ಆಸ್ವಾದ… ಖರೀದಿ ಬಲು ಜೋರು, ಹಳ್ಳಿಗರು ಫುಲ್ ಖುಷ್.
Advertisement
ನಗರದ ರಾಣಿ ಸರ್ಕಲ್‌ನ ನಂದಿ ಉಪಚಾರ ಮತ್ತು ನಂದಗೋಕುಲ ಹೋಟೆಲ್ ಬಳಿ ರಾಜ್ಯ ಮಾವು ಅಭಿವೃದ್ಧಿ ಕೇಂದ್ರ ಮತ್ತು ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ವತಿಯಿಂದ ನಡೆದ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕಂಡು ಬಂದ ದೃಶ್ಯಗಳಿವು.
Related Articles
Advertisement
ಶಾಸಕ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾವು ಮತ್ತು ಹಲಸು ಮೇಳ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಉತ್ತಮ ಬೆಲೆ ಸಿಗುವಂತೆ ಆಗಬೇಕು. ಜನರ ಸಹಕಾರ ಇದ್ದರೆ ಮುಂದಿನ ವರ್ಷವೂ ಇದೇ ರೀತಿ ಮಾಡಲು ಯೋಜನೆ ರೂಪಿಸಲಾಗುವುದು. ಬರಗಾಲ ಇರುವುದರಿಂದ ರೈತರು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ಹಣ್ಣುಗಳಿಗೆ ಉತ್ತಮ ಬೆಲೆ ಬಂದರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದರು.
ವಿವಿಧ ತಳಿ: ಮಾವು ಮೇಳದಲ್ಲಿ ಮಲಗೋಬ, ಮಲ್ಲಿಕಾ, ಆರ್ಕಾಉದಯ, ಐಲ್ಡಾನ್, ಲಿಲ್ಲಿ, ಬಾದಾಮಿ, ತೋತಾಪುರಿ, ಲಾಲ್ ಮಣಿ, ಆಸ್ಟೀವ, ಟಾಯ್‌ಅರ್ಬೀನ್, ಅರ್ಕಾ ಅನ್ಮೋಲ್, ದಶೇರಿ, ಬೆನ್ನೇಶಾನ್, ರಸಪೂರಿ, ಅರ್ಕ ಪುನಿತ, ಸನ್ಸೇಷಿನ್, ಆರ್ಕನಿಲ್ಕಿಕಾಗ್, ಪಾಯರ್, ಕೇಂಟ್, ಕಿಟ್, ಮಾಯ, ಇತರೆ ಜಾತಿಯ ಮಾವುಗಳು ಗ್ರಾಹಕರನ್ನು ಸೆಳೆದವು. ಪ್ರತಿಯೊಬ್ಬರೂ ಹಣ್ಣಿನ ರುಚಿ ಸವಿದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರುದ್ರೇಶ್, ಜಿಲ್ಲೆಯಲ್ಲಿ 3763 ಹೆಕ್ಟೇರ್‌ನಲ್ಲಿ ಮಾವು ಹಾಗೂ 20 ಹೆಕ್ಟೇರ್‌ನಲ್ಲಿ ಹಲಸು ಬೆಳೆಯಲಾಗಿದೆ. ನಂದಿ ಉಪಚಾರ ಮತ್ತು ನಂದ ಗೋಕುಲ ಹೋಟೆಲ್ ಮುಂಭಾಗದಲ್ಲಿ ತಲಾ ಹತ್ತತ್ತು ಮಳಿಗೆ ನಿರ್ಮಿಸಲಾಗಿದೆ. ಸುಮಾರು 25ಕ್ಕೂ ಹೆಚ್ಚು ವಿವಿಧ ಮಾವು ತಳಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿದ್ದು ರೈತರಿಂದ ನೇರವಾಗಿ ಖರೀದಿಸಬಹುದು. ಐದು ದಿನಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಣ ಬರುವಂತೆ ರೈತರಿಗೆ ಆದರೆ ಸಂತಸವಾಗುತ್ತದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯಕ್ರಮ ರೂಪಿಸಿದ್ದೇವೆ. ರೈತರು ಮತ್ತು ಗ್ರಾಹಕರು ಮಾವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದರು.
ಇದೇ ವೇಳೆ ತಹಶೀಲ್ದಾರ್ ಮಂಜುನಾಥ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮುನೇಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ತಾಪಂ ಸದಸ್ಯ ಮಹೇಶ್, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ: ನೈಸರ್ಗಿಕವಾಗಿ ಮಾಗಿಸಿದ ಒಳ್ಳೆಯ ರುಚಿಯ ಮಾವಿನ ಹಣ್ಣು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಎಲ್ಲಾ ಜಾತಿಯ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದ್ದು ರೈತರಿಂದ ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ. ಇದು ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರಾರಂಭಗೊಳಿಸಿದ್ದೇವೆ. ಎಲ್ಲಾ ರೀತಿಯ ಸೌಲಭ್ಯ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ಹೇಳಿದರು.
ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಮಾವು ಮೇಳ ಏರ್ಪಡಿಸಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಎಷ್ಟೇ ಮಾವು ಬೆಳೆದರೂ ಇವತ್ತಿನ ಮಾರುಕಟ್ಟೆಯಲ್ಲಿ ರೈತನಿಗೆ ಬೆಲೆ ಸಿಗದಂತೆ ಆಗಿದೆ. ಹೀಗಾಗಿ ರೈತರಿಗೆ ಉತ್ತಮ ಬೆಂಬಲ ಬೆಲೆ ಸಿಗಬೇಕು.-ಸುಬ್ಬಣ್ಣ, ರೈತ ಎಲ್ಲಾ ಜಾತಿಯ ಮಾವುಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ಗಮನ ಸೆಳೆಯುತ್ತಿವೆೆ. ಮಾರಾಟಕ್ಕಿಟ್ಟಿರುವ ಮಾವು ಕಡಿಮೆ ಬೆಲೆಗೆ ನೇರವಾಗಿ ರೈತರಿಂದ ನೀಡುತ್ತಿರುವುದು ಸಂತಸದ ವಿಷಯ.
-ಮಂಜುನಾಥ್, ಗ್ರಾಹಕ