ಉಡುಪಿ: ಮಣಿಪಾಲದ ಆರ್‌ಎಸ್‌ಬಿ ಸಭಾಭವನದ ಒಂದನೇ ಮಹಡಿಯಲ್ಲಿರುವ ಸಾರಸ್ವತ ಸೌಹಾರ್ದ ಸಹಕಾರಿಯ ಪ್ರಧಾನ ಕಚೇರಿಯಲ್ಲಿ ಸಾರಸ್ವತ ಸೌಹಾರ್ದ ಸಹಕಾರಿ ಮಣಿಪಾಲ ಇದರ ಉದ್ಘಾಟನೆ ಗುರುವಾರ ನಡೆಯಿತು.
ಮಂಗಳೂರು ಮತ್ತು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ, ಆರ್‌ಎಸ್‌ಬಿ ಸಂಘದ ಅಧ್ಯಕ್ಷ ಎಂ. ಗೋಕುಲದಾಸ್ ನಾಯಕ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಮ್ಮ ಸಮಾಜದ ಆಸ್ತಿಯಾಗಿರುವ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಎಳ್ಳಾರೆ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ ರಮಾನಂದ ನಾಯಕ್ ಶುಭ ಹಾರೈಸಿದರು.
ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ಅಧ್ಯಕ್ಷ ವಾಸುದೇವ ಕೃಷ್ಣ ನಾಯಕ್ ಬೈರಂಪಳ್ಳಿ, ಉಪಾಧ್ಯಕ್ಷ ಮನೋಹರ ಮರಾಠೆ ಕೊಡಿಬೆಟ್ಟು, ಸಿಇಒ ಭುವನೇಶ್ ಪ್ರಭು, ನಿರ್ದೇಶಕರಾದ ಅಭಿನವ ಆರ್. ನಾಯಕ್ ಬನ್ನಂಜೆ, ಭವಾನಿ ಶಂಕರ್ ಕಾರ್ಕಳ, ದೇವೇಂದ್ರ ನಾಯಕ್ ಸೂಡ, ದೇವೇಂದ್ರ ವಾಗ್ಲೆ ಭೈರಂಜೆ, ಗಣಪತಿ ನಾಯಕ್ ಮಂಚಿ, ಪಾಂಡುರಂಗ ನಾಯಕ್ ಮಾಣಿಬೆಟ್ಟು, ರಾಮದಾಸ ನಾಯಕ್ ನಗರಬೆಟ್ಟು, ಶ್ರೀನಿವಾಸ ನಾಯಕ್ ಕೆಳಪರ್ಕಳ, ಗೀತಾ ಎಸ್. ಪ್ರಭು ಪುತ್ತೂರು, ಜ್ಯೋತಿ ಡಿ. ಕಾಮತ್ ದೇವಿನಗರ, ಸುಮಂಗಲಾ ಪಿ. ನಾಯಕ್ ಅಡಪಾಡಿ ಉಪಸ್ಥಿತರಿದ್ದರು.
ಎಸ್. ರಮಾನಾಥ ನಾಯಕ್ ದಂಪತಿ ಪೂಜಾ ಕಾರ್ಯ ನೆರವೇರಿಸಿದರು. ವಿವಿಧ ಸಹಕಾರಿಯ ಗಣ್ಯರು, ಸಿಬಂದಿ ಭಾಗವಹಿಸಿದ್ದರು.
ಮಣಿಪಾಲದ ಸಹಕಾರಿ ಸಂಸ್ಥೆಗೆ ರಾಜ್ಯ ಅಬಕಾರಿ ಸಚಿವ ನಾಗೇಶ್ ಎಚ್. ದಂಪತಿ ಭೇಟಿ ನೀಡಿ, ಈ ಸಹಕಾರಿಯು ಮತ್ತಷ್ಟು ಬೆಳೆದು ಸಹಕಾರಿ ತಣ್ತೀ ಜನರೆಡೆಗೆ ತಲುಪಲಿ. ಜತೆಗೆ ಮತ್ತಷ್ಟು ಶಾಖೆಗಳನ್ನು ತೆರೆದು ಬಲಿಷ್ಠವಾಗಲಿ ಎಂದು ಹಾರೈಸಿದರು.