Advertisement

ಮಣಿಪಾಲ ದೇಶದ ಹೆಮ್ಮೆ: ಪಾಟೀಲ್‌

10:04 AM Aug 05, 2019 | Team Udayavani |

ಉಡುಪಿ: ದೇಶ ಮಣಿಪಾಲದ ಬಗ್ಗೆ ಹೆಮ್ಮೆಪಡುತ್ತಿದೆ. ಏಕೆಂದರೆ ವಿಶ್ವಾದ್ಯಂತ 500ರೊಳಗೆ ಸ್ಥಾನ ಪಡೆದಿ ರುವ ಏಕೈಕ ವಿಶ್ವವಿದ್ಯಾಲಯ ಮಾಹೆ ಮಣಿಪಾಲ ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.  ಅವರು ರವಿವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಥಾಪನೆಗೊಂಡಿ ರುವ ಸುಧಾರಿತ ಯೂರೋ ಡೈನಾಮಿಕ್‌ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಟಿಎಂಎ ಪೈ ಅವರು ಮಣಿಪಾಲ ಸಮೂಹವನ್ನು ಉತ್ತಮ ಮತ್ತು ಮಾದರಿ ಸಂಸ್ಥೆಯಾಗಿ ರೂಪಿಸಿದರು. ಹೀಗಾಗಿ ಮಣಿಪಾಲ ವಿವಿ ದೂರದೃಷ್ಟಿಯ ನಾಯಕತ್ವ ಮತ್ತು ಶ್ರಮಜೀವಿಗಳನ್ನು ಕೆಲಸಗಾರರನ್ನಾಗಿ ಪಡೆದುಕೊಂಡಿದೆ ಎಂದು ಪಾಟೀಲ್‌ ಹೇಳಿದರು.

ಯುರೋಡೈನಾಮಿಕ್‌ ಪ್ರಯೋ ಗಾಲಯವು ಮಣಿಪಾಲದ ಅತ್ಯಾಧುನಿ ಕತೆಗೆ ಹೊಸ ಸೇರ್ಪಡೆ ಎಂದು ಕುಲಪತಿ ಡಾ| ಎಚ್‌. ವಿನೋದ ಭಟ್‌ ನುಡಿದರು.
ಸಹ ಕುಲಪತಿ ಡಾ| ಪೂರ್ಣಿಮಾ ಬಿ. ಬಾಳಿಗಾ ಯುರೋಡೈನಾಮಿಕ್ಸ್‌ನ
ಪ್ರಮಾಣಿತ ಕಾರ್ಯವಿಧಾನ ಸೂಚಿ ಬಿಡುಗಡೆ ಮಾಡಿದರು. ಕೆಎಂಸಿಯ ಡೀನ್‌ ಡಾ| ಶರತ್‌ ಕೆ. ರಾವ್‌ ಸ್ವಾಗತಿಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ವಂದಿಸಿದರು. ಡಾ| ಅಕ್ಷಯ ಕೃಪಲಾನಿ ನಿರ್ವಹಿಸಿದರು.

ಮೂತ್ರಾಂಗವ್ಯೂಹದ ಸಂಕೀರ್ಣ ಸಮಸ್ಯೆ ಪರಿಹರಿಸಲು ಈ ಪ್ರಯೋಗಾಲಯ ಸಹಕಾರಿ ಎಂದು ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗದ ಮುಖ್ಯಸ್ಥ ಡಾ| ಅರುಣ್‌ ಚಾವ್ಲಾ ಪ್ರಸ್ತಾವನೆಯಲ್ಲಿ ಹೇಳಿದರು.

“200 ಶ್ರೇಯಾಂಕದೊಳಗೆ ಮಾಹೆ-ಗುರಿ’
ಅಧ್ಯಕ್ಷತೆ ವಹಿಸಿದ್ದ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌.
ಬಲ್ಲಾಳ್ ಮಾತನಾಡಿ, ಮಣಿಪಾಲ ಆಸ್ಪತ್ರೆಯ ಮೂತ್ರ ಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗ ದೇಶದಲ್ಲಿಯೇ ಶ್ರೇಷ್ಠವಾಗಿದ್ದು, ಅತ್ಯಾಧು ನಿಕ ಉಪಕರಣಗಳನ್ನು ಹೊಂದಿದೆ. ಜೀವನಶೈಲಿ ಕಾಯಿಲೆಯಿಂದ ಪ್ರಭಾವಿತವಾದ ಅಂಗಗಳಲ್ಲಿ ಮೂತ್ರಪಿಂಡ ಕೂಡ ಒಂದು. ಇದಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಯುರೋಡೈನಾಮಿಕ್‌ ಪ್ರಯೋಗಾ ಲಯದ ಸಹಾಯದಿಂದ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಬಹುದು. ಜಾಗತಿಕವಾಗಿ ಮಾಹೆಯನ್ನು ಅಗ್ರ 200 ಶ್ರೇಯಾಂಕಿತ ಸಂಸ್ಥೆಗಳಲ್ಲಿ ಒಂದಾಗಿ ಮಾಡುವುದು ನಮ್ಮ ಉದ್ದೇಶ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next