Advertisement

ಗ್ರಾಮೀಣ ಜನರ ಬದುಕಿಗೆ ಆರ್ಥಿಕ ಶಕ್ತಿ ತುಂಬಿದ ಸಂಘ

10:14 PM Feb 12, 2020 | Sriram |

ಮಾಣಿಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ತನ್ನ ಆರಂಭದ ಕಾಲಘಟ್ಟದಲ್ಲಿ ಆರು ಗ್ರಾಮಗಳ ವ್ಯಾಪ್ತಿ ಹೊಂದಿತ್ತು. ಆಗ ಹಾಲು ನೀಡುವ ಕೆಲವೇ ಸದಸ್ಯರು ಸಂಘದ ನಿರ್ದೇಶಕರಾಗಿಯೂ ಸೇವೆ ಮಾಡಿದ್ದರು. ಹೈನುಗಾರಿಕೆಗೆ ಪ್ರೇರಕರಾಗಿದ್ದರು.

Advertisement

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಾಣಿ ಗ್ರಾ.ಪಂ. ಕೇಂದ್ರ ಸ್ಥಾನದಲ್ಲಿ 55 ವರ್ಷಗಳ ಹಿಂದೆ ಗ್ರಾಮೀಣ ಜನರ ಬದುಕಿಗೆ ಆರ್ಥಿಕ ಶಕ್ತಿ ತುಂಬುವ, ಹೈನುಗಾರಿಕೆ ಕೈಕಸುಬಾಗಿ ಸಿಮಾಣಿ ಹಾಲು ಉತ್ಪಾದಕರ ಸಹಕಾರಿ ಸಂಘ ಚಾಲನೆಗೆ ಬಂದಿತ್ತು.

ಕೆಲವೇ ಮಂದಿಯ ಉತ್ಸಾಹದಲ್ಲಿ ಪಾಳ್ಯ ಮುತ್ತಣ್ಣ ರೈ ಅಧ್ಯಕ್ಷತೆಯಲ್ಲಿ 1965ರ ಜ. 25ರಂದು ಅಧಿಕೃತ ಚಾಲನೆಗೆ ಬಂತು. ಆಗ ಸಂಘದ ಸದಸ್ಯರಾಗಿ 10 ಮಂದಿ ಮಾತ್ರ ಇದ್ದರು. ಕ್ರಮೇಣ ಹಾಲಿನ ಸಂಗ್ರಹ ಹೆಚ್ಚಿತಲ್ಲದೆ, ಒಂದೇ ವರ್ಷದಲ್ಲಿ 150 ಲೀ. ಹಂತಕ್ಕೆ ಬಂದಿತ್ತು.

ಸಂಘಕ್ಕೆ ಅಂದು ಬರಿಮಾರು, ಮಾಣಿ, ಪೆರಾಜೆ, ಅನಂತಾಡಿ , ನೆಟ್ಲಮುಟ್ನೂರು, ಕೆದಿಲ ಗ್ರಾಮಗಳ ವ್ಯಾಪ್ತಿಯಿಂದ ದಿನವಹಿ ಗರಿಷ್ಠ 1,200 ಲೀ. ಹಾಲು ಸಂಗ್ರಹಿಸುವ ಮೂಲಕ ತಾಲೂಕಿನ ಗರಿಷ್ಠ ಹಾಲು ಸಂಗ್ರಹದ ಪ್ರತಿಷ್ಠಿತ ಗೌರವದ ಸ್ಥಾನಮಾನ ಸಂಘ ಪಡೆದಿತ್ತು.

ಗ್ರಾಮ ಮಟ್ಟ ದಲ್ಲಿ ಹಾಲು ಸಂಗ್ರಹ
ಪ್ರಗತಿಯ ವೇಗ, ಜನರಿಗೆ ಹತ್ತಿರದಲ್ಲಿ ಸಂಗ್ರಹ ಕೇಂದ್ರ ಲಭ್ಯ ಆಗಬೇಕು ಎಂಬ ಉದ್ದೇಶದಂತೆ ಬಳಿಕ ಪ್ರತೀ ಗ್ರಾಮ ಮಟ್ಟ ದಲ್ಲಿ ಹಾಲು ಸಂಗ್ರಹ ಕೇಂದ್ರಗಳನ್ನು ತೆರೆಯಲಾಯಿತು. ಸಂಘವು ಪ್ರಸ್ತುತ ಮಾಣಿ ಗ್ರಾ.ಪಂ. ವ್ಯಾಪ್ತಿಗೆ ಸೀಮಿತವಾಗಿ ಕಾರ್ಯಾ ಚರಿಸುತ್ತಿದೆ.

Advertisement

ಸಂಘದ ಆರಂಭದಲ್ಲಿ ಮಂಗಳೂರು ಡೈರಿಗೆ ಹಾಲನ್ನು ಹಾಕಲಾಗುತ್ತಿತ್ತು. 1988ರಲ್ಲಿ ಕೆಎಂಎಫ್‌ ಆರಂಭದ ಅನಂತರ ಪುತ್ತೂರು ಕೇಂದ್ರಕ್ಕೆ ಹಾಲನ್ನು ಕಳುಹಿಸಲಾಗುತ್ತಿದೆ.
ಸಂಘದ ಪ್ರಾರಂಭದ ದಿನದಂದು 5 ಲೀ. ಹಾಲು ಸಂಗ್ರಹ ದೊಡ್ಡ ಸಾಧನೆ ಆಗಿತ್ತು. ದಿ| ರಾಮಕೃಷ್ಣ ರೈ ಸಂಘದ ಪ್ರಥಮ ಕಾರ್ಯದರ್ಶಿಯಾಗಿ ಸಂಘದ ಯಶಸ್ಸಿನ ಮುನ್ನಡೆಗೆ ಕಾರಣ ಆಗಿದ್ದರು.

850 ಲೀ. ಹಾಲು ಸಂಗ್ರಹ
ಪ್ರಸ್ತುತ 250 ಸದಸ್ಯರು ಹಾಲು ಹಾಕುತ್ತಿದ್ದು, 850 ಲೀ. ಹಾಲು ಸಂಗ್ರಹಣೆ ಯಾಗುತ್ತಿದೆ.

ಸೌಲಭ್ಯ ಒದಗಿಸುವಲ್ಲಿ
ಮುಂಚೂಣಿ ಸೇವೆ
ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘವು ಪುತ್ತೂರಿನ ಶೀತಲೀಕರಣ ಘಟಕಕ್ಕೆ ಕ್ಯಾನ್‌ಗಳ ಮೂಲಕ ಹಾಲನ್ನು ಸರಬರಾಜು ಮಾಡುತ್ತದೆ. ಹೈನುಗಾರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಘವು ಮುಂಚೂಣಿ ಸೇವೆ ನೀಡುತ್ತಿದೆ. ಫ್ರಾನ್ಸಿಸ್‌ ಜೋಕಿಂ ರೋಡ್ರಿಗಸ್‌ ಅವರು ಗರಿಷ್ಠ 100 ಲೀ. ಹಾಲು ಹಾಕುವ ದೊಡ್ಡ ಹೈನುಗಾರರು.

ಉತ್ತಮ ಸಂಘ
2005-06ಸಾಲಿನಲ್ಲಿ ಒಕ್ಕೂಟದಿಂದ ಬಂಟ್ವಾಳ ತಾಲೂಕಿನ ಉತ್ತಮ ಸಂಘ ಪ್ರಶಸ್ತಿ ದೊರೆತಿದೆ. 1990ರಲ್ಲಿ ರಜತ ಮಹೋತ್ಸವ, 2015ರಲ್ಲಿ ಸ್ವರ್ಣ ಸಂಭ್ರಮವನ್ನು ಆಚರಿಸಿದೆ. ಸಂಘವು ಸ್ವಂತ ಜಮೀನು 0.89 ಸೆಂಟ್ಸ್‌, ಕಚೇರಿ ಕಟ್ಟಡ, ಗೋದಾಮು ಹೊಂದಿದೆ.

ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘ ರೈತಾಪಿ ವರ್ಗಕ್ಕೆ ದೊಡ್ಡ ಆರ್ಥಿಕ ಶಕ್ತಿಯನ್ನು ನೀಡಿದೆ. ಸಂಘಕ್ಕೆ ಹಾಲು ಮಾರಾಟದ ಮೂಲಕವೇ ಅನೇಕ ಮಂದಿ ಬದುಕು, ಸಂಸಾರ ನಿರ್ವಹಣೆ ಈಗಲೂ ಮಾಡುತ್ತಿದ್ದಾರೆ. ಆಧುನಿಕ ವ್ಯವಸ್ಥೆ, ಸೌಲಭ್ಯ, ನಗರೀಕರಣದ ಕಾರಣದಿಂದ ಪ್ರಗತಿಯು ಸಂಘದ ಸೀಮಿತ ವ್ಯಾಪ್ತಿಗೆ ಕಾರಣವಾಗಿದೆ.
– ಕೆ. ಅರುಣ್‌ ಪ್ರಸಾದ್‌ ರೈ, ಅಧ್ಯಕ್ಷರು

ಅಧ್ಯಕ್ಷರು
ಪಾಳ್ಯ ಮುತ್ತಣ್ಣ ರೈ, ವಿಶ್ವನಾಥ ಶೆಟ್ಟಿ, ಪುಂಡಿಕಾç ಕೃಷ್ಣ ಭಟ್‌, ಸುಬ್ರಹ್ಮಣ್ಯ ಭಟ್‌, ಪ್ರಪುಲ್ಲ ರೈ (ಎರಡು ಅವಧಿ), ಉಮೇಶ ಕುಮಾರ್‌, ವಿಜಯ ಕುಮಾರ್‌ ಬೋವಿ, ಜನಾರ್ದನ ಗೌಡ, ಕೆ. ಅರುಣ್‌ ಪ್ರಸಾದ್‌ ರೈ (ಹಾಲಿ ಮೂರನೇ ಅವಧಿ).

ಕಾರ್ಯದರ್ಶಿಗಳು
ದಿ| ರಾಮಕೃಷ್ಣ ರೈ, ದಿ| ಲಕ್ಷಿ$¾àನಾರಾಯಣ ಸುವರ್ಣ ಮುಳಿಬೈಲು, ಮೋಹನದಾಸ ಸುವರ್ಣ, ಉಷಾ ಕುಮಾರಿ, ಯಶವಂತ ಪ್ರಭು ಯನ್‌. (1988ರಿಂದ ಸೇವೆಯಲ್ಲಿ ಇದ್ದಾರೆ).

- ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next