ಬ್ಲಾಕ್ ಮಣಿಪಾಲ ಸಂಸ್ಥೆಗಳ ಸಂಸ್ಥಾಪಕ ಡಾ|ಟಿಎಂಎ ಪೈಯವರ 126ನೆಯ ಜನ್ಮದಿನವಾದ ಎ. 30ರಂದು ಉದ್ಘಾಟನೆಗೊಂಡು ಕಾರ್ಯಾರಂಭಗೊಂಡಿದೆ.
Advertisement
ಹೊಸ ಬ್ಲಾಕ್‌ನಲ್ಲಿ 10 ಹೊರರೋಗಿ ಸಮಾಲೋಚನೆ ಕೊಠಡಿಗಳು, 34 ಡಬಲ್ ಆಕ್ಯುಪೆನ್ಸಿ ಕೊಠಡಿಗಳು, 75 ಖಾಸಗಿ ಕೊಠಡಿಗಳು, 4 ಪ್ರಮುಖ ಸುಧಾರಿತ ಅತ್ಯಾಧುನಿಕ ಆಪರೇಷನ್ ಥಿಯೇಟರ್‌ಗಳು, 4 ಪ್ರೀಮಿಯರ್ ಸೂಟ್ ಕೊಠಡಿ, 4 ಶಸ್ತ್ರಚಿಕಿತ್ಸಾ ಪೂರ್ವ ಹಾಸಿಗೆಗಳು, 4 ಶಸ್ತ್ರ ಚಿಕಿತ್ಸಾ ಅನಂತರದ ಕೊಠಡಿಗಳು, 14 ತೀವ್ರ ನಿಗಾ ಘಟಕ ಹಾಸಿಗೆಗಳು, 10 ಎಚ್‌ಡಿಯು ಹಾಸಿಗೆಗಳು ಮತ್ತು 16 ಹಾಸಿಗೆಗಳ ದಿನದ ಆರೈಕೆ (ಡೇ ಕೇರ್) ಘಟಕ ಹೀಗೆ ಹೊಸ ಬ್ಲಾಕ್‌ನಲ್ಲಿ ಒಟ್ಟು 161 ವಿಶೇಷ ಒಳರೋಗಿ ಹಾಸಿಗೆಗಳ ಸೌಲಭ್ಯವಿದೆ.
Related Articles
Advertisement
ಇಂಟರ್ವೆನ್ಶನಲ್ ರೇಡಿಯಾಲಜಿ ಕಾರ್ಯವಿಧಾನಗಳಿಗೆ ಉನ್ನತ-ಮಟ್ಟದ ಬೈ-ಪ್ಲೇನ್ ಕ್ಯಾಥ್ ಲ್ಯಾಬ್ ಸೌಲಭ್ಯವಿದೆ. ತಜ್ಞ ವೈದ್ಯರೊಂದಿಗೆ ಸಮಾಲೋಚನ ವೇಳೆಯನ್ನು ನಿಗದಿಪಡಿಸಲು ಆನ್‌ಲೈನ್ ಮೂಲಕ ಕಾದಿರಿಸಬಹುದು, ಹೀಗಾಗಿ ಹೊರರೋಗಿ ವಿಭಾಗದಲ್ಲಿಯೂ ಕಾಯಬೇಕಾದ ಅಗತ್ಯವಿರುವುದಿಲ್ಲ.
ಇಡೀ ಬ್ಲಾಕ್ ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಣದಿಂದ ಕೂಡಿದೆ. ಹೊಸ ಬ್ಲಾಕ್ ತಳ ಅಂತಸ್ತು ಮತ್ತು ಐದು ಮಹಡಿಗಳನ್ನು ಒಳಗೊಂಡಿದೆ. ವಿದೇಶಿ ರೋಗಿಗಳಿಗೆ ಒಂದೇ ಕಡೆ ವೈದ್ಯಕೀಯ ಮತ್ತು ಆಡಳಿತಾತ್ಮಕ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡುವ, ವಿಶೇಷವಾದ ಅಂತಾರಾರಾಷ್ಟ್ರೀಯ ರೋಗಿಗಳ ಲಾಂಜ್‌ನೊಂದಿಗೆ ಅಂತಾರಾಷ್ಟ್ರೀಯ ರೋಗಿಗಳಿಗೆ ಚಿಕಿತ್ಸಾ ಕ್ರಮ ಪೂರೈಸುವ ಸೌಲಭ್ಯಗಳನ್ನು ಹೊಸ ಬ್ಲಾಕ್ ಹೊಂದಿದೆ.