Advertisement

ಮಣಿನಾಲ್ಕೂರು ಮೆಕ್ಯಾನಿಕಲ್‌ ತರಬೇತಿ ಕೇಂದ್ರಕ್ಕೆ ಕಾಯಕಲ್ಪ ನಿರೀಕ್ಷೆ

11:22 PM Feb 26, 2020 | mahesh |

ಬಂಟ್ವಾಳ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಕನಸಿಗೆ ಆಶ್ರಯ ವಾಗಿದ್ದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಮೆಕ್ಯಾನಿಕಲ್‌ ತರಬೇತಿ ಕೇಂದ್ರ ಕಳೆದ 8 ವರ್ಷಗಳ ಹಿಂದೆಯೇ ಮುಚ್ಚಿದ್ದು, ಪ್ರಸ್ತುತ ದ.ಕ. ಜಿಲ್ಲಾ ಉಸ್ತು ವಾರಿ ಸಚಿವರು ಅದರ ಪುನರಾರಂಭಕ್ಕೆ ಡಿಸಿಎಂಗೆ ಬರೆದಿರುವ ಪತ್ರದಿಂದ ಅದರ ಪುನರಾರಂಭದ ಹೋರಾಟಕ್ಕೆ ಮರುಜೀವ ಬಂದಂತಾಗಿದೆ.

Advertisement

ಸರಕಾರ ಮನಸ್ಸು ಮಾಡಿದ್ದೇ ಆದಲ್ಲಿ ಇಲ್ಲಿ ಐಟಿಐ ಅಥವಾ ಕೌಶಲಾಭಿವೃದ್ಧಿ ಕೋರ್ಸ್‌ ಪ್ರಾರಂಭಿಸ ಬಹುದಾಗಿದೆ. ಸುಮಾರು 18 ವರ್ಷಗಳ ಹಿಂದೆ ಮಣಿನಾಲ್ಕೂರಿನಲ್ಲಿ ಸ್ಥಾಪನೆಗೊಂಡಿದ್ದ ಎರಡು ವರ್ಷಗಳ ತಾಂತ್ರಿಕ ಕೋರ್ಸನ್ನು ಪುನರಾರಂಭಿಸು ವಂತೆ ಸ್ಥಳೀಯ ಮುಂದಾಳು ವೆಂಕಟರಮಣ ಐತಾಳ್‌ ಸಹಿತ ಹಲವರು ಸಾಕಷ್ಟು ಪ್ರಯತ್ನ ನಡೆ ಸಿದ್ದು, ಸಜೀಪಮುನ್ನೂರಿನ ಎಂ. ಸುಬ್ರಹ್ಮಣ್ಯ ಭಟ್‌ ಅವರು ಉಸ್ತುವಾರಿ ಸಚಿವರಿಗೆ ಮನವಿ ನೀಡಿದ್ದರು.

ಅವರ ಮನವಿಗೆ ಪೂರಕವಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಬಂಧಿಸಿದ ಇಲಾಖೆ ಹೊಂದಿರುವ ಉಪ ಮುಖ್ಯ ಮಂತ್ರಿ ಡಾ| ಅಶ್ವತ್ಥ ನಾರಾಯಣ್‌ ಅವರಿಗೆ, ಗ್ರಾಮೀಣ ವಿದ್ಯಾರ್ಥಿಗಳ ಸೊದ್ಯೋಗಕ್ಕೆ ವರದಾನವಾಗಿದ್ದ ಈ ತರಬೇತಿ ಕೇಂದ್ರವನ್ನು ಕಾಯಕಲ್ಪಗೊಳಿಸಿ ಪುನರಾರಂಭಿಸುವ ಕುರಿತು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಉಸ್ತುವಾರಿ ಸಚಿವರು ಕಳುಹಿಸಿರುವ ಪತ್ರಕ್ಕೆ ಡಿಸಿಎಂ ಸ್ಪಂದನೆ ನೀಡಿ ಸಂಬಂಧಿ ಸಿದ ತಾಂತ್ರಿಕ ಶಿಕ್ಷಣ ಇಲಾಖೆಗೆ ಕಳುಹಿಸಿ ಕೊಟ್ಟಲ್ಲಿ, ಅಲ್ಲಿನ ಕಮಿಷನರ್‌ ಅವರು ಹಾಲಿ ಬೇಡಿಕೆ ಇರುವ ಪ್ರದೇಶ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಜಿಲ್ಲೆಯ ಐಟಿಐನ ಗ್ರೇಡ್‌-1 ಪ್ರಾಂಶುಪಾಲರಿಗೆ ಆದೇಶ ಮಾಡುತ್ತಾರೆ. ಆಗ ಮಂಗಳೂರಿನ ಸರಕಾರಿ ಐಟಿಐ ಸಂಸ್ಥೆಯ ಪ್ರಾಂಶುಪಾಲರು ವರದಿ ನೀಡಬೇಕಾಗುತ್ತದೆ.

ಜತೆಗೆ ಐಟಿಐ ಆರಂಭಕ್ಕೆ ಭಾರತ ಸರಕಾರದ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವಾಲಯದ ಡೈರೆಕ್ಟರೇಟ್‌ ಜನರಲ್‌ ಆಫ್‌ ಟ್ರೈನಿಂಗ್‌ (ಡಿಜಿಟಿ) ಯಿಂದ ಅಪಿಲಿ ಯೇಶನ್‌ ಅಗತ್ಯ ವಾಗಿದ್ದು, ಅದಕ್ಕೆ ನಿರ್ದಿಷ್ಟ ಮಾನದಂಡಗಳು ಬೇಕಿವೆ. ಆದರೆ ತತ್‌ಕ್ಷಣ ಡಿಜಿಟಿಯಿಂದ ಅನುಮತಿ ಸಿಗದೇ ಇರುವುದರಿಂದ ಕಮಿಷನರ್‌ ಪ್ರಾರಂಭದಲ್ಲಿ ಸ್ಟೇಟ್‌ ಕೌನ್ಸಿಲ್‌ ಫಾರ್‌ ವೊಕೇಶನಲ್‌ ಟ್ರೈನಿಂಗ್‌ (ಎಸ್‌ಸಿವಿಟಿ) ಮೂಲಕ ಕೋರ್ಸ್‌ ಪ್ರಾರಂಭಿಸಬಹುದಾಗಿದೆ.

Advertisement

ಐಟಿಐ/ಕೌಶಲಾಭಿವೃದ್ಧಿ ಕೋರ್ಸ್‌ಗೆ ಅವಕಾಶ
ಪ್ರಸ್ತುತ ಸರಕಾರವು ಜೆಒಸಿ ಕೋರ್ಸ್‌ ಅನ್ನು ತೆಗೆದು ಹಾಕಿದ್ದರೂ ಅಲ್ಲಿ ವಿವಿಧ ಕೋರ್ಸ್‌ ಗಳನ್ನು ಹೊಂದಿರುವ ಐಟಿಐ ಕಾಲೇಜು ಅಥವಾ ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ಪ್ರಾರಂಭಿಸುವುದಕ್ಕೆ ಅವಕಾಶವಿದೆ. ಹಿಂದೆ ಇಲ್ಲಿ ಜೆಒಸಿ ಕೋರ್ಸ್‌ ಮಣಿನಾಲ್ಕೂರು ಸರಕಾರಿ ಪ.ಪೂ. ಕಾಲೇಜಿನ ಜತೆಯಲ್ಲೇ ಕಾರ್ಯಾಚರಿಸುತ್ತಿದ್ದು,

ಈ ಕೋರ್ಸ್‌ನ ವರ್ಕ್‌ಶಾಪ್‌ ಪಾಳು ಬಿದ್ದುಕೊಂಡಿದೆ. ಆ ವರ್ಕ್‌ಶಾಪ್‌ನಲ್ಲಿದ್ದ ಸಲಕರಣೆಗಳನ್ನು ವಿಲೇವಾರಿ ಮಾಡಲಾಗಿದ್ದು, ಬಾಗಿಲುಗಳು ಅರ್ಧ ತೆರೆದುಕೊಂಡಿವೆ. ಜತೆಗೆ ಸುತ್ತಲೂ ಪೊದೆ ಬೆಳೆದಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಈ ರೀತಿ ಸರಕಾರಿ ಕಟ್ಟಡವೊಂದು ಪಾಳು ಬೀಳುವ ಬದಲು ಅದರ ಬಳಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ.

15 ಕಿ.ಮೀ. ವ್ಯಾಪ್ತಿ ಐಟಿಐ ಇರಬಾರದು
ಸರಕಾರದ ನಿಯಮದ ಪ್ರಕಾರ ಒಂದು ಐಟಿಐ ಕಾಲೇಜು ಪ್ರಾರಂಭ ವಾಗಬೇಕಾದರೆ ಅದರ ಸುತ್ತ 15 ಕಿ. ಮೀ. ವ್ಯಾಪ್ತಿಯಲ್ಲಿ ಸರಕಾರಿ ಐಟಿಐ ಇರಬಾರದು ಎಂಬ ನಿಯಮವಿದೆ. ಪ್ರಸ್ತುತ ಕಾವಳಕಟ್ಟೆಯಲ್ಲಿ ಪ್ರಾರಂಭಗೊಂಡಿರುವ ಐಟಿಐ 15 ಕಿ. ಮೀ.ವ್ಯಾಪ್ತಿಯಲ್ಲಿ ದ್ದರೆ ಅವಕಾಶ ಸಿಗುವುದು ಕಷ್ಟ. ಆದರೆ ಅಲ್ಲಿ ಲಭ್ಯವಿರದೇ ಇರುವ ಕೋರ್ಸ್‌ ಅಥವಾ ಕೌಶಲಾಭಿವೃದ್ಧಿ ಕೇಂದ್ರವನ್ನು ಪ್ರಾರಂಭಿಸುವುದಕ್ಕೆ ಅಡ್ಡಿ ಇರುವುದಿಲ್ಲ.

ಆದೇಶ ಬಂದಲ್ಲಿ ವರದಿ ಆದೇಶ ಬಂದಲ್ಲಿ ವರದಿ
ಮಣಿನಾಲ್ಕೂರಿನ ಸಂಸ್ಥೆಯನ್ನು ಪುನರಾರಂಭಿಸುವ ಕುರಿತು ಪಯತ್ನಗಳು ನಡೆಯುತ್ತಿದ್ದು, ನಮ್ಮ ಮೇಲಧಿಕಾರಿಗಳು, ಅಂದರೆ ಕಮಿಷನರ್‌ ಅವರಿಂದ ಆದೇಶ ಬಂದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ನೀಡುತ್ತೇವೆ. ಸುತ್ತಮುತ್ತಲು ಇರುವ ಐಟಿಐಗಳು, ಅಲ್ಲಿನ ಕೋರ್ಸ್‌ಗಳು, ಹಾಲಿ ಇರುವ ಕಟ್ಟಡದ ಕುರಿತು ವರದಿ ಒಳಗೊಂಡಿರುತ್ತದೆ.
– ಗಿರಿಧರ್‌ ಸಾಲ್ಯಾನ್‌ ಪ್ರಾಂಶುಪಾಲರು, ಸರಕಾರಿ ಐಟಿಐ, ಮಂಗಳೂರು

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next