ಬೆಂಗಳೂರು: ದೇಶದ 2ನೇ ಅತಿ ದೊಡ್ಡ ಆರೋಗ್ಯ ಸೇವೆಯ ಜಾಲವನ್ನು ಹೊಂದಿರುವ ಮಣಿ ಪಾಲ ಹಾಸ್ಪಿಟಲ್ ಬುಧವಾರ ಎಎಂಆರ್‌ಐ ಹಾಸ್ಪಿ ಟಲ್ಸ್ ಲಿಮಿಟೆಡ್‌ನಲ್ಲಿ ಶೇ.84 ರಷ್ಟು ಪಾಲು ದಾರಿಕೆ ಪಡೆದುಕೊಂಡಿದೆ. ಇದರೊಂದಿಗೆ, ಮಣಿಪಾಲ್ ಆಸ್ಪತ್ರೆ ಪೂರ್ವ ಭಾರತ ಪ್ರದೇಶಕ್ಕೆ ತನ್ನ ಆರೋಗ್ಯ ಸೇವೆಯನ್ನು ವಿಸ್ತರಿಸಿಕೊಂಡಿದೆ.
ಎಎಂ ಆರ್‌ಐ ಆಸ್ಪತ್ರೆಯ ವೈದ್ಯಕೀಯ ಪರಿಣಿತಿ ಮತ್ತು ಮೂಲ ಸೌಕರ್ಯಗಳು ಹಾಗೂ ಮಣಿಪಾಲ್ ಆಸ್ಪತ್ರೆಯ ಅತಿ ದೊಡ್ಡ ಜಾಲ ಗಳ ಸಮ್ಮಿಲನ ದಿಂದಾಗಿ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಿದೆ.
ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ ಅಧ್ಯಕ್ಷ ಡಾ. ರಂಜನ್ ಪೈ ಮಾತನಾಡಿ, ಎಎಂಆರ್‌ಐ ಹಾಸ್ಪಿಟಲ್ಸ್ ಲಿಮಿಟೆಡ್‌ನಲ್ಲಿ ಶೇ.84ರಷ್ಟು ಪಾಲುದಾರಿಕೆ ಪಡೆದುಕೊಂಡಿದೆ. ಇದೀಗ ಮಣಿಪಾಲ ಹಾಸ್ಪಿಟಲ್ಸ್‌ನ ಆರೋಗ್ಯ ಸೇವೆ ಭುವನೇಶ್ವರಕ್ಕೆ ವಿಸ್ತರಣೆಯಾಗುವ ಮೂಲಕ ತನ್ನ ಜಾಲವನ್ನು ದೇಶದ 17ನೇ ನಗರಕ್ಕೆ ವಿಸ್ತರಿಸಿಕೊಂಡಿದೆ ಎಂದರು.
ಇಮಾಮಿ ಗ್ರೂಪ್ ನಿರ್ದೇಶಕ ಅದಿತ್ಯ ಅಗರವಾಲ್ ಹಾಗೂ ಮನೀಶ್ ಗೋಯೆಂಕ ಮಾತನಾಡಿ, ಇಮಾಮಿ ಸಂಸ್ಥೆ ನಮ್ಮ ಮೂಲ ವ್ಯವಹಾರದ ಮೇಲೆ ಗಮ ನಕೇಂದ್ರೀಕರಿಸುತ್ತಿರುವುದರಿಂದ ಎಎಂಆರ್‌ಐ ಆಸ್ಪತ್ರೆಯಲ್ಲಿನ ಪಾಲುದಾರಿಕೆಯನ್ನು ಹಿಂತೆಗೆದುಕೊಂಡಿದ್ದೇವೆ. ಇದು ನಮ್ಮ ಸಂಸ್ಥೆಯ ಮಹತ್ವದ ನಿರ್ಧಾರವಾಗಿದೆ. ಪ್ರಸ್ತುತ ಎಎಂಆರ್‌ಐ ಆಸ್ಪ ತ್ರೆಯ ಶೇ.15ರಷ್ಟು ಪಾಲು ದಾರಿಕೆ ನಮ್ಮಲ್ಲಿದೆ. ಪಶ್ಚಿಮ ಬಂಗಾಲ ಸರ್ಕಾರವು ಎಎಂಆರ್‌ಐ ಆಸ್ಪತ್ರೆಗಳಲ್ಲಿ ಶೇ.1ರಷ್ಟು ಪಾಲು ದಾರಿಕೆ ಹೊಂದಿದೆ ಎಂದರು.
ಎಎಂಆರ್‌ಐ ಭಾರತದಲ್ಲಿ ಅತ್ಯುತ್ತಮವಾದ ಆರೋಗ್ಯ ಸೇವೆಗಳೊಂದಿಗೆ ಜನರಿಗೆ ಹತ್ತಿರವಾಗಿದೆ. ಇದನ್ನು ನಾವೆಂದೂ ವ್ಯಾಪಾ ರದ ದೃಷ್ಟಿಯಿಂದ ನೋಡಿಲ್ಲ. ಇಲ್ಲಿನ ವೈದ್ಯರು, ಸಿಬ್ಬಂದಿ ವರ್ಗ ನಿರಂತರವಾಗಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಎಎಂಆರ್‌ಐ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ವಾರ್ಷಿಕ 5 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಪೂರ್ವ ಭಾರತದಲ್ಲಿ ಅತಿದೊಡ್ಡ ಆರೋಗ್ಯ ಸೇವೆ ಪೂರೈಕೆದಾರರ ಜಾಲ ಹೊಂದಿದೆ. ಧಕುರಿಯಾ, ಮುಕುಂದಪುರ ಮತ್ತು ಸಾಲ್ಟ್ ಲೇಕ್, ಒಡಿಶಾದ ಭುನೇಶ್ವರದಲ್ಲಿ 1,200ಕ್ಕೂ ಹೆಚ್ಚಿನ ಹಾಸಿಗೆ, 800 ವೈದ್ಯರು, 5000ಕ್ಕೂ ಅಧಿಕ ಆರೋಗ್ಯ ವೃತ್ತಿಪರರನ್ನು ಒಳಗೊಂಡಿದೆ. 17ನಗರದಲ್ಲಿನ 33 ಆಸ್ಪತ್ರೆಯಲ್ಲಿ 5000 ವೈದ್ಯರು ಹಾಗೂ 20,000 ಉದ್ಯೋಗಿಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.