Advertisement

Manipal: ಬಿಲ್‌ ನೀಡದೆ ಹೊಟೇಲ್‌ಗೆ ವಂಚನೆ:  ಪ್ರಕರಣ ದಾಖಲು

11:06 PM Dec 10, 2024 | Team Udayavani |

ಮಣಿಪಾಲ: ಕೊಠಡಿ ಬಾಡಿಗೆ ಹಾಗೂ ಸೇವಿಸಿದ್ದ ಆಹಾರದ ಬಿಲ್‌ ನೀಡದೆ ಮಣಿಪಾಲದ ಹೊಟೇಲೊಂದಕ್ಕೆ ವಂಚಿಸಿರುವ ಬಗ್ಗೆ ಬಿಮ್ಸೆಂಟ್ ಜಾನ್‌ (67) ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಣಿಪಾಲದ ಕಂಟ್ರಿ ಇನ್‌ ಹೊಟೇಲ್‌ಗೆ ಡಿ. 7ರಂದು ಬಂದಿದ್ದ ಬಿಮ್ಸೆಂಟ್, ಕೊಠಡಿ ಪಡೆದುಕೊಂಡಿದ್ದ. ಮುಂಗಡ ಹಣವನ್ನು ಡಿ.9ರಂದು ಕೊಡುವುದಾಗಿ ಹಾಗೂ ಡಿ.12ರಂದು ರೂಂ ಬಿಡುವುದಾಗಿ ಮ್ಯಾನೇಜರ್‌ ನಿತಿನ್‌ನಲ್ಲಿ ಹೇಳಿದ್ದ. ಬಳಿಕ ಬಾಡಿಗೆ ಹಾಗೂ ಆಹಾರದ ಬಿಲ್‌ 39,298 ರೂ. ನೀಡದೆ ಪರಾರಿಯಾಗಿದ್ದಾನೆ ಎಂದು ನಿತಿನ್‌ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next