Advertisement

ಮಣಿಪಾಲ ವೈದ್ಯಕೀಯ ಕಾಲೇಜು: ವಾರ್ಷಿಕೋತ್ಸವ

01:00 AM Mar 13, 2019 | Team Udayavani |

ಮಣಿಪಾಲ: ಗುಣಮಟ್ಟದ ಶಿಕ್ಷಣದಿಂದ ಮಣಿಪಾಲದ ವೈದ್ಯಕೀಯ ಕಾಲೇಜು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ.  ವೈದ್ಯಕೀಯ ಕಾಲೇಜು ಮುಂಚೂಣಿಯಲ್ಲಿರುವುದು ಮತ್ತು ಅದನ್ನು ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಆದರೆ ಮಣಿಪಾಲದ ಕಾಲೇಜು 2 ದಶಕಗಳಿಂದ ತನ್ನ ಸ್ಥಾನವನ್ನು ಕಾಪಾಡಿಕೊಂಡಿದೆ ಎಂದು ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ನ ಉಪಕುಲಪತಿ ಡಾ| ಎಚ್‌.ಎಸ್‌ ಬಲ್ಲಾಳ್‌ ಹೇಳಿದರು.
ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಮತ್ತು ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಮುಖ್ಯ ಅತಿಥಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ನ ಪರೀಕ್ಷಾಂಗ ಸಚಿವ ಡಾ| ವಿನೋದ್‌ ವಿ. ಥೋಮಸ್‌ ಮಾತನಾಡಿ, ಮಣಿಪಾಲ್‌ ವೈದ್ಯಕೀಯ ಕಾಲೇಜು ಶೇ.98 ಫ‌ಲಿತಾಂಶ  ಪಡೆಯುವುದರೊಂದಿಗೆ ಮಾಹೆಯ ಎಲ್ಲ ಕಾಲೇಜುಗಳಲ್ಲಿ ಅತ್ಯುತ್ತಮ ಕಾಲೇಜು ಆಗಿದೆ ಎಂದರು.

2018ರ ಉತ್ತಮ ಸಂಶೋಧನೆಗೆ ಸಿಗುವ  ಡಾ| ಟಿಎಂಎ ಪೈ ಚಿನ್ನದ ಪದಕವನ್ನು ಡೆಂಟಲ್‌ ಮೆಟೀರಿಯಲ್‌ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಡಾ| ಕಿಶೋರ್‌ ಜಿಂಜುಪಲ್ಲಿ ಪಡೆದರು. ಫೇರ್‌ ಪ್ರಶಸ್ತಿಯನ್ನು ಡಾ| ವಾಸುದೇವ್‌ ಬಲ್ಲಾಳ್‌ ಹಾಗೂ ಡಾ| ರಾಜೇಶ್ವರಿ ಪಡೆದುಕೊಂಡರು. ಉತ್ತಮ ಬೋಧನೆಗಾಗಿ ಡಾ| ಆನಂದೀಪ್‌ ಶುಕ್ಲ ಹಾಗೂ ಡಾ| ವಿದ್ಯಾಸರಸ್ವತಿ ಪ್ರಶಸ್ತಿ ಪಡೆದರು. 

ಉತ್ತಮ ವಿದ್ಯಾರ್ಥಿ ಮತ್ತು ಹೆಚ್ಚು ಅಂಕ ಗಳಿಸಿದ ಬಿ. ಕೃತಿಕಾ ಹಾಗೂ  ಹೆಚ್ಚು   ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಸ್ನಾತ್ತಕೋತ್ತರ ವಿದ್ಯಾರ್ಥಿಗಳಲ್ಲಿ ಪ್ರೈಸ್‌ ಪ್ರಶಸ್ತಿಯನ್ನು ಪಿರಿಯೋಡೆಂಟಾಲಿಟಿ ವಿಭಾಗದ ಡಾ| ಮೋನಿಕಾ ಪಾಲ್‌  ಪಡೆದಿದ್ದಾರೆ. 

ವಿದ್ಯಾರ್ಥಿ ವರದಿಯನ್ನು ಡಾ| ಸಾಯಿನಿವೇದಿತಾ ವಾಚಿಸಿದರು. ಡಾ| ಶಾನೆ ಯಿ ಕ್ಯು$Õಯನ್‌ ಕ್ವೆಕ್‌ ಅನಿಸಿಕೆ ವ್ಯಕ್ತಪಡಿಸಿದರು. ಮಣಿಪಾಲ ವೈದ್ಯಕೀಯ ಕಾಲೇಜಿನ ಡೀನ್‌ ಡಾ| ಕೀರ್ತಿಲತಾ ಎಂ. ಪೈ ಸ್ವಾಗತಿಸಿ,  ವರದಿ ವಾಚಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next