Advertisement
ಜಾಗ ಮೀಸಲು, ಆದರೆ ಮಂಜೂರಾತಿ ಇಲ್ಲಮಣಿಪಾಲದ ಎಂಜೆಸಿ ಕಾಲೇಜಿನ ಮುಂಭಾಗದಲ್ಲಿ 1 ಎಕ್ರೆ ಜಾಗವನ್ನು ಅಗ್ನಿಶಾಮಕ ಠಾಣೆಗಾಗಿಯೇ ಕಾಯ್ದಿರಿಸಲಾಗಿದೆ. ಅಗ್ನಿಶಾಮಕ ಇಲಾಖೆಯಿಂದಲೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಸರಕಾರದಿಂದ ಮಂಜೂರಾತಿ ಮಾತ್ರ ಆಗಿಲ್ಲ. ಮಣಿಪಾಲಕ್ಕೆ ಅಗತ್ಯವಿದ್ದರೆ, 8 ಕಿ.ಮೀ. ದೂರದ ಕಿನ್ನಿಮೂಲ್ಕಿಯಿಂದಲೇ ಅಗ್ನಿಶಾಮಕ ವಾಹನಗಳು ಬರಬೇಕಿದೆ. ಅಷ್ಟೊತ್ತಿಗೆ ಸಮಯ ಮೀರಿರುತ್ತದೆ. ಇತ್ತೀಚೆಗೆ ಈಶ್ವರ ನಗರದಲ್ಲಿ ಸಂಭವಿಸಿದ ದುರಂತ ವೇಳೆಯೂ ಹೀಗೆಯೇ ಆಗಿತ್ತು.
ಈಶ್ವರ ನಗರ ಘಟನೆ ಸಂದರ್ಭ 11.30ಕ್ಕೆ ಅಗ್ನಿಶಾಮಕ ಠಾಣೆಗೆ ಮೊದಲ ಕರೆ ಬಂದಿತ್ತು. ಸ್ಥಳಕ್ಕೆ ತಲುಪಿದ ಮೊದಲ 10-15 ನಿಮಿಷದಲ್ಲಿ ಬೆಂಕಿಯನ್ನು ತಹಬಂದಿಗೆ ತರಲಾಗಿತ್ತು. ಆದರೂ ಹೊಗೆ ಹೋಗಲಾಡಿಸಲು ಸ್ವಲ್ಪ ಸಮಯ ತಗುಲಿತು. ಕಿನ್ನಿಮೂಲ್ಕಿಯಿಂದ ಈಶ್ವರನಗರಕ್ಕೆ ತೆರಳಬೇಕಾದರೆ 15ರಿಂದ 20 ನಿಮಿಷ ಬೇಕು. ಸಂಚಾರದ ವೇಳೆ ವಾಹನಗಳು ಅಡ್ಡ ಬಂದರೆ ನಿಧಾನವಾಗುತ್ತದೆ. ತುರ್ತಾಗಿ ಹಾಜರಿದ್ದರೂ ಅಷ್ಟರಲ್ಲೇ ಠಾಣೆಗೆ 20 ಕರೆ ಬಂದಿತ್ತು ಎಂದು ಉಡುಪಿ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ಎಚ್.ಎಂ. ಅವರು ಹೇಳಿದ್ದಾರೆ.