Advertisement

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಮಕ್ಕಳ ರಕ್ತ ಕ್ಯಾನ್ಸರ್‌ ವಿಭಾಗ ಪ್ರಾರಂಭ

01:29 AM Nov 19, 2019 | Team Udayavani |

ಉಡುಪಿ: ಮಣಿಪಾಲದ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆ ಯಲ್ಲಿ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್‌ (ಪೀಡಿಯಾಟ್ರಿಕ್‌ ಹೆಮಟಾಲಜಿ – ಓಂಕಾಲಜಿ) ವಿಭಾಗದ ಹೊರರೋಗಿ ಮತ್ತು ಸಾಮಾನ್ಯ ವಾರ್ಡನ್ನು ಸೋಮವಾರ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಮುಂಬಯಿ ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ| ಸಿದ್ಧಾರ್ಥ ಲಸ್ಕರ್‌ ಉದ್ಘಾಟಿಸಿದರು.

Advertisement

ಕ್ಯಾನ್ಸರ್‌ ಎನ್ನುವುದು ಸುನಾಮಿ ಇದ್ದ ಹಾಗೆ. ಇಂದಿನ ಈ ವಿಭಾಗದ ಆರಂಭವು ಕ್ಯಾನ್ಸರ್‌ ನಿರ್ವಹಣೆಗೆ ಒಂದು ಉತ್ತಮ ಹೆಜ್ಜೆಯಾಗಿದೆ. ರೋಗಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಜನರು ಕ್ಯಾನ್ಸರ್‌ ಮುಕ್ತರಾಗಿ ಜೀವನ ನಡೆಸಬೇಕು ಎಂದು ಡಾ| ಸಿದ್ಧಾರ್ಥ ಹೇಳಿದರು.

ಗುಣಪಡಿಸಲು ಸಾಧ್ಯ
ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅಧ್ಯಕ್ಷೀಯ ಭಾಷಣದಲ್ಲಿ ಕ್ಯಾನ್ಸರ್‌ ಎಂದರೆ ರೋಗಿಗಳಿಗೆ ಮರಣದಂಡನೆಯಲ್ಲ. ವೈದ್ಯಕೀಯ ವಿಜ್ಞಾನವು ಈಗ ಬಹಳ ಮುಂದುವರಿ ದಿದೆ. ಈಗ ಕ್ಯಾನ್ಸರಿಗೆ ಔಷಧ ಲಭ್ಯವಿದೆ. ಪ್ರಾರಂಭಿಕ ಹಂತದಲ್ಲೇ ಪತ್ತೆಯಾದರೆ ಅದನ್ನು ಗುಣಪಡಿ
ಸಲು ಸಾಧ್ಯವಿದೆ ಎಂದರು.

ಕುಲಪತಿ ಡಾ| ಎಚ್‌. ವಿನೋದ ಭಟ್‌ ಅವರು ಒಂದು ವಿಭಾಗದಲ್ಲಿ ವಿವಿಧ ವಿಶೇಷತೆಗಳು ಅಡಕಗೊಳ್ಳುವುದು ಇಂದಿನ ಬೇಡಿಕೆಯಾಗಿದೆ. ಅದಕ್ಕೆ ಪೂರಕವಾಗಿ ಈ ಹೊಸ ವಿಭಾಗ ಆರಂಭವಾಗಿದೆ ಎಂದರು. ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಮಾತನಾಡಿ, ಕ್ಯಾನ್ಸರ್‌ಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಈಗ ಮಣಿಪಾಲದಲ್ಲೇ ಇದೆ ಎಂದರು.

ಸಹಕುಲಪತಿಗಳಾದ ಡಾ| ಪಿಎಲ್‌ಎನ್‌ಜಿ ರಾವ್‌, ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಸಿ.ಜಿ. ಮುತ್ತಣ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ| ಶ್ರೀಕಿರಣ ಹೆಬ್ಟಾರ್‌ ಮತ್ತು ಪ್ರಶಾಮಕ ಆರೈಕೆ ವಿಭಾಗದ ಮುಖ್ಯಸ್ಥ ಡಾ| ನವೀನ್‌ ಸಾಲಿನ್ಸ್ ಉಪಸ್ಥಿತರಿದ್ದರು. ಕೆಎಂಸಿ ಡೀನ್‌ ಡಾ| ಶರತ್‌ ಕುಮಾರ್‌ ರಾವ್‌ ಸ್ವಾಗತಿಸಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ವಂದಿಸಿದರು.

Advertisement

ನೂತನ ವಿಭಾಗದ ಡಾ| ವಾಸುದೇವ ಭಟ್‌ ಅವರು ಮುಖ್ಯ ಅತಿಥಿಗಳ ಪರಿಚಯ ನೀಡಿದರು. ಡಾ| ಅರ್ಚನಾ ಎಂ.ವಿ. ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next