Advertisement

ಗೋಸಾಕಣೆ ಹಾಲಿಗಷ್ಟೇ ಮೀಸಲಾಗದಿರಲಿ: ರಾಜೇಶ್‌ ನಾೖಕ್‌

08:16 AM Feb 02, 2019 | |

ಮಾಣಿ: ಹಟ್ಟಿಗೊಬ್ಬರ ಬಳಕೆ ಮಾಡಲು ಸರಕಾರ ಪ್ರೋತ್ಸಾಹ ನೀಡುವ ಅಗತ್ಯವಿದೆ. ಪರಿಣಾಮವಾಗಿ ಗೋಸಾಕಣೆ ಹೆಚ್ಚಾಗಿ ಗೋವಿಗೆ ರಕ್ಷಣೆ ಸಿಗಲು ಸಾಧ್ಯವಿದೆ. ಗೋಸಾಕಣೆ ಹಾಲಿ ಗಾಗಿ ಮೀಸಲಾಗದೆ, ಹಿರಿಯರ ಕಲ್ಪನೆ ಯಂತೆ ಪರ್ಯಾಯ ವಿಚಾರಗಳಿಗೆ ಬಳಸುವಂತಾಗಬೇಕು. ಗೋಮಯ, ಗೋಮೂತ್ರದಲ್ಲಿ ಲಕ್ಷ್ಮೀಯನ್ನು ಕಾಣು ವಂತೆ ಪ್ರೇರೇಪಿಸಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಅವರು ಮಾಣಿ ಪೆರಾಜೆ ಶ್ರೀರಾಮ ಚಂದ್ರಾಪುರ ಮಠದಲ್ಲಿ ಜಗದ್ಗುರು ಶಂಕರಾ ಚಾರ್ಯ ಮಹಾಸಂಸ್ಥಾನದ ಭಾರತೀಯ ಗೋಪರಿವಾರ, ಕರ್ನಾಟಕ ವಿಭಾಗದ ವತಿಯಿಂದ ರಾಜ್ಯಮಟ್ಟದ ಪಂಚಗವ್ಯ ಪ್ರಶಿಕ್ಷಣದ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಹವ್ಯಕ ಮಹಾಮಂಡಲ ಪ್ರ. ಕಾರ್ಯದರ್ಶಿ ಹರಿಪ್ರಸಾದ್‌ ಪೆರಿಯಾಪು ಮಾತನಾಡಿ ಗೋವಿನ ಬಗ್ಗೆ ಗೋಪ್ರೇಮಿಗಳು ಸರಕಾರದ ಮಟ್ಟದಲ್ಲಿ – ವಿಧಾನಸಭೆಯಲ್ಲಿ ಮಾತನಾಡಬೇಕಾಗಿದೆ. ಗೋವನ್ನು ಬಳಸಿಕೊಳ್ಳುವ ವಿಧಾನ ತಿಳಿದು ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ದೇಶೀ ಗೋವಿನ ಆದರ್ಶಗಳನ್ನಿಟ್ಟುಕೊಂಡು ಮುನ್ನಡೆದಾಗ ಗೋವಿನ ರಕ್ಷಣೆ ಸಾಧ್ಯ ಎಂದರು.

18 ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ಗೌವ್ಯೋತ್ಪನ್ನ ತಯಾರಿ ಬಗ್ಗೆ ತರಬೇತಿ ಪಡೆದುಕೊಂಡರು. ಸುಲೋಚನಾ ಎಂ. ತರಬೇತಿ ನೀಡಿದರು. ಪ್ರೇಮ್‌ಚಂದ್ರ ಮಂಜೇಶ್ವರ, ಜ್ಯೋತಿ ಪೈ ಉಡುಪಿ ಅನುಭವ ಹಂಚಿಕೊಂಡರು.

ಗೋಪರಿವಾರದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಗೋಪ್ರೇಮಿ ಪದ್ಮನಾಭ ಶೆಟ್ಟಿ ಪುತ್ತೂರು, ಮಾತೃ ಗೋಪರಿವಾರದ ರಾಜ್ಯ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್, ಮಾಣಿ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಉಪಸ್ಥಿತರಿದ್ದರು.

Advertisement

ಪಂಚಗವ್ಯ ಪ್ರಶಿಕ್ಷಣ ಸಂಚಾಲಕ ಡಾ| ರವಿ ಪಾಂಡವಪುರ ಸ್ವಾಗತಿಸಿ, ಪ್ರಸ್ತಾವಿಸಿದರು. ಭಾರತೀಯ ಗೋ ಪರಿವಾರ ರಾಜ್ಯ ಸಂಘಟನ ಕಾರ್ಯದರ್ಶಿ ಮಹೇಶ್‌ ಚಟ್ನಳ್ಳಿ ವಂದಿಸಿದರು. ಶ್ರೀಕಾರ್ಯದರ್ಶಿ ಶಿಶಿರ್‌ ಅಂಗಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next