ಬೆಂಗಳೂರು: ನಗರದಲ್ಲಿ ಭಾನುವಾರ ಮ್ಯಾನ್‌ಹೋಲ್ ದುರಂತವೊಂದು ನಡೆದಿದ್ದು ಸೋಮಸಂದ್ರ ಪಾಳ್ಯದಲ್ಲಿ ಅಪಾರ್ಟ್‌ಮೆಂಟ್‌ವೊಂದರ ಒಳಚರಂಡಿ ನೀರು ಸ್ವಚ್ಛತಾ ಘಟಕ ಸ್ವತ್ಛತೆಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಪಾರ್ಟ್‌ಮೆಂಟ್ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್‌ನ ಎಸ್‌ಟಿಪಿಗೆ ಇಳಿದ್ದಿದ್ದ ಕೂಲಿ ಕಾರ್ಮಿಕರು 10 ಅಡಿ ಆಳದಲ್ಲಿ ಸಿಲುಕಿ ಉಸಿರುಗಟ್ಟಿ ಹೊರ ಬರಲಾರದೆ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕಾರ್ಮಿಕರು ಸಿಲುಕಿರುವುದನ್ನು ಗಮನಿಸಿ ಕೂಡಲೇ ಅಗ್ನಿ ಶಾಮಕದಳದ ಸಿಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಸಿಬಂದಿಗಳು ಹರಸಾಹಸ ಪಟ್ಟು ಮೂವರನ್ನುಮೇಲೆಕ್ಕೆತ್ತಿದ್ದು ಅದಾಗಲೇ ಓರ್ವ ಮೃತಪಟ್ಟಿದ್ದರು.
ಇನ್ನಿಬ್ಬರು ಉಸಿರು ಇದ್ದಿದ್ದು ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೆ ಇಬ್ಬರೂ ಕೊನೆಯುಸಿರೆಳೆದಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮೃತ ದುರ್ದೈವಿಗಳು ತುಮಕೂರು ಮೂಲದ ಮಾದೇಗೌಡಮತ್ತು ಕೋಲಾರ ಮೂಲದ ನಾರಾಯಣ ಸ್ವಾಮಿ ಎಂದು ತಿಳಿದು ಬಂದಿದೆ. ಇನ್ನೋರ್ವನ ಗುರುತು ಇನ್ನಷ್ಟೆ ತಿಳಿದು ಬರಬೇಕಿದೆ.
ದುರ್ಘಟನೆ ನಡೆಸ ಸ್ಥಳಕ್ಕೆ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.