Advertisement

Bengaluru: 1 ಕೆಜಿ ಮಾವಿನ ಬೆಲೆ ರೂ. 2.75ಲಕ್ಷ!

10:41 AM Jun 01, 2024 | Team Udayavani |

ಬೆಂಗಳೂರು: ಉತ್ತಮ ರುಚಿ, ತೂಕ, ಹಣ್ಣಿನ ಹೊರಗೆ ಹಾಗೂ ಒಳಗಿನ ಆಕರ್ಷಕ ಬಣ್ಣ ಹೊಂದಿರುವ ವಿದೇಶಿ ಮಾವಿನ ತಳಿಗಳು ಐಐಎಚ್‌ ಆರ್‌ ಜನರ ಗಮನ ಸೆಳೆಯಿತು.

Advertisement

ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು(ಐಐಎಚ್‌ಆರ್‌) ತಿರುಚ್ಚಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ತ್ರಿಫ‌ಲ ಮೇಳದಲ್ಲಿ ಜಪಾನ್‌, ಥಯ್ಲೆಂಡ್‌, ವಿಯೇಟ್ನಾಂ ಸೇರಿದಂತೆ ವಿವಿಧ ದೇಶಗಳ ವಿಶೇಷ ಮಾವಿನ ತಳಿಗಳನ್ನು ಹೆಚ್ಚಿನ ಗಮನ ಸಳೆದಿದೆ. ಸಾಮಾನ್ಯವಾಗಿ ದೇಸಿ ತಳಿಗಿಂತ ಅಧಿಕವಾಗಿ ವಿದೇಶಿ ತಳಿಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಜನರು ಮುಂದಾಗಿದ್ದಾರೆ.

ದುಬಾರಿ ಬೆಲೆ: ಜಗತ್ತಿನ ದುಬಾರಿ ಮಾವಿನ ತಳಿಗಳಲ್ಲಿ ಒಂದಾದ “ಮೀಯಾ ಜಾಕಿ’ ಮಾವು ಕೃಷಿ ಆಸಕ್ತರ ಗಮನ ಸೆಳೆಯಿತು. ಇದು ಅಸಾಧಾರಣ ರುಚಿ, ಗುಣಮಟ್ಟ ಮತ್ತು ವಿಶಿಷ್ಟ ಗುಣಲಕ್ಷಣಗಳಿಂದ ಹೆಸರುವಾಸಿಯಾಗಿದೆ. ಒಂದು ಕೆ.ಜಿ. ಹಣ್ಣಿನ ಬೆಲೆ ಬರೋಬ್ಬರಿ 2.75 ಲಕ್ಷ ರೂ. ಇದೆ. ಒಂದು ಸಸಿ ಬೆಲೆಯು ಸಾಮಾನ್ಯ ಸಸಿಗಳ ಬೆಲೆಗಿಂತ 200 ಪಟ್ಟು ಹೆಚ್ಚಿದೆ. ಒಂದು ಸಸಿ ಬೆಲೆ 2,500 ರೂ. ಇದೆ. ಪ್ರಸ್ತುತ ಶಿವಮೊಗ್ಗದ ಅನ್ನಪೂರ್ಣೇಶ್ವರಿ ನರ್ಸರಿ ಮೀಯಾ ಜಾಕಿ ಮರದಿಂದ ಫ‌ಲ ಬಿಟ್ಟರುವ ಮಾವು ಪ್ರದರ್ಶಕ್ಕೆ ಇಟ್ಟಿದ್ದು, ಮೇಳಕ್ಕೆ ಬಂದವರು ಜನರು ಮಾವಿನ ಗಾತ್ರ ಹಾಗೂ ಬೆಲೆ ಕೇಳಿ ನಿಬ್ಬೆರಗಾಗಿ, ಲಕ್ಷ ಬೆಲೆಬಾಳುವ ಹಣ್ಣಿನ ಜತೆಗೆ ಸೆಲ್ಫಿ ತೆಗೆದುಕೊಂಡರು.

ವಿದೇಶಿ ರಫ್ತಿಗೆ ಸೂಕ್ತ: ಮೀಯಾ ಜಾಕಿ ಹಣ್ಣು ಸಾಮಾನ್ಯ ಹಣ್ಣುಗಳಿಗಿಂತ ವಿಶೇಷವಾದ ಗುಣ ಲಕ್ಷಣಗಳಿವೆ. ಒಂದು ಹಣ್ಣು ಸರಿಸುಮಾರು ಒಂದೂವರೆ ಕೆ.ಜಿ. ತೂಕ ಇರಲಿದೆ. ಮಿಯಾ ಜಾಕಿ ಹಣ್ಣುಗಳು ಹಣ್ಣಾದ ಮೇಲೆ ಕೆಡದಂತೆ ಸುಮಾರು 15 ದಿನಗಳ ಕಾಲ ಸಂರಕ್ಷಿಸಬಹುದು. ಹಾಗಾಗಿ ವಿದೇಶಗಳಿಗೆ ರಫ್ತು ಮಾಡಲು ಕೂಡ ಸೂಕ್ತವಾದಂತ ಮಾವಿನ ಹಣ್ಣಿನ ತಳಿಯಾಗಿದೆ.

ವಿಶೇಷ ಆರೈಕೆ ಬೇಕಿಲ್ಲ: ಮೀಯಾ ಜಾಕಿ ಮಾವಿನ ಸಸಿಗೆ ವಿಶೇಷ ಆರೈಕೆ ಅಗತ್ಯವಿಲ್ಲ. ಸಸಿ ನೆಟ್ಟ 2 ವರ್ಷಕ್ಕೆ ಫ‌ಲ ಸಿಗಲಿದೆ. ಒಂದು ಮರದಲ್ಲಿ ಸುಮಾರು 40ರಿಂದ 60 ಕಾಯಿಗಳ ಇಳುವರಿ ಸಿಗಲಿದೆ. ಒಂದು ಎಕರೆಯಲ್ಲಿ ಸುಮಾರು 180ರಿಂದ 200 ಗಿಡಗಳನ್ನು ನಾಟಿ ಮಾಡಬಹುದಾಗಿದೆ. 3 ವರ್ಷಕ್ಕೆ ಹೇರಳವಾಗಿ ಕಾಯಿಗಳನ್ನು ಬಿಡಲಿದೆ. ಪ್ರಸ್ತುತ ಕರ್ನಾಟಕದಲ್ಲಿ ರೈತರು ಮೀಯಾ ಜಾಕಿ ಮಾವು ಬೆಳೆಸಲು ಮುಂದಾಗಿದ್ದಾರೆ. ಉತ್ತಮ ಬೆಳೆಯ ನೀರಿಕ್ಷೆಯಲ್ಲಿ ಇದೆ. ಇದರಿಂದ ಉತ್ತಮ ಆದಾಯ ರೈತರಿಗೆ ಸಿಗಲಿದೆ ಎಂದು ಕೃಷಿ ವಿಜ್ಞಾನಿಗಳು ಅಭಿಪ್ರಾಯಪಟ್ಟರು.

Advertisement

ನರ್ಸರಿಯಲ್ಲಿ ಮೀಯಾ ಜಾಕಿ ಸಸಿಯನ್ನು ನೆಟ್ಟು ಫ‌ಲ ತೆಗೆಯಲಾಗಿದೆ. ರೈತರು ವಿಶೇಷವಾಗಿ ಮೀಯಾ ಜಾಕಿ ಸಸಿಗಳನ್ನು ಖರೀದಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ●ಇಸ್ಮಾಯಿಲ್‌, ಅನ್ನಪೂರ್ಣೇಶ್ವರಿ ನರ್ಸರಿ ಶಿವಮೊಗ

Advertisement

Udayavani is now on Telegram. Click here to join our channel and stay updated with the latest news.

Next