Advertisement
ಮಣಿಪಾಲದ ಎಂಐಟಿ ಬಳಿ ಇರುವ ಬಸ್ ನಿಲ್ದಾಣದಲ್ಲಿ ವಾಹನಗಳನ್ನೇ ನಿಲ್ಲಿಸುವ ಕಾರಣ ಪ್ರಯಾಣಿಕರು ಮಳೆ-ಬಿಸಿಲಿನಲ್ಲಿಯೇ ನಿಲ್ಲುವಂತಾಗಿದೆ.ಆಸ್ಪತ್ರೆಗೆ ಭೇಟಿ ನೀಡುವವರು, ಶಾಪಿಂಗ್ ಮಾಡುವವರು, ವಿದ್ಯಾರ್ಥಿಗಳು, ಸ್ಥಳೀಯ ನೌಕರರು ಇಲ್ಲಿಯೇ ವಾಹನಗಳನ್ನು ನಿಲ್ಲಿಸುವ ಘಟನೆ ದಿನನಿತ್ಯ ನಡೆಯುತ್ತಿದೆ. ಹಲವಾರು ಸಮಯದಿಂದ ಇಲ್ಲಿ ಈ ಸಮಸ್ಯೆ ಕಂಡುಬರುತ್ತಿದ್ದು, ಅನಂತರ ಇಲ್ಲಿ ಪೊಲೀಸರು ಎಚ್ಚರಿಕೆ ನೀಡುವ ಕೆಲಸ ನಡೆಸುತ್ತಿದ್ದರು. ಆದರೆ ಈಗ ಮತ್ತೆ ಇಲ್ಲಿ ನಿಯಮಾವಳಿ ಉಲ್ಲಂಘನೆ ಪುನರಾವರ್ತನೆಯಾಗುತ್ತಿದೆ.
ಮಣಿಪಾಲದಿಂದ ಉಡುಪಿಯತ್ತ ತೆರಳುವಾಗ ಸಿಗುವ ಸಿಂಡಿಕೇಟ್ ಸರ್ಕಲ್ ಬಳಿಯ ಬಸ್‌ಸ್ಟಾಂಡ್ ಬಳಿ ಬಸ್‌ಗಳು ನಿಲ್ಲದೆ ಎದುರಿನ ಮನೋಹರ್ ವೈನ್‌ಶಾಪ್ ಬಳಿ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಪರಿಣಾಮ ಈ ಬಸ್ ತಂಗುದಾಣ ವಾಹನ ನಿಲ್ದಾಣವಾಗಿ ಬದಲಾಗಿದೆ. ತಂಗುದಾಣದ ಪಕ್ಕವೇ ಎರಡು ಹೊಟೇಲ್‌ಗಳಿದ್ದು, ಅಲ್ಲಿಗೆ ಬರುವ ಗ್ರಾಹಕರು ಇದರ ಎದುರು ಭಾಗ ಹಾಗೂ ದ್ವಿಚಕ್ರ ವಾಹನಗಳನ್ನು ಒಳಭಾಗದಲ್ಲಿ ನಿಲ್ಲಿಸಲಾಗುತ್ತಿದೆ. ಮಳೆ ಸುರಿಯುವ ವೇಳೆ ಹಲವು ಮಂದಿ ದ್ವಿಚಕ್ರ ಸಹಿತ ತಂಗುದಾಣದ ಒಳಪ್ರವೇಶಿಸಿ ವಿಶ್ರಾಂತಿ ಪಡೆಯುವುದೂ ಇದೆ!
Related Articles
ಹೆದ್ದಾರಿ ಕಾಮಗಾರಿ ವೇಳೆ ಬಸ್‌ಸ್ಟಾಂಡ್‌ಗಳನ್ನು ಕೆಲವು ಬಸ್‌ಸ್ಟಾಂಡ್‌ಗಳ ಸ್ಥಳವನ್ನು ಬದಲಾಯಿಸಿದ ಕಾರಣ ಬಸ್‌ಗಳು ಆ ತಂಗುದಾಣದ ಎದುರು ನಿಲ್ಲದೆ ಜನರು ಇದ್ದಲ್ಲಿ ಮಾತ್ರ ಬಸ್ ನಿಲ್ಲಿಸುತ್ತಿದ್ದಾರೆ. ಈ ಬಗ್ಗೆ ಪ್ರಯಾಣಿಕರು ಹಾಗೂ ಬಸ್ ನಿರ್ವಾಹಕರೊಂದಿಗೆ ಹಲವಾರು ಬಾರಿ ಜಗಳ ನಡೆಯುವುದೂ ಉಂಟು. ಈ ಬಗ್ಗೆ ಬಸ್ ಮಾಲಕರು ಸಂಬಂಧಪಟ್ಟ ಚಾಲಕರು ಹಾಗೂ ನಿರ್ವಾಹಕರಿಗೆ ಸ್ಪಷ್ಟ ಸೂಚನೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement
ಸೂಕ್ತ ಕ್ರಮಬಸ್ಸ್ಟಾಂಡ್ ಇರುವ ಜಾಗದಲ್ಲಿಯೇ ಬಸ್‌ಗಳು ನಿಲ್ಲಬೇಕೆಂಬುವುದು ನಿಯಮ. ಆದರೆ ಕೆಲವೆಡೆ ತಂಗುದಾಣದ ಎದುರು ವಾಹನಗಳನ್ನು ನಿಲ್ಲಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಮುಂದೆ ಈ ಘಟನೆಗಳು ನಡೆದರೆ ಆ ವಾಹನಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಬಸ್ ಚಾಲಕರು ಕೂಡ ತಮಗಿಷ್ಟ ಬಂದಲ್ಲಿ ಬಸ್ ನಿಲ್ಲಿಸದೆ ತಂಗುದಾಣದಲ್ಲಿಯೇ ಪ್ರಯಾಣಿಕರನ್ನು ಹತ್ತಿ ಇಳಿಸುವ ಕೆಲಸ ಮಾಡಬೇಕು.
-ದೇವರಾಜ್ ಟಿ.ವಿ.,ಠಾಣಾಧಿಕಾರಿ, ಮಣಿಪಾಲ ಪೊಲೀಸ್ ಠಾಣೆ ರಸ್ತೆ ಮಧ್ಯದಲ್ಲೇ ಬಸ್‌ಗಳ ನಿಲುಗಡೆ
ಬಸ್‌ಸ್ಟಾಂಡ್‌ಗಳ ಈ ಅವ್ಯವಸ್ಥೆಯಿಂದಾಗಿ ಬಸ್‌ಗಳು ರಸ್ತೆಯ ಮಧ್ಯದಲ್ಲಿಯೇ ನಿಲ್ಲುತ್ತಿವೆ. ಪರಿಣಾಮ ಎಲ್ಲೆಲ್ಲೂ ರಸ್ತೆ ಬ್ಲಾಕ್ ಆಗುತ್ತಿದೆ. ಮಣಿಪಾಲದಿಂದ ಎಂಐಟಿ ಬಸ್ ತಂಗುದಾಣದವರೆಗೆ ಒಂದು ಕಡೆಯಾದರೆ ಸರ್ಕಲ್‌ನ ಮತ್ತೂಂದು ಭಾಗಕ್ಕೆ ತೆರಳುವ ವಾಹನಗಳ ಸಾಲು ಮತ್ತೂಂದೆಡೆ ಕಂಡುಬರುತ್ತಿದೆ. ಈ ಬಗ್ಗೆ ಬಸ್ ಚಾಲಕರಿಗೆ ಎಚ್ಚರಿಕೆ ನೀಡಿದರೆ ಬಸ್‌ಸ್ಟಾಂಡ್ ಎದುರು ನಿಲ್ಲಿಸಿರುವ ವಾಹನಗಳನ್ನು ತೆರವು ಮಾಡುವಂತೆ ಸೂಚಿಸುತ್ತಾರೆ. ಬಸ್ ತಂಗುದಾಣಗಳ ಈ ಅವಾಂತರದಿಂದಾಗಿ ಕೆಲವೊಂದು ಬಾರಿ ಪ್ರಯಾಣಿಕರಿಗೆ ಬಸ್‌ಗಳು ತಪ್ಪಿ ಹೋದಂತಹ ಹಲವಾರು ಘಟನೆಗಳು ನಡೆದಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.