Advertisement

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

11:57 PM Jun 18, 2024 | Team Udayavani |

ಮಣಿಪಾಲ: ಮಣಿಪಾಲ ಆರೋಗ್ಯ ಕಾರ್ಡ್‌- 2024ರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆನ್‌ಲೈನ್‌ ಅಥವಾ ಏಜೆಂಟರ ಮೂಲಕ ನೋಂದಣಿ ಮಾಡಬಹುದು. ಕಳೆದ ವರ್ಷ 3.60 ಲಕ್ಷ ಮಂದಿ ಸೇವೆ ಪಡೆದಿದ್ದು, 16 ಕೋ.ರೂ. ವರೆಗೂ ರಿಯಾಯಿತಿ ನೀಡಲಾಗಿದೆ. ಈ ಬಾರಿ 4 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಹೇಳಿದರು.

Advertisement

ವಿ.ವಿ.ಯ ಆಡಳಿತ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಆರೋಗ್ಯ ಕಾರ್ಡ್‌ ಇಡೀ ಕುಟುಂಬದ ಸದಸ್ಯರಿಗೆ ಸಮಗ್ರ ಆರೋಗ್ಯ ಪ್ರಯೋ ಜನಗಳನ್ನು ಒದಗಿಸಲಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ದಾರ್ಶನಿಕ ಎಂದು ಗುರುತಿಸಲ್ಪಡುವ ದಿ| ಡಾ| ಟಿಎಂಎ ಪೈ ಅವರ ಸಮಾಜಪರ ನಿಲುವು ಸದಾ ಪ್ರೇರಣೆ. ಡಾ| ರಾಮದಾಸ್‌ ಪೈ ನೇತೃತ್ವ ದಲ್ಲಿ 2000ರಲ್ಲಿ ಪ್ರಾರಂಭವಾದ ಈ ಕಾರ್ಡ್‌ ಪರಿಕಲ್ಪನೆ ಜನರಿಗೆ ಕೈಗೆಟ ಕುವ ದರದಲ್ಲಿ ಆರೋಗ್ಯ ಸೇವೆಯನ್ನು ಕಲ್ಪಿಸುವ ಗುರಿ ಹೊಂದಿದೆ ಎಂದರು.

ಗ್ರಾಹಕಸ್ನೇಹಿ ಗುರಿ: ಡಾ| ಶರತ್‌ ಕುಮಾರ್‌
ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜತೆಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು, ಬಳ್ಳಾರಿ ಮತ್ತು ನೆರೆಯ ಕೇರಳ, ಗೋವಾಕ್ಕೆ ಈ ಕಾರ್ಡ್‌ ಅನ್ನು ವಿಸ್ತರಿಸಲಾಗಿದೆ. 2019ರಲ್ಲಿ ಡಿಜಿಟಲ್‌ ಮಾಡಿದ್ದು, ಮುಂಬರುವ ವರ್ಷಗಳಲ್ಲಿ ಸಂಪೂರ್ಣ ಕಾರ್ಡ್‌ ರಹಿತ ಮತ್ತು ಗ್ರಾಹಕ ಸ್ನೇಹಿ ಆಗಿಸು ವುದಾಗಿ ತಿಳಿಸಿದರು.

ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಲಭ್ಯ
ವೈದ್ಯಕೀಯ ಅಧೀಕ್ಷಕ ಡಾ| ಅವಿ ನಾಶ್‌ ಶೆಟ್ಟಿ ಮಾತನಾಡಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರಿನ ಕೆಎಂಸಿ, ಅತ್ತಾವರದ ಕೆಎಂಸಿ, ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಹಾಗೂ ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ಈ ಕಾರ್ಡ್‌ನ ಲಾಭ ಪಡೆಯಬಹುದು ಎಂದರು.

ಮಾಹೆ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ| ಆನಂದ್‌ ವೇಣುಗೋಪಾಲ್‌, ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್‌ ಉಮಾಕಾಂತ್‌, ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಕೀರ್ತಿ ನಾಥ್‌ ಬಲ್ಲಾಳ್‌, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೆ. ಸಚಿನ್‌ ಕಾರಂತ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

ಕಾರ್ಡ್‌ನ ಸೌಲಭ್ಯಗಳೇನು?
ಮಣಿಪಾಲ ಆರೋಗ್ಯ ಕಾರ್ಡ್‌ಗೆ ಸಂಬಂಧಿಸಿದ ಪೂರ್ಣ ಮಾಹಿತಿ //www.manipalhealthcard.com ನಲ್ಲಿ ಲಭ್ಯವಿದೆ. ಈ ಕಾರ್ಡ್‌ ದಾರರಿಗೆ ತಜ್ಞ ಮತ್ತು ಸೂಪರ್‌ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ ಶೇ.50 ರಷ್ಟು, ರೋಗನಿರ್ಣಯ ಮತ್ತು ಪ್ರಯೋಗಾಲಯ ತನಿಖೆಗಳಲ್ಲಿ ಶೇ.25, ವಿಕಿರಣಶಾಸ್ತ್ರದ ತನಿಖೆಗಳು, ಹೊರರೋಗಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ ಶೇ.20,ಡಯಾಲಿಸಿಸ್‌ನಲ್ಲಿ 100 ರೂ., ಆಸ್ಪತ್ರೆಯ ಔಷಧಾಲಯಗಳ ಔಷಧಗಳ ಮೇಲೆ ಶೇ.10 ಹಾಗೂ ಜನರಲ್‌ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗ‌ಳಲ್ಲಿ (ಕನ್ಸುಮಬೆಲ್ಸ್ ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ) ಶೇ.25 ರಷ್ಟು ರಿಯಾಯಿತಿ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next