Advertisement

Manipal: ಆಟೋರಿಕ್ಷಾ ಪಲ್ಟಿ: ಮೂವರಿಗೆ ಗಾಯ  

09:09 PM Aug 06, 2024 | Team Udayavani |

ಮಣಿಪಾಲ: ಆಟೋರಿಕ್ಷಾ ಪಲ್ಟಿಯಾಗಿ ಚಾಲಕಿ ಸಹಿತ ಮೂವರು ಗಾಯಗೊಂಡ ಘಟನೆ ಆ.6ರ ಮಂಗಳವಾರ ನಡೆದಿದೆ.

Advertisement

ಆತ್ರಾಡಿ-ಹಿರೇಬೆಟ್ಟು ರಸ್ತೆಯಲ್ಲಿ ರಿಕ್ಷಾ ಚಾಲಕಿ ವಿಮಲಾ ಅವರು ತನ್ನ ರಿಕ್ಷಾವನ್ನು ಆತ್ರಾಡಿ ಕಡೆಗೆ ಅತೀವೇಗದಿಂದ ಚಲಾಯಿಸಿ ಒಮ್ಮೆಲೆ ಬಲಭಾಗಕ್ಕೆ ತಿರುಗಿಸಿದ ಪರಿಣಾಮ ರಿಕ್ಷಾ ಪಲ್ಟಿಯಾಗಿದೆ.

ರಿಕ್ಷಾದಲ್ಲಿದ್ದ ಬೆಳಗಾವಿಯ ರಾಮಪ್ಪ ಬಣಪಗೋಳ್‌ ಅವರ ಎಡಕೈ ಮತ್ತು ಅವರ ಮಗನ ಹಾಗೂ ಚಾಲಕಿಗೆ ಗಾಯವಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next