Advertisement

ಮಾಣಿಕಪ್ರಭು ಜಾತ್ರಾ ಮಹೋತ್ಸವ ಸಂಪನ್ನ

11:50 AM Dec 06, 2017 | Team Udayavani |

ಹುಮನಾಬಾದ: ಮಾಣಿಕಪ್ರಭುಗಳ 200ನೇ ಜಯಂತಿ, ದತ್ತ ಜಯಂತಿ ಹಾಗೂ ಮಾಣಿಕಪ್ರಭುಗಳ ಜಾತ್ರಾಮಹೋತ್ಸವವು, ಅದ್ಧೂರಿ ಸಂಗೀತ ದರ್ಬಾರ್‌ ಹಾಗೂ ಜಂಬು ಸವಾರಿಯ ಶೋಭಾ ಯಾತ್ರೆ ಮೂಲಕ ಸೋಮವಾರ ಅಂತ್ಯಗೊಂಡಿತು.

Advertisement

ರವಿವಾರ ರಾತ್ರಿ ಪ್ರಭು ಸಂಸ್ಥಾನದಲ್ಲಿ ಡಾ| ಜ್ಞಾನರಾಜ ಮಾಣಿಕಪ್ರಭುಗಳು ರಾಜ ಸಿಂಹಾಸನದ ಮೇಲೆ ಆಸೀನರಾಗಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಿ ಸಂಗೀತ ದರ್ಬಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಣಿಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳಿಂದ ಸಮೋಹ ಗಾಯನದ ಮೂಲಕ ಸಂಗೀತ ಕಾರ್ಯಕ್ರಮ ಆರಂಭಗೊಂಡಿತ್ತು. ನಂತರ ಪ್ರಖ್ಯಾತ ಕಥಕ್‌ ನೃತ್ಯಗಾರರಾದ ಶ್ರೀ ರಾಘವರಾಜ ಭಟ್ಟ ಹಾಗೂ ಮಂಗಲ ಭಟ್ಟ ಅವರಿಂದ ಮಾಕನ ಚೋರಿಲಿಲಾ ಗರ್ಬಾ, ತಿನ ತಾಲ್‌ ಮೂಲಕ ಅಮೋಘ ಕಥಕ್‌ ನರ್ತನೆ ಮಾಡಿ ನೆರೆದ ಸಾವಿರಾರು ಭಕ್ತರ ಮನ ಸೂರೆಗೊಳಿಸಿದರು. ನಂತರ ಖ್ಯಾತ ಗಾಯಕಿ ಸಂಗೀತಾ ಕಟ್ಟಿಯವರು ಗಾಯನ ಸೇವೆ ಸಲ್ಲಿಸಿದರು.

ರೂಪಾಲಿ ದೇಶಪಾಂಡೆ ಕಥಕ್‌ ನೃತ್ಯದಲ್ಲಿ ಮೀರಾಗಾಯನ ಅತ್ಯಂತ ಮನಮೋಹಕವಾಗಿ ಪ್ರಸ್ತುತ ಪಡಿಸಿದರು. ಜಯನ ಕೇಶಕರ ಅವರಿಂದ ಗಾಯನ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಖ್ಯಾತಿ ಗಾಯಕರು ತಮ್ಮ ಸಂಗೀತ ಸೇವೆಯನ್ನು ಪ್ರಭು ಚರಣಗಳಿಗೆ ಸಲ್ಲಿಸಿದರು.

ಈ ವೇಳೆ ಆನಂದರಾಜ ಪ್ರಭುಗಳು ಮಾತನಾಡಿ, ಪ್ರಭುಗಳ 200ನೇ ಜಯಂತಿ ನಿಮಿತ್ತ ಆಗಮಿಸಿದ ಅನೇಕ ರಾಷ್ಟ್ರ ಹಾಗೂ ರಾಜ್ಯಮಟ್ಟದ ಮಹಾಸ್ವಾಮಿಗಳು, ಸಂತರು, ಮಠಾಧಿಧೀಶರು, ಸಂಗೀತ ಕಲಾವಿದರು ಪ್ರಭುಗಳ ಅನುಕರಣೆಗೆ ಒಳಗಾಗಿದ್ದಾರೆ. ಅನೇಕ ಸಂಗೀತ ಕಲಾವಿದರು ಕರೆ ಮಾಡಿ ಮಾಣಿಕನಗರ ಸಂಗೀತದ ತವರು, ಸಂಗೀತದ ಸ್ವರ್ಗವೆ ಇಲ್ಲಿದೆ ಎಂದು ವರ್ಣಣೆ ಮಾಡಿದ್ದಾರೆ. 

Advertisement

ಇನ್ನು ಅನೇಕ ಕಲಾವಿದರು ಕೂಡ ತಮಗೆ ಅವಕಾಶ ನೀಡುವಂತೆ ಕೂಡ ಕೇಳಿಕೊಂಡಿದ್ದಾರೆ. ಪ್ರಭುಗಳ ಪ್ರತಿಯೊಂದು ಉತ್ಸವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜನರು ಸೇರಿದಂತೆ ತೆಲಂಗಾಣ ಹಾಗೂ ಮಹಾರಾಷ್ಟ್ರದ ನೂರಾರು ಭಕ್ತರು ಅಲ್ಲಿಯೆ ಉಳಿದುಕೊಂಡು ಪ್ರಭು ಸೇವೆ ಸಲ್ಲಿಸಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ನಿರಂತರ
ಸೇವೆಸಲ್ಲಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು. ಅದೇರೀತಿ ಸಚಿವ ಈಶ್ವರ ಖಂಡ್ರೆ ಹಾಗೂ ಸ್ಥಳೀಯ ಶಾಸಕ ರಾಜಶೇಖರ ಪಾಟೀಲರಿಗೂ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಪರಂಪರೆಯಂತೆ ಸಂಸ್ಥಾನಕ್ಕೆ ವಿಶೇಷ ಸೇವೆ ಸಲ್ಲಿಸಿದ ಭಕ್ತರಿಗೆ ಮಾಣಿಕ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಪೈಕಿ ಶಾಮರಾವ್‌ ಸಗ್ರೋಳಿಕರ್‌, ದೇವಿದಾಸರಾವ್‌ ದೇಶಮುಖ, ವೆಂಕಟರಾವ್‌ ದೇಶಮುಖ ಕೃಷ್ಣಾಪುರ, ಹಣಮಂತಪ್ಪ ಸೋನಾತೆ ಮಾಣಿಕನಗರ, ಸುಭಾಷರಾವ್‌ ರಾವಬಾ ಮಾಣಿಕನಗರ ಅವರನ್ನು ಶ್ರೀಗಳು ಸನ್ಮಾನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next