Advertisement

ಮಣಿಪಾಲ: ಡಾ|ಪದ್ಮಾ ರಾವ್‌ ಸ್ಮಾರಕ ಉಪನ್ಯಾಸ

07:40 AM Aug 01, 2017 | Team Udayavani |

ಉಡುಪಿ: ಮಣಿಪಾಲದ ಕೆಎಂಸಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರಜ್ಞರ ಸಮ್ಮೇಳನ ಮತ್ತು ಡಾ|ಎ. ಪದ್ಮಾ ರಾವ್‌ ಸ್ಮಾರಕ ಸ್ನಾತಕೋತ್ತರ ಉಪನ್ಯಾಸ ನಡೆಯಿತು. 46 ಸ್ನಾತಕೋತ್ತರ ಪದವೀಧರರು ಸಂಶೋಧನ ಪ್ರಬಂಧ ಮಂಡಿಸಿದರು, 12 ಅತಿಥಿ ಉಪಾನ್ಯಾಸಕರು ಉಪನ್ಯಾಸ ನೀಡಿದರು. 

Advertisement

ಸಮ್ಮೇಳನದ ಸಂಘಟನ ಸಮಿತಿ ಅಧ್ಯಕ್ಷ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಮುಖ್ಯಸ್ಥ ಡಾ|ಮುರಳೀಧರ ವಿ. ಪೈಯವರು ಹಿಂದೆ ಮಣಿಪಾಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ  ಸಮ್ಮೇಳನ ಈ ಬಾರಿ ರಾಜ್ಯದ ಇತರ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ಪದವೀಧರರಿಗೆ ಅವಕಾಶ ನೀಡಿದೆ. ಮುಂದಿನ ವರ್ಷದಿಂದ ರಾಷ್ಟ್ರ ಮಟ್ಟದ ಪ್ರತಿನಿಧಿಗಳು ಪಾಲ್ಗೊಳ್ಳುವಂತಾಗಲಿ ಎಂದು ಹಾರೈಸಿದರು. 

ಕೇರಳ ತಿರುವಲ್ಲ ಪುಷ್ಪಗಿರಿ ವೈದ್ಯಕೀಯ ಕಾಲೇಜಿನ ಒಬಿಜಿ ಮುಖ್ಯಸ್ಥೆ ಪ್ರೊ|ಶ್ರೀದೇವಿ ಎಸ್‌.ಎನ್‌. ಅವರು ಡಾ|ಎ. ಪದ್ಮಾ ರಾವ್‌ ದತ್ತಿ ಉಪನ್ಯಾಸ (ವಿಷಯ: ಅಕ್ಯೂಟ್‌ ಮೆಟರ್ನಲ್‌ ಮೊರ್ಬಿಡಿಟಿ) ನೀಡಿದರು. ಮುಖ್ಯ ಅತಿಥಿ ಕೆಎಂಸಿ ನಿಯೋಜಿತ ಡೀನ್‌ ಡಾ|ಪ್ರಜ್ಞಾ ರಾವ್‌, ಡಾ|ಎ. ಕೃಷ್ಣ ರಾವ್‌ ಪ್ರೊ|ಶ್ರೀದೇವಿಯವರನ್ನು ಗೌರವಿಸಿದರು. 

ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣದಲ್ಲಿ ಉಡುಪಿ ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರಲು ಡಾ|ಎ. ಪದ್ಮಾ ರಾವ್‌ ಕೊಡುಗೆ ಮಹತ್ತರವಾದುದು. ಇದನ್ನು ವಿವಿಧ ಆರೋಗ್ಯ ಕೇಂದ್ರಗಳನ್ನು (ಆರ್‌ಎಂಸಿಎಚ್‌) ತೆರೆಯುವ ಮೂಲಕ ಅವರು ಸಾಧಿಸಿದರು ಎಂದು ಡಾ|ಪ್ರಜ್ಞಾ ರಾವ್‌ ಹೇಳಿದರು. 

ಡಾ|ಪ್ರತಾಪಕುಮಾರ್‌, ಡಾ|ಶುಭ ಗೀತಾ ಡಾ|ಪದ್ಮಾ ರಾವ್‌ ಕುರಿತು ಮಾತನಾಡಿದರು. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ|ಕ| ದಯಾನಂದ ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು. ಡಾ|ಶ್ರೀಪಾದ ಹೆಬ್ಟಾರ್‌ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next