Advertisement
ಪ್ರತ್ಯೇಕ ರೈಲ್ವೇ ವಿಭಾಗ ಸ್ಥಾಪನೆಮಂಗಳೂರು ವಿಭಾಗವನ್ನು ಪಾಲಕ್ಕಾಡ್ ವಿಭಾಗದಿಂದ ಪ್ರತ್ಯೇಕಿಸಿ ಮಂಗಳೂರು ವಿಭಾಗವಾಗಿ ಮಾಡಬೇಕು ಎಂಬ ಬೇಡಿಕೆ ಈಡೇರಿಲ್ಲ. ಜಿಲ್ಲೆಯಲ್ಲಿ ರೈಲ್ವೇ ಹಳಿಗಳ ದ್ವಿಪಥಗೊಳಿಸುವುದು, ಮುಂಬಯಿ ಮಾದರಿಯಲ್ಲಿ ಸ್ಥಳೀಯ ರೈಲು ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡಬೇಕಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66, 75, 169 ಅಭಿವೃದ್ಧಿ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಇದಕ್ಕೆ ವೇಗ ನೀಡುವ ಕಾರ್ಯ ಆಗಬೇಕಾಗಿದೆ. ಸಾಗರಮಾಲಾ, ಭಾರತ್‌ಮಾಲಾ ಯೋಜನೆಗಳ ಅನುಷ್ಠಾನ
ದ. ಕ. ಜಿಲ್ಲೆಯಲ್ಲಿ ಸಾಗರಮಾಲಾ, ಭಾರತ ಮಾಲಾ ಯೋಜನೆಗಳ ಮೂಲಕ ಬಂದರುಗಳ ಅಭಿವೃದ್ಧಿ, ಸಂಪರ್ಕ ರಸ್ತೆ, ವರ್ತುಲ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿದೆ. ಇದರಿಂದ ಸಾಗರ ತೀರ, ಹೆದ್ದಾರಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ.
Related Articles
ಕೃಷಿಗೆ ಪ್ರೋತ್ಸಾಹ ನೀಡಲು ಕೃಷಿ ಆರ್ಥಿಕ ವಲಯ ಸ್ಥಾಪನೆ, ಅಡಿಕೆ ಮಾರುಕಟ್ಟೆ ಸ್ಥಿರೀಕರಣಕ್ಕೆ ಆವರ್ತ ನಿಧಿ ಸ್ಥಾಪನೆ, ತೆಂಗು ಬೆಳೆಗೆ ಉತ್ತೇಜನ ನೀಡಲು ಕೋಕೋನಟ್ ಪಾರ್ಕ್ ಸ್ಥಾಪನೆ, ರಬ್ಬರ್ ಬೆಳೆಯ ಬೆಲೆ ಸ್ಥಿರೀಕರಣಕ್ಕೆ ವಿಶೇಷ ವ್ಯವಸ್ಥೆ ಅಗತ್ಯವಿದೆ.
Advertisement
ಮೀನುಗಾರಿಕೆ ಕ್ಷೇತ್ರಕ್ಕೆ ಯೋಜನೆಮೀನಿನ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ವಿಶೇಷ ಆರ್ಥಿಕ ವಲಯ, ಮೀನು ಸಂಸ್ಕರಣೆ ಮತ್ತು ರಪು¤ ಉದ್ಯಮಕ್ಕೆ ಪ್ರೋತ್ಸಾಹದಾಯಕ ಯೋಜನೆಗಳು ಅನುಷ್ಠಾನಗೊಳ್ಳಬೇಕು. ಇದರಿಂದ ಸಂಕಷ್ಟದಲ್ಲಿರುವ ಮೀನುಗಾರಿಕೆ ಉದ್ಯಮಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೈಗಾರಿಕೆ ಪಾರ್ಕ್‌ಗಳ ಸ್ಥಾಪನೆ
ಉದ್ಯೋಗ ಮತ್ತು ಉದ್ಯಮ ಸೃಷ್ಟಿಯ ನಿಟ್ಟಿನಲ್ಲಿ ಕೈಗಾರಿಕೆಗಳು ಹಾಗೂ ಹೂಡಿಕೆಗಳು ಜಿಲ್ಲೆಗಳಿಗೆ ಹರಿದು ಬರಬೇಕಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ಉದ್ಯೋಗ ಮತ್ತು ಉದ್ಯಮಗಳ ಸ್ಥಾಪನೆ ಆಗಬೇಕು. ಐಟಿ ಪಾರ್ಕ್, ಆಹಾರ ಸಂಸ್ಕರಣೆ, ಜವುಳಿ ಪಾರ್ಕ್, ಔಷಧ ಪಾರ್ಕ್ ಮುಂತಾದ ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆ,
ಗೋಡಂಬಿ ಉದ್ಯಮಕ್ಕೆ ಉತ್ತೇಜನ ಅಗತ್ಯ. ಪ್ರವಾಸೋದ್ಯಮಕ್ಕೆ ಉತ್ತೇಜನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ವೈದ್ಯಕೀಯ ಪ್ರವಾಸೋದ್ಯಮ, ಸಮುದ್ರ ಪ್ರವಾಸೋದ್ಯಮಗಳಿಗೆ ವಿಪುಲ ಅವಕಾಶವಿದ್ದು, ಇದರ ಸಮರ್ಪಕ ಬಳಕೆಗೆ ಯೋಜನೆಗಳ ಅಗತ್ಯವಿದೆ. ಜಿಲ್ಲೆಯಲ್ಲಿ ಮೆಗಾ ಟೂರಿಸಂ ಸಕೀìಟ್ ಯೋಜನೆ ಅನುಷ್ಠಾನವಾಗಬೇಕು. ಕಿದು ತೆಂಗು ಸಂಶೋ ಧನ ಕೇಂದ್ರ
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗಕ್ಕೆ ಅತಿ ಉಪಯುಕ್ತವಾಗಿರುವ ಕಿದು ತೆಂಗು ಸಂಶೋಧನ ಕೇಂದ್ರವನ್ನು ಹೊರ ರಾಜ್ಯಕ್ಕೆ ಸ್ಥಳಾಂತರ ಮಾಡುವ ಪ್ರಸ್ತಾವನೆ ಇದೆ. ಇದನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳಬೇಕು. ಮಂಗಳೂರು ವಿ. ನಿಲ್ದಾಣದ ರನ್‌ವೇ ವಿಸ್ತರಣೆ
ಈಗಾಗಲೇ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಪರ್ಧೆ ಎದುರಾಗಿದೆ. ಇಲ್ಲಿನ ರನ್‌ವೇ ವಿಸ್ತರಣೆ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಸೌಲಭ್ಯಗಳ ಉನ್ನತೀಕರಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಸಿಆರ್‌ಝಡ್ ಕಚೇರಿ
ಮಂಗಳೂರಿನಲ್ಲಿ ಸಿಆರ್‌ಝಡ್ ವಲಯ ಕೇಂದ್ರ ಕಚೇರಿಯನ್ನು ಆರಂಭಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಇದೆ. ಇದನ್ನು ಈಡೇರಿಸಬೇಕು.ರಿದರೆ ಮಂಗಳೂರು ಸೇರಿದಂತ ಕರಾವಳಿ ಭಾಗದ ಜನರಿಗೆ ಪ್ರಯೋಜನವಾಗುತ್ತದೆ.