Advertisement

ಪ್ರಜ್ವಲ್‌ಗೆ ಪುರುಷತ್ವ ಪರೀಕ್ಷೆ; ಪರೀಕ್ಷೆಗೆ ಒಪ್ಪದ ಹಾಸನ ಸಂಸದ

12:42 AM Jun 04, 2024 | Team Udayavani |

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ವಿಚಾರಣೆಯಲ್ಲಿ “ಅಶ್ಲೀಲ ವೀಡಿಯೋದಲ್ಲಿರುವ ವ್ಯಕ್ತಿ ನಾನಲ್ಲ’, “ಮಹಿಳೆಯರು ಯಾರೆಂಬುದು ಗೊತ್ತಿಲ್ಲ’ ಎಂದು ಹಾರಿಕೆ ಉತ್ತರ ನೀಡುತ್ತಿದ್ದ ಆರೋಪಿ ಪ್ರಜ್ವಲ್‌ ರೇವಣ್ಣ ಅವರನ್ನು ಸೋಮವಾರ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಯಿತು. ಒಂದೆರಡು ದಿನಗಳಲ್ಲಿ ಪರೀಕ್ಷೆಯ ವರದಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಬೌರಿಂಗ್‌ ಆಸ್ಪತ್ರೆ ಆವರಣದಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮತ್ತು ಸಂಶೋಧನ ಕೇಂದ್ರಕ್ಕೆ ಕರೆದೊಯ್ದು ಸುಮಾರು ಮೂರು ತಾಸುಗಳ ಕಾಲ ಆರೋಪಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಆರಂಭದಲ್ಲಿ ರೇವಣ್ಣ ಪುರುಷತ್ವ ಪರೀಕ್ಷೆಗೆ ನಿರಾಕರಿಸಿದರು. ತನಿಖಾಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ ಒಪ್ಪಿಕೊಂಡರು ಎಂದು ತಿಳಿದು ಬಂದಿದೆ.

ಯಾವುದೇ ಅತ್ಯಾಚಾರ ಪ್ರಕರಣದ ಆರೋಪಿಗೆ ಪುರುಷತ್ವ ಪರೀಕ್ಷೆ ಮಾಡಿಸುವುದು ಕಡ್ಡಾಯ. ಏಕೆಂದರೆ ಕೆಲವೊಮ್ಮೆ ಆರೋಪಿ ತಾನೂ ಅತ್ಯಾಚಾರವೇ ಮಾಡಿಲ್ಲ ಅಥವಾ ಆ ಸಾಮರ್ಥ್ಯ ಇಲ್ಲ ಎಂದು ಹೇಳಿಕೆ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪುರುಷತ್ವ ಪರೀಕ್ಷೆ?
ಇದು ಆರೋಪಿಯ ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸುವ ಪರೀಕ್ಷೆ. ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ. ಪುರುಷನ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ°ಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆ ನಡೆಸಲಾಗುತ್ತದೆ. ಅದಕ್ಕಾಗಿ 3 4 ಮಾದರಿಯ ಸ್ಕ್ಯಾನಿಂಗ್‌ ಹಾಗೂ ರಕ್ತದ ಮಾದರಿ ಪಡೆಯಲಾಗುತ್ತದೆ.

Advertisement

ಮೊದಲಿಗೆ ಆರೋಪಿಯ ವೀರ್ಯ ಸಂಗ್ರಹಿಸಿ, ಅದರ ಗುಣಲಕ್ಷಣಗಳ ಮೌಲ್ಯಮಾಪನ ನಡೆಸಲಾಗುತ್ತದೆ. ಆರೋಪಿಯ ಖಾಸಗಿ ಅಂಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ರಕ್ತದ ಪ್ರಮಾಣ ಎಷ್ಟಿದೆ ಮತ್ತು ಜನನಾಂಗದ ಕೂದಲು ಮಾದರಿ ಸಂಗ್ರಹಿಸಲಾಗುತ್ತದೆ. ಅಲ್ಲದೆ ಆರೋಪಿಯ ಜನನಾಂಗ ರಾತ್ರಿ ನಿದ್ರೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗ ಶಾಲೆಯಲ್ಲಿ ನಡೆಯುತ್ತದೆ. ಆರೋಪಿಯ ಅರಿವಿಗೆ ಬಾರದಂತೆ ನಡೆಯುವ ಪರೀಕ್ಷೆ ಇದಾಗಿದೆ.

ಆರೋಪಿಯ ಧ್ವನಿ ಮಾದರಿ ಸಂಗ್ರಹ
ಆರೋಪಿ ಪ್ರಜ್ವಲ್‌ ಎಸ್‌ಐಟಿ ವಿಚಾರಣೆಯ ವೇಳೆ ತಾನು ಯಾರೊಂದಿಗೂ ಲೈಂಗಿಕ ಕ್ರಿಯೆ ನಡೆಸಿಲ್ಲ. ಅಶ್ಲೀಲವಾಗಿ ಮಾತನಾಡಿಲ್ಲ. ಅಶ್ಲೀಲ ವೀಡಿಯೋ ಇದೆ ಎನ್ನಲಾದ ತನ್ನ ಮೊಬೈಲ್‌ ಕೂಡ ಕಳೆದು ಹೋಗಿದೆ ಎಂದು ಹೇಳುತ್ತಿದ್ದಾನೆ. ಆದರೆ ಈಗಾಗಲೇ ಆತನ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದಡಿ ದೂರು ನೀಡಿರುವ ಸಂತ್ರಸ್ತೆಯರು ಆರೋಪಿಯನ್ನು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ 5-6 ಮಾದರಿಗಳಲ್ಲಿ ಆತನ ಧ್ವನಿ ಸಂಗ್ರಹಿಸಲಾಗಿದೆ.

ಇದೊಂದು ವಿಚಿತ್ರ ಪ್ರಕರಣವಾಗಿದ್ದು, ವೈರಲ್‌ ಆಗಿರುವ ವೀಡಿಯೋದಲ್ಲಿ ಸಂತ್ರಸ್ತೆಯರ ಮುಖ ಮಾತ್ರ ಕಾಣುತ್ತಿದೆ. ಆರೋಪಿಯ ಮುಖ ಚಹರೆ ಇಲ್ಲ. ಆದರೆ ವೀಡಿಯೋ ದಲ್ಲಿ ಆತನ ಧ್ವನಿಯಿದೆ. ಹೀಗಾಗಿ ಆತ ಸಾಮಾನ್ಯ ಸಂದರ್ಭದಲ್ಲಿ ಹೇಗೆ ಮಾತನಾಡುತ್ತಾನೆ, ಕೋಪಗೊಂಡಾಗ, ಲೈಂಗಿಕವಾಗಿ ಉದ್ರೇಕಗೊಂಡಾಗ ಯಾವ ರೀತಿ ಮಾತನಾಡುತ್ತಾನೆ ಎಂಬುದನ್ನು ವೈಜ್ಞಾನಿಕವಾಗಿ ಪರೀಕ್ಷೆಗೊಳಪಡಿಸಿ ಧ್ವನಿ ಸಂಗ್ರಹಿಸಿ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದುಎಸ್‌ಐಟಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next