ಮಣಿಪಾಲ: ಅತ್ಯಂತ ಅಪರೂಪದ ರಕ್ತದ ಗುಂಪು ಹೊಂದಿದ್ದ ಗರ್ಭಿಣಿಯೊಬ್ಬರಿಗೆ ಇಲ್ಲಿಯ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆ್ಯಂಟಿ “ಡಿ’ ಆ್ಯಂಟಿಬಾಡಿ ಇರುವುದನ್ನು ಪರೀಕ್ಷಿಸಿ, ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ರಕ್ತದ ಗುಂಪು ಒ ನೆಗೆಟಿವ್ ಆಗಿದ್ದ ಹಾಗೂ ಆ್ಯಂಟಿಬಾಡಿ ಇದೆ ಯೆಂದು ಹೇಳಲಾದ ಗರ್ಭಿಣಿಯನ್ನು ಮುಂದಿನ ನಿರ್ವಹಣೆಗಾಗಿ ಕಸ್ತೂರ್ಬಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇಲ್ಲಿನ ರಕ್ತ ಕೇಂದ್ರದಲ್ಲಿ ಪರೀಕ್ಷೆ ಮಾಡಿದಾಗ ಮಹಿಳೆಗೆ ಅತ್ಯಂತ ಅಪ ರೂಪದ “ಬಾಂಬೆ ನೆಗೆಟಿವ್’ ರಕ್ತದ ಗುಂಪು ಇರುವುದು ಪತ್ತೆಯಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ರಕ್ತ ಕೇಂದ್ರದ ಮುಖ್ಯಸ್ಥೆ ಡಾ| ಶಮೀ ಶಾಸ್ತ್ರೀ, ದೇಶದಲ್ಲಿ ಈ ಅಪರೂಪದ ರಕ್ತದ ಗುಂಪಿನ ಕೆಲವೇ ದಾನಿಗಳಿರುವುದರಿಂದ ರಕ್ತ ವರ್ಗಾ ವಣೆ ತಜ್ಞರು ಮತ್ತು ಪ್ರಸೂತಿ ತಜ್ಞರಿಗೆ ಇದರ ನಿರ್ವಹಣೆ ಸವಾಲಾಗಿತ್ತು. ಗರ್ಭಿಣಿಯ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿ ಸಿ ಸ್ವಯಂ ರಕ್ತ ಸಂಗ್ರ ಹಿಸಲಾಯಿತು ಎಂದರು. .
ಎರಿಥ್ರೋಪೊಯೆಟಿನ್ ಚುಚ್ಚು ಮದ್ದು ಮತ್ತು ಕಬ್ಬಿಣಾಂಶದ ಚುಚ್ಚು ಮದ್ದುಗಳನ್ನು ಪ್ರಸವಪೂರ್ವ ಹಿಮೋಗ್ಲೋಬಿನ್ ಸುಧಾರಿಸಲು ಬಳಸಲಾಯಿತು. ಭ್ರೂಣಕ್ಕೆ ರಕ್ತ ಪೂರೈಕೆ ಕಡಿಮೆಮತ್ತು ಭ್ರೂಣದ ಬೆಳವಣಿಗೆಯ ನಿರ್ಬಂಧ (ಎಫ್ಜಿಆರ್) ಕಾರಣದಿಂದ ತಾಯಿಯ ಆರೈಕೆಯು ಮತ್ತಷ್ಟು ಜಟಿಲವಾಗಿತ್ತು. ತಾಯಿಯಲ್ಲಿದ್ದ ಪ್ರತಿಕಾಯಗಳ ಕಾರಣದಿಂದ ಭ್ರೂಣವು ರಕ್ತಹೀನತೆಯ ಅಪಾಯ ದಲ್ಲಿತ್ತು. ಎಂದು ಹೇಳಿದರು.
ಫೀಟಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ| ಅಖಿಲಾ ವಾಸುದೇವ ಅವರು ಭ್ರೂಣದ ಮೇಲೆ ನಿರಂತರ ನಿಗಾ ಇರಿಸಿ ಪ್ರಸವಪೂರ್ವ ಆರೈಕೆ ನಿರ್ವಹಿಸಿ, ರಕ್ತರಹಿತ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದರು.
ಆಸ್ಪತ್ರೆಯ ಸಿಇಒ ಡಾ| ಆನಂದ ವೇಣುಗೋಪಾಲ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಅವರು ವೈದ್ಯರ ತಂಡವನ್ನು ಅಭಿನಂದಿಸಿದರು.