಕಾಮತ್‌ ಸ್ವಾಗತಿಸಿದರು. ತಂತ್ರಜ್ಞಾನಗಳ ಕುರಿತ ಸ್ಫರ್ಧೆಯಲ್ಲಿ ಬಹುಮಾನಿತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next