Advertisement

ಮಾಣಿ ಪ್ರೌಢ ಶಾಲೆ: ವಿಜ್ಞಾನ ವಸ್ತು ಪ್ರದರ್ಶನ 

02:57 PM Dec 14, 2018 | Team Udayavani |

ಮಾಣಿ : ವಿಜ್ಞಾನದ ಪ್ರಯೋಗಗಳ ಮೂಲಕ ವೈಜ್ಞಾನಿಕ ಚಿಂತನೆ ಮೂಡಿಸುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅತ್ಯುತ್ತಮ ಎಂದು ವಿದ್ಯಾಭಿವರ್ಧಕ ಸಂಘದ ಕಾರ್ಯದರ್ಶಿ ಹಾಜಿ ಕೆ. ಇಬ್ರಾಹಿಂ ನುಡಿದರು. ಅವರು ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ – ಪ್ರಾತ್ಯಕ್ಷಿಕೆ, ಇಂದ್ರಜಾಲದ ರಹಸ್ಯ ಮತ್ತು ಚಿತ್ರಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

Advertisement

ಮಾಣಿ ವಲಯದ ಸಿ.ಆರ್‌.ಪಿ. ಸತೀಶ್‌ ರಾವ್‌, ಕಾಲೇಜಿನ ಪ್ರಾಂಶುಪಾಲ ಕೆ. ರವೀಂದ್ರ ಶೆಟ್ಟಿ, ಹಿರಿಯ ಶಿಕ್ಷಕರಾದ ಪಿ.ಗಂಗಾಧರ ರೈ, ಬಾಲಕೃಷ್ಣ ಭಟ್‌, ಎಸ್‌.ಕೃಷ್ಣ ಭಟ್‌ ಹಾಗೂ ಇತರರು ಉಪಸ್ಥಿತರಿದ್ದರು. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ದಿನೇಶ್‌ ಕುಂದರ್‌ ಅವರು ಚಿತ್ರಕಲಾ ಶಿಬಿರವನ್ನು, ಸರಕಾರಿ ಪ್ರೌಢ ಶಾಲೆ ದೋಳ್ಪಾಡಿಯ ಕನ್ನಡ ಶಿಕ್ಷಕ ನಾರಾಯಣ ನಾಯ್ಕ ಇಂದ್ರಜಾಲದ ರಹಸ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಾಥಮಿಕ ಶಾಲೆಗಳಾದ ಮಾಣಿ, ಪೆರಾಜೆ, ಬರಿಮಾರು, ಶೇರಾ, ಅನಂತಾಡಿ, ಸತ್ತಿಕಲ್ಲು, ಗಡಿಯಾರ, ಪಾಟ್ರಕೋಡಿ, ನೇರಳಕಟ್ಟೆ, ಬಂಟ್ರಿಂಜ, ಕಲ್ಲಡ್ಕ ಹಾಗೂ ಸೂರಿಕುಮೇರು ಶಾಲೆಗಳ 7 ಮತ್ತು 8ನೇ ತರಗತಿ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.

ಮುಖ್ಯೋಪಾಧ್ಯಾಯ ಬಿ.ಕೆ. ಭಂಡಾರಿ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ಚೆನ್ನಪ್ಪ ಗೌಡ ವಂದಿಸಿ, ಜಯರಾಮ ಕೆ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಗಂಗಾಧರ ಗೌಡ, ಐ.ಜಯಲಕ್ಷ್ಮೀ, ಶ್ಯಾಮಲಾ ಕೆ., ಸುಶ್ಮಿತಾ, ನಯನ ಎಸ್‌., ಅಭಿಲಾಷ್‌ ಕುಮಾರ್‌ ಜಿ., ಪ್ರಶಾಂತ್‌ ಕೆ., ಹರ್ಷಿತಾ, ವನಿತಾ, ರಕ್ಷಿತಾ ಹಾಗೂ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next