ಉಡುಪಿ: ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡು ವುದಕ್ಕಾಗಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಸಿನಿ ಟಾಟಾ ಟ್ರಸ್ಟ್, ಜಮ್ಶೆಡ್‌ಪುರ (ಕಲೆಕ್ಟಿವ್ಸ್ ಫಾರ್ ಇಂಟಿಗ್ರೇಟೆಡ್ ಲೈವ್ಲಿಹುಡ್ ಇನಿಶಿಯೇಟಿವ್ಸ್) ಯೋಜನೆಯ ಮೂಲಕ ಮೇಘಾಲಯದ ಸೋಹ್ರಾ ದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಇ-ಸೈಕಲ್ ಚಾರ್ಜಿಂಗ್ ಸ್ಟೇಷನ್ ಸೇವೆಯನ್ನು ಪ್ರಾರಂಭಿಸಲಾಗಿದೆ.
ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯ ಶಾಸಕ ಗಾವಿನ್ ಮಿಗೆನ್ ಮೈಲಿಯಂ ಅವರು ಉದ್ಘಾಟಿಸಿ, ಈ ಯೋಜನೆಯು ಸೋಹ್ರಾ ಗ್ರಾಮದ ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆ ನೀಡುವುದರ ಜತೆಗೆ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಲಪಾತ, ಗಿರಿ ಶಿಖರಗಳನ್ನು ಸಂದರ್ಶಿಸಲು ಪ್ರವಾಸಿಗರಿಗೆ ಸುಲಭ ಸಾಧ್ಯವಾಗುವಂತೆ ಹಲವಾರು ಇ-ಸೈಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಪ್ರವಾಸಿ ತಾಣಗಳ ಉದ್ದಕ್ಕೂ ಆಯಕಟ್ಟಿನ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿದೆ. ಪ್ರವಾಸಿ ಗರು ಸುಲಭವಾಗಿ ಇ-ಸೈಕಲ್‌ಗಳನ್ನು ಬಾಡಿಗೆಗೆ ಪಡೆದುಕೊಂಡು ಹಿಂದಿರುಗಿಸಲು ಇದು ಅನುವು ಮಾಡಿಕೊಡುತ್ತದೆ. ಸೆ. 27ರಂದು ಸೊಹ್ರಾ ಗ್ರಾಮದಲ್ಲಿ ಮೊದಲ ಇ-ಸೈಕಲ್ ಸರ್ಕ್ಯೂಟ್ ಸೇವೆಗಳನ್ನು ಪ್ರಾರಂಭಿಸಿತು.
ಪ್ರವಾಸೋದ್ಯಮಕ್ಕೆ ಪೂರಕವಾದ ಸ್ಟಾರ್ಟ್‌ಅಪ್ ಶಾಂಘೈ ಹೆಸರಿನ ಸೇವೆಯನ್ನು ಸ್ಥಳೀಯ ಸೌರಮಂಡಲ ಫೌಂಡೇಶನ್ ಮತ್ತು ಪ್ರೈಮ್- ಸೌರಮಂಡಲ ರೂರಲ್ ಎಂಟರ್‌ಪ್ರನ್ಯೂರ್‌ಶಿಪ್ ಫೆಲೋಶಿಪ್ (ಪಿಎಸ್‌ಆರ್‌ಇಎಫ್) ಸಂಸ್ಥೆಗಳು, ಸಿನಿ ಟಾಟಾ ಟ್ರಸ್ಟ್, ಜಮ್ಶೆಡ್‌ಪುರ ಮತ್ತು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸಹಕಾರದಿಂದ ಅನುಷ್ಠಾನಗೊಳಿಸಿವೆ.