Advertisement
ಶಿವಮೊಗ್ಗದ “ಒ’ ಪಾಸಿಟಿವ್ ರಕ್ತದ ಗುಂಪಿನ 14 ವರ್ಷದ ಬಾಲಕನಿಗೆ 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯ ಪತ್ತೆಯಾಗಿತ್ತು. ಮುಂದಿನ ಎರಡು ವರ್ಷಗಳಲ್ಲಿ ಸಮಸ್ಯೆ ಉಲ್ಬಣಗೊಂಡು ದೈಹಿಕ ಬೆಳವಣಿಗೆ, ಚಟುವಟಿಕೆ ಕಡಿಮೆಯಾದ ಕಾರಣ ಹೆಚ್ಚಿನ ಆರೈಕೆಗಾಗಿ ಮಣಿಪಾಲ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗಕ್ಕೆ ಶಿಫಾರಸು ಮಾಡಲಾಯಿತು.
Related Articles
Advertisement
ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ| ಶಂಕರ್ ಪ್ರಸಾದ್ ಎನ್. ಅವರು, ಮೂತ್ರಪಿಂಡದ ಕಾಯಿಲೆ ಇರುವ ಮಕ್ಕಳಿಗೆ ಆರಂಭಿಕ ಗುರುತಿಸುವಿಕೆ, ಸಮಯೋಚಿತ ಚಿಕಿತ್ಸೆ ಮತ್ತು ದೀರ್ಘಾವಧಿಯ ಆರೈಕೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಮಕ್ಕಳಲ್ಲಿ ಕಿಡ್ನಿ ಕಸಿಯೇ ಸೂಕ್ತ:
ಅಗಾಧವಾದ ಬೆಳವಣಿಗೆಯ ಸಾಮರ್ಥ್ಯ ಹೊಂದಿ ರುವ ಮಕ್ಕಳಲ್ಲಿ, ಮೂತ್ರಪಿಂಡ ಕಸಿ ಡಯಾಲಿಸಿಸ್‌ಗಿಂತ ಉತ್ತಮವಾದ ಆಯ್ಕೆಯಾಗಿದೆ, ಅದು ಉತ್ತಮ ಗುಣಮಟ್ಟದ ಜೀವನವನ್ನು ಒದಗಿಸುತ್ತದೆ. ಮಕ್ಕಳಲ್ಲಿ, ಎಬಿಒ ಹೊಂದಾಣಿಕೆಯಾಗದ ಕಸಿ ಮಾಡುವಿಕೆ, ರಕ್ತದ ಗುಂಪುಗಳು ಹೊಂದಾಣಿಕೆಯಾಗದಿದ್ದಾಗ ಕಸಿಗೆ ಸಾಕಷ್ಟು ತರಬೇತಿ, ಪರಿಣತಿಯ ಅಗತ್ಯವಿದೆ ಎಂದು ಮಕ್ಕಳ ಮೂತ್ರಪಿಂಡ ವಿಭಾಗದ ತಜ್ಞ ಡಾ| ದರ್ಶನ್ ರಂಗಸ್ವಾಮಿ ಅಭಿಪ್ರಾಯಪಟ್ಟರು.
ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೊಸದಾಗಿ ರೂಪುಗೊಂಡಿರುವ ಮಕ್ಕಳ ಮೂತ್ರಪಿಂಡ ವಿಭಾಗವು ಮಕ್ಕಳ ಎಲ್ಲ ಸಂಕೀರ್ಣ ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸಲು ಸುಸಜ್ಜಿತವಾಗಿದೆ. ಡಯಾಲಿಸಿಸ್, ಮೂತ್ರಪಿಂಡದ ಬಯಾಪ್ಸಿ, ಕಿಡ್ನಿ ಕಸಿ ಸೌಲಭ್ಯ ಆಸ್ಪತ್ರೆಯಲ್ಲಿದ್ದು ಕರಾವಳಿ, ಮಧ್ಯ ಕರ್ನಾಟಕದ ರೋಗಿಗಳಿಗೆ ಅಗತ್ಯವಿರುವ ಎಲ್ಲ ಚಿಕಿತ್ಸೆ ಯನ್ನು ಒದಗಿಸುತ್ತಿದೆ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ತಿಳಿಸಿದ್ದಾರೆ.