ಮಣಿಪಾಲ: ಭಾರತದ 75 ನಗರಗಳಲ್ಲಿ 300ಕ್ಕೂ ಅಧಿಕ ಶಾಖೆಗಳನ್ನು ಹೊಂದಿ ಉಡುಪಿ ಮತ್ತು ಮಂಗಳೂರಿನಲ್ಲಿ ಹೆಸರು ವಾಸಿಯಾದ “7ತ್ ಹೆವೆನ್” ಶುದ್ಧ ಸಸ್ಯಾಹಾರಿ ಕೇಕ್ ಶಾಖೆಯು ಮಣಿಪಾಲದ ಎಂಡ್ ಪಾಯಿಂಟ್ ರಸ್ತೆಯ ಪ್ರೀಮಿಯರ್ ಪಾರ್ಕ್ ಬಳಿಯಲ್ಲಿರುವ ಬಾರಧ್ವಾಜ್ ಹೌಸ್‌ನಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಉಜ್ವಲ್ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ ಶಾಖೆಯನ್ನು ಉದ್ಘಾಟಿಸಿದರು. ಕೇಕ್ ಕೌಂಟರ್ ಉದ್ಘಾಟಿಸಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಪ್ರಾಮಾಣಿಕತೆ, ಆತ್ಮವಿಶ್ವಾಸ ದೊಂದಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಿದಾಗ ಸದಾ ಕಾಲ ಬೇಡಿಕೆ ದೊರಕುವುದಲ್ಲದೆ ಉದ್ಯಮ ಯಶಸ್ಸು ಗಳಿಸಲಿದೆ. ಪ್ರಪಂಚದ ಭೂಪಟದಲ್ಲಿ ಶಿಕ್ಷಣದ ಮೂಲಕ ಗುರುತಿಸಿಕೊಂಡ ಮಣಿಪಾಲದಲ್ಲಿ ತೆರೆದ
7ತ್ ಹೆವೆನ್ ಎನ್ನುವ ಬ್ರಾಂಡ್ ನೇಮ್ ಇನ್ನಷ್ಟು ಪ್ರಜ್ವಲಿಸಲಿ ಎಂದು ಹಾರೈಸಿದರು.
ಪ್ರಾಂಚೈಸಿ ಪ್ರತಿನಿಧಿ ದೀಪಕ್ ಶುಭಾಶಂಸನೆಗೈದರು. ಅಶೋಕ್ ಶೆಟ್ಟಿ ಕೆಮ್ತೂರು, ರವೀಂದ್ರ ಶೆಟ್ಟಿ ಮೂಲ್ಕಿ, ಸುಭಾಷ್ ಶೆಟ್ಟಿ ಪರ್ಕಳ, ಸಂಸ್ಥೆಯ ಪಾಲುದಾರರಾದ ಶಮಿತ್ ಶೆಟ್ಟಿ, ಸುಕೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.
ಏಳೇ ನಿಮಿಷಗಳಲ್ಲಿ ಕೇಕ್ ರೆಡಿ
ಇಲ್ಲಿ ಅತ್ಯುತ್ತಮ ಗುಣಮಟ್ಟದ ಕೇಕ್‌ಗಳನ್ನು ಕೇವಲ 7 ನಿಮಿಷಗಳಲ್ಲಿ ತಯಾರಿಸಿ ಕೊಡಲಾಗುವುದು. 3ಡಿ ಕೇಕ್, ಫೋಟೋ ಕೇಕ್, ಶೇಪ್ ಕೇಕ್ ಹಾಗೂ ಎಲ್ಲ ಬಗೆಯ ಫ್ಲವರ್ ಕೇಕ್‌ಗಳು, ಕಪ್ ಕೇಕ್, ಡೋನಟ್ಸ್, ಬ್ರೌನಿ, ಲಾವಾ ಕೇಕ್‌ಗಳು ದೊರೆಯಲಿವೆ. ಎಲ್ಲ ಉತ್ಪನ್ನಗಳು ನಗರ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ, ಸ್ವಿಗ್ಗಿ, ಝೋಮೆಟೋ ಮೂಲಕವೂ ಪಡೆಯಬಹುದು. ವಿದೇಶಗಳಿಂದ ವಾಟ್ಸ್‌ಆ್ಯಪ್ ಮೂಲಕ ಕರೆ ನೀಡಿ ತಮ್ಮ ಬಂಧು-ಮಿತ್ರರಿಗೆ ಕೇಕ್ ತಲುಪಿಸುವ ವ್ಯವಸ್ಥೆಯಿದೆ. ಈ ಶಾಖೆಯು ಬೆಳಗ್ಗೆ 9ರಿಂದ ರಾತ್ರಿ 9ರ ತನಕ ತೆರೆದಿರಲಿದೆ. ಮಂಗಳೂರಿನಲ್ಲಿ 4 ಶಾಖೆಗಳಾದ ಕೊಡಿಯಾಲ್‌ಬೈಲು, ಪಾಂಡೇಶ್ವರ, ತೊಕ್ಕೊಟ್ಟು, ಸುರತ್ಕಲ್, ಉಡುಪಿ, ದಾವಣಗೆರೆ, ಶಿವಮೊಗ್ಗದಲ್ಲಿ ಸಂಸ್ಥೆಯ ಶಾಖೆಗಳು ಕಾರ್ಯಾಚರಿಸುತ್ತಿವೆ.