ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಚರ್ಚೆಗಳು ವಿಷಪೂರಿತ ಆಲೋಚನೆಗಳು ಮತ್ತು ಹೇಳಿಕೆಗಳನ್ನು ಹೊರಹಾಕುವ ಸ್ಥಿತಿಗೆ ಬಂದಿದೆ ಎಂದು ಹಿರಿಯ ನಿರ್ದೇಶಕ ಮಣಿರತ್ನಂ ಹೇಳಿದ್ದಾರೆ.
ನಿರ್ದೇಶಕರಾದ ಮಣಿರತ್ನಂ, ಸುಧಾ ಕೊಂಗರ, ವೆಟ್ರಿಮಾರನ್, ವಿನೋತ್ರಾಜ್, ಮಡೋನ್ನೆ ಅಶ್ವಿನ್ ಮತ್ತು ಮಾರಿ ಸೆಲ್ವರಾಜ್ ಅವರು ಭಾಗವಹಿಸಿದ ಗಲಾಟ್ಟಾ ಪ್ಲಸ್ ನ ರೌಂಡ್ ಟೇಬಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹೇಗೆ ವಿಷಕಾರಿಯಾಗಿ ಮಾರ್ಪಟ್ಟಿವೆ ಎಂಬುದರ ಕುರಿತು ಅವರು ಮಾತನಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿನ ಕೆಲ ವಿಚಾರಗಳು ಇಡೀ ವೇದಿಕೆಯನ್ನು ವಿಷಪೂರಿತ ಆಲೋಚನೆಗಳು ಮತ್ತು ಹೇಳಿಕೆಗಳನ್ನು ಹೊರಹಾಕುವ ಸ್ಥಳವಾಗಿ ಪರಿವರ್ತಿಸುತ್ತವೆ. ಇದರಿಂದ ಜನ ನಕಾರಾತ್ಮಕತೆಯನ್ನು ಮಾತ್ರ ಹರಡುತ್ತಾರೆ. ಸಾಮಾಜಿಕ ಜಾಲತಾಣದದಲ್ಲಿ ನಡೆಯುವ ಚರ್ಚೆಗಳು ರಸ್ತೆಬದಿಯ ಜಗಳದಂತೆ. ದೊಡ್ಡ ವೇದಿಕೆಯಲ್ಲಿ ಇದು ಗಂಭೀರ ವಾದವಾಗಿದ್ದರೆ, ಒಬ್ಬರು ಅಭಿಪ್ರಾಯವನ್ನು ಹೊಂದಬಹುದು. ಅದರ ಹೊರತಾಗಿ ನಾನು ಅಜಿತ್‌ನನ್ನು ಇಷ್ಟಪಡುತ್ತೇನೆ ಅಥವಾ ವಿಜಯ್ ಅವರನ್ನು ಇಷ್ಟಪಡುತ್ತೇನೆ ಎಂದು ಜಗಳವಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಸದ್ಯ ಮಣಿರತ್ನಂ ಕಮಲ್ ಹಾಸನ್ ಅವರೊಂದಿಗೆ ʼಥಗ್ ಲೈಫ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್, ತ್ರಿಶಾ ಕೃಷ್ಣನ್ ಮತ್ತು ಜಯಂ ರವಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.