Advertisement

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

09:58 AM Sep 23, 2024 | Team Udayavani |

ಮಣಿಪಾಲ: ಪರ್ಕಳ ಈಶ್ವರ ನಗರ ದಲ್ಲಿರುವ ಉಡುಪಿ ನಗರ ಸಭೆಗೆ ಸೇರಿದ್ದೆ ಎನ್ನಲಾದ ಪ್ರಥಮ ಹಂತದ ಕುಡಿಯುವ ನೀರಿನ ಪಂಪ್ ಹೌಸ್ ಗೆ ಮಧ್ಯರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಪಂಪ್ ಹೌಸ್ ನಲ್ಲಿ ಮಲಗಿದ್ದ ಸಿಬ್ಬಂದಿ ಅಪಾಯದಿಂದ ಪಾರಾದ ಘಟನೆ ಭಾನುವಾರ(ಸೆ. 22) ತಡರಾತ್ರಿ ಸಂಭವಿಸಿದೆ.

Advertisement

ಭಾನುವಾರ (ಸೆ. 22) ತಡರಾತ್ರಿ ಸುಮಾರು ಒಂದು ಗಂಟೆಯ ಸುಮಾರಿಗೆ ಅತೀ ವೇಗದಿಂದ ಬಂದ ಕಾರು ಪಂಪ್ ಹೌಸ್ ನ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಅದೃಷ್ಟವಶಾತ್ ಅಲ್ಲಿ ರಾತ್ರಿ ಮಲಗುತ್ತಿದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಕಾರು ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು. ಪಂಪ್ ಹೌಸ್ ಗೂ ತುಂಬಾ ಹಾನಿಯಾಗಿದೆ. ಅಧಿಕಾರಿಗಳ ನಿರ್ಲಕ್ಷ. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟಂತೆ. ಇಲ್ಲಿ ಯಾವುದೇ ಸುರಕ್ಷತಾ ಬೇಲಿ ಇಲ್ಲ. ಮುಂದೆ ಹಳೆ ರಸ್ತೆ ಇದೆ ಎಂಬುವುದು ಸೂಚನಾ ಫಲಕ ಇಲ್ಲ. ಈ ಪಂಪ್ ಹೌಸ್ ಮಣಿಪಾಲದ ಖಾಸಗಿಯವರು ಉಪಯೋಗಿಸುತ್ತಿದ್ದು. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಅಡ್ಡಲಾಗಿ ರಸ್ತೆ ಅಗೆದು. ಪಂಪ್ ಹೌಸಿನ ನೀರು ಬಳಕೆ ಮಾಡುತ್ತಿದ್ದಾರೆ ಸಮರ್ಪಕವಾಗಿ ಅಗೆದ ರಸ್ತೆಯನ್ನು ಮುಚ್ಚದೆ ಕಾಮಗಾರಿ ನಡೆಸಿದ್ದಾರೆ. ಇತ್ತೀಚೆಗೆ ಶಾಸಕರು ಬಂದು ಗುಂಡಿ ಮುಚ್ಚಿಸಿದ್ದರು. ಇದೀಗ ಮತ್ತೆ ಗುಂಡಿ ತೆರೆದಿದೆ. ನಗರಸಭಾ ಪಂಪ್ ಹೌಸ್ ನ ಎದುರು ಕೃಷ್ಣ ಜನ್ಮಾಷ್ಟಮಿ ದಿನದಂದು ಇಲ್ಲಿ ಎರಡೆರಡು ಕಾರುಗಳು ಅಪಘಾತವಾಗಿತ್ತು. ಅಪಘಾತದ ನೆನಪು ಮರೆ ಮಾಚುವ ಮೊದಲೇ ಇದೀಗ ರೇಚಕದ ಒಳಗೆ ಮತ್ತೊಂದು ಕಾರು ನುಗ್ಗಿದೆ.

ಉಡುಪಿಯ ನೋಂದಣಿ ಹೊಂದಿದ ಕಾರು ಇದಾಗಿದ್ದು, ಇಲ್ಲಿ ಹಳೆ ರಸ್ತೆಯಲ್ಲಿ ಸಂಚರಿಸಬೇಕೋ ಹೊಸ ರಸ್ತೆಯಲ್ಲಿ ಸಂಚರಿಸಬೇಕೋ ಎಂಬುದರ ಕುರಿತು ಯಾವುದೇ ಸೂಚನಾ ಫಲಕವಿಲ್ಲ. ನಗರಸಭೆಯ ಪಂಪ್ ಹೌಸಿಗೂ ಸೂಕ್ತ ಬೇಲಿ ಇಲ್ಲ. ಪಕ್ಕದಲ್ಲಿ ಮನೆ ಇರುವುದರಿಂದ ಇಲ್ಲಿ ಯಾವುದೇ ರಕ್ಷಣೆಯ ತಡೆ ಬೇಲಿ ಇಲ್ಲವಾಗಿರುವುದರಿಂದ ಸೂಕ್ತ ಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ಇದನ್ನೂ ಓದಿ: Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Advertisement

Udayavani is now on Telegram. Click here to join our channel and stay updated with the latest news.

Next