Advertisement
ದ.ಕ. ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಸಹಯೋಗದಲ್ಲಿ ಬೆಳೆಗಾರರಿಂದ ಬಳಕೆದಾರರಿಗೆ ನೇರ ಮಾವು ಮಾರಾಟ ಮೇ 24ರಿಂದ 26ರ ತನಕ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ, ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಕಾರಣದಿಂದ ಹಾಗೂ ನೈಸಗಿಕವಾಗಿ ಮಾಗಿಸಿದ ಮಾವುಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಾವು ಮೇಳ ಗಳನ್ನು ಆಯೋಜಿಸಲಾಗುತ್ತಿದೆ.
Related Articles
Advertisement
ಮಾವಿನ ಬೆಲೆ ಆಲೊ#àನ್ಸ್ (100 ರೂ.), ಮಲ್ಲಿಕಾ (90 ರೂ.), ರಸಪೂರಿ (70 ರೂ.), ಮಲ್ಗೊàವಾ (120 ರೂ.), ದಸೇರಿ (120 ರೂ.), ಸೆಂದೂರ (50 ರೂ.), ತೋತಾಪುರಿ (30- 40 ರೂ.), ಬೇಗನ್‌ಪಲ್ಲಿ (70 ರೂ.), ಶುಗರ್ ಬೇಬಿ (120 ರೂ.) ಸೇರಿದಂತೆ ಹಿಮಾಯತ್ (120). ಪ್ರಚಾರದ ಕೊರತೆಯಿಂದ ಜನ ಕಡಿಮೆ
ನೀತಿ ಸಂಹಿತೆ ಹಾಗೂ ಚುನಾವಣೆ ಕೆಲಸಗಳಲ್ಲಿ ಅಧಿಕಾರಿಗಳು ಹೆಚ್ಚು ಸಕೀÅಯರಾಗಿದ್ದರಿಂದ ಮಾವಿನ ಮೇಳದ ಉದ್ಘಾಟನೆ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಈ ಬಗ್ಗೆ ಯಾವುದೇ ಪ್ರಚಾರ ನೀಡದೆ ಇದ್ದುದರಿಂದ ಜನರಿಗೆ ಮಾವು ಮೇಳದ ಬಗ್ಗೆ ಮಾಹಿತಿ ಇರಲಿಲ್ಲ. ಈ ಕಾರಣದಿಂದ ಮೊದಲ ದಿನ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಮಾವು ಮಾರಾಟಗಾರರಿಗೆ
ವಾಸ್ತವ್ಯ ಸಮಸ್ಯೆ
ರಾಮನಗರದಿಂದ ಮಾವು ಮಾರಾಟಕ್ಕಾಗಿ ನಗರಕ್ಕೆ ಆಗಮಿಸಿದ ಮಾರಾಟಗಾರರಿಗೆ ವಾಸ್ಯವ್ಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ತೋಟಗಾರಿಕಾ ಇಲಾಖೆ ನಿರಾಸಕ್ತಿ ವಹಿಸಿದೆ. ಆ ಹಿನ್ನೆಲೆಯಲ್ಲಿ ಮಾವು ಮಾರಾಟಗಾರರು ಕದ್ರಿ ಪಾರ್ಕ್‌ನ ಮಾವು ಮಾರಾಟ ಮಾಡುವ ಸ್ಥಳದಲ್ಲೇ ಮಲಗಿದ್ದಾರೆ. ಶುಕ್ರವಾರ ರಾತ್ರಿ ಸುರಿದ ಮಳೆಗೂ ಮಾರಾಟಗಾರರು ಇಲ್ಲೇ ಮಲಗಿದ್ದರು.ಇವರೊಂದಿಗೆ ಆರು ಮಂದಿ ಮಹಿಳೆಯರು ಇದ್ದೂ ಸಮಸ್ಯೆ ಎದುರಿಸುವಂತಾಗಿದೆ.ಚುನಾವಣೆ ಹಿನ್ನೆಲೆಯಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾವು ಮಾರಾಟಗಾರರಿಗೆ ತಿಳಿಸಿದ್ದಾರೆ. ಗ್ರಾಹಕರಿಂದ ಉತ್ತಮ ಸ್ಪಂದನೆ
ಪ್ರಚಾರದ ಕೊರತೆಯಿಂದ ಮೊದಲ ದಿನ ಗ್ರಾಹಕರ ಸಂಖ್ಯೆ ಕಡಿಮೆ ಇದ್ದರೂ ಎರಡನೇ ದಿನ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಲಾಲ್‌ಬಾಗ್, ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಮಾವು ಮೇಳ ನಡೆದಿದೆ. ಅಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳೆದ ಬಾರಿ ಮಂಗಳೂರಿನಲ್ಲೂ ಆಯೋಜಿಸಿದ್ದೇವು.
- ಮಂಜು,
ರಾಮನಗರ ಮಾವು ಬೆಳೆಗಾರರ ಸಂಘದ ಉಪಾಧ್ಯಕ್ಷ