Advertisement

ಮಣಿಪಾಲ - ಕಡಿಯಾಳಿ ರಸ್ತೆ: ಸೂಚನಾ ಫ‌ಲಕ ಆಳವಡಿಕೆ

12:00 AM May 11, 2019 | Sriram |

ಉಡುಪಿ: ಮಣಿಪಾಲ - ಉಡುಪಿ ನಿರ್ಮಾಣದ ಹಂತದಲ್ಲಿ ರುವ ರಾ.ಹೆ. 169ಎ ಕಾಮಗಾರಿಯಲ್ಲಿ ರಸ್ತೆ ಸುರಕ್ಷಾ ಕ್ರಮ ಕೈಗೊಳ್ಳದೆ ಇರುವುದರಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತು ಮೇ.7ರಂದು ಉದಯವಾಣಿ ಪ್ರತಿಕೆಯಲ್ಲಿ ವರದಿ ಪ್ರಕಟವಾಗುತ್ತಿದಂತೆ ಎಚ್ಚೆತ್ತುಕೊಂಡ ಗುತ್ತಿಗೆದಾರರು ಮಣಿಪಾಲದಿಂದ ಕಡಿಯಾಳಿಯ ವರೆಗೆ ಕಾಮಗಾರಿ ಪ್ರಗತಿಯ ಲ್ಲಿರುವ ಕುರಿತು ಸೂಚನಾ ಫ‌ಲಕ ಅಳವಡಿಸಿದ್ದಾರೆ.

Advertisement

ವರದಿ ಪ್ರಕಟವಾದ ದಿನ ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಹಾಗೂ ಎಸ್ಪಿ ನಿಶಾ ಜೇಮ್ಸ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ರಸ್ತೆ ಸುರಕ್ಷಾ ಕ್ರಮಗಳು ಮತ್ತು ಕಾಮಗಾರಿಯನ್ನು ಮಳೆಗಾಲದ ಒಳಗೆ ಪೂರೈಸುವಂತೆ ರಾ.ಹೆ. ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದಂತೆ ಸೂಚನಾ ಫ‌ಲಕ ಅಳವಡಿಸಲಾಗಿದೆ.

ಗುತ್ತಿಗೆದಾರರು ಕಾಮಗಾರಿ ಸಂದರ್ಭ ರಸ್ತೆ ಸುರಕ್ಷಾ ಕ್ರಮ ಕೈಗೊಳ್ಳದ ಹಿನ್ನೆಲೆ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸ್ಥಳೀಯರಿಗೆ ಭೀತಿ ಮೂಡಿಸಿತ್ತು. ಇದೀಗ ಕಾಮಗಾರಿ ಸ್ಥಳದಲ್ಲಿ ಹಾಕಿರುವ ಸೂಚನಾಫ‌ಲಕ ವಾಹನ ಸವಾರರಲ್ಲಿ ಆತಂಕ ಕಡಿಮೆ ಮಾಡಿದೆ.

ಮಣಿಪಾಲದ ಎಂಐಟಿ, ಟೈಗರ್‌ ಸರ್ಕಲ್‌, ಎಂಜೆಸಿ ಕಾಲೇಜು, ಸಿಂಡಿಕೇಟ್‌ ಸರ್ಕಲ್‌, ಲಕ್ಷ್ಮೀಂದ್ರ ನಗರ, ಇಂದ್ರಾಳಿ, ಎಂಜಿಎಂ, ಕಡಿಯಾಳಿಯಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ “ಎಚ್ಚರಿಕೆ ಕಾಮಗಾರಿ ಪ್ರಗತಿಯಲ್ಲಿದೆ ನಿಧಾನವಾಗಿ ಚಲಿಸಿ’ ಎನ್ನುವ ಸೂಚನಾಫ‌ಲಕ ಆಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next