ಚೆನ್ನೈ: ದಕ್ಷಿಣದ ಪ್ರಸಿದ್ಧ ನಿರ್ದೇಶಕ ಮಣಿರತ್ನಂ ನಿರ್ದೇಶನದ ಮುಂದಿನ ಚಿತ್ರ “ಪೊಣ್ಣಿಯಿನ್ ಸೆಲ್ವನ್-1′ ವಿವಾದದ ಸುಳಿಗೆ ಸಿಲುಕಿದೆ.
ಚೋಳರ ಸಾಮ್ರಾಜ್ಯದ ಕಥೆಯನ್ನಾಧರಿಸಿದ ಸಿನಿಮಾದ ಪೋಸ್ಟರ್ ಬಗ್ಗೆ ವಕೀಲರೊಬ್ಬರು ತಕರಾರು ಎತ್ತಿದ್ದಾರೆ.
“ಚೋಳರು ಹಣೆಗೆ ತಿಲಕವನ್ನು ಹಚ್ಚುತ್ತಿರಲಿಲ್ಲ. ಆದರೆ ಮಣಿರತ್ನಂ ಅವರ ಸಿನಿಮಾದ ಪೋಸ್ಟರ್‌ನಲ್ಲಿ ನಟ ವಿಕ್ರಮ್ ತಿಲಕ ಹಚ್ಚಿದ್ದಾರೆ. ಇದು ಇತಿಹಾಸಕ್ಕೆ ಚ್ಯುತಿ ತರುವಂಥದ್ದಾಗಿದೆ.
ಹಾಗಾಗಿ ಸಿನಿಮಾ ಬಿಡುಗಡೆಗೂ ಮೊದಲೇ ವಿಶೇಷ ಪ್ರದರ್ಶನವಾಗಬೇಕು. ಇತಿಹಾಸ ಚ್ಯುತಿಯಾಗಿದೆಯೇ ಎಂದು ಪರಿಶೀಲನೆಯಾಗಬೇಕು’ ಎಂದು ವಕೀಲರು ಹೇಳಿದ್ದಾರೆ.
ಈ ಬಗ್ಗೆ ಮಣಿರತ್ನಂ ಹಾಗೂ ವಿಕ್ರಮ್‌ಗೆ ನೋಟಿಸ್ ಕೂಡ ಕಳುಹಿಸಿಕೊಡಲಾಗಿದೆ.