Advertisement

ತಿಂಗಳಾಂತ್ಯಕ್ಕೆ ಮಾವು ಮೇಳಗಳು ಆರಂಭ

01:04 AM May 13, 2019 | Lakshmi GovindaRaj |

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮಾವು-ಹಲಸು ಮೇಳ ಏರ್ಪಡಿಸಲು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆ ಮುಂದಾಗಿದೆ.

Advertisement

ಈಗಾಲೇ ಸುಗ್ಗಿ ಆರಂಭವಾಗಿ ತಿಂಗಳು ಕಳೆದೆ. ಆದರೂ ಸಿಲಿಕಾನ್‌ ಸಿಟಿಯಲ್ಲಿ ಇನ್ನು ಮಾವು ಮೇಳೆ ಆರಂಭವಾದೆ ಮಾವು ಪ್ರಿಯರು ಎದುರು ನೋಡುವಂತಾಗಿದೆ. ಚುನಾವಣೆ ಹಾಗೂ ಮಾವಿನ ಫಸಲು ತಡವಾದ್ದರಿಂದ ಮೇಳವೂ ತಡವಾಗಿದ್ದು, ಮೇ 30 ರಿಂದ ಲಾಲ್‌ಬಾಗ್‌ನಲ್ಲಿ ಹಾಗೂ ಜೂನ್‌ ತಿಂಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯಗಳಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದೆ ಎಂದು ಮಾವು ನಿಗಮ ತಿಳಿಸಿದೆ.

ಇದರ ಜತೆಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಮೇ 28 ಮತ್ತು 29ರಂದು ಹೆಸರಘಟ್ಟದ ಐಸಿಎಆರ್‌-ಐಐಎಚ್‌ಆರ್‌ ಪ್ರಾಂಗಣದಲ್ಲಿ ಮಾವು ಮತ್ತು ಹಲಸು ವೈವಿಧ್ಯತಾ ಮೇಳ, ಜೂ.1 ಮತ್ತು 2 ರಂದು ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮಾವು ಮತ್ತು ಹಲಸು ವೈವಿಧ್ಯತಾ ಮೇಳವನ್ನು ಆಯೋಜಿಸಲಾಗಿದೆ.

ಈ ಮೇಳಗಳ ಉದ್ದೇಶ ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರು ನೇರವಾಗಿ ಗ್ರಾಹಕರಿಗೆ ತಾಜಾ ಹಾಗೂ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಬೇಕು ಎಂಬುದಾಗಿದೆ. ಲಾಲ್‌ಬಾಗ್‌ನಲ್ಲಿ ನಡೆಯುವ ಮೇಳಕ್ಕೆ ಕೋಲಾರ ಮತ್ತಿತರ ಭಾಗಗಳಿಂದ ತೋತಾಪುರಿ, ಮಲಗೋವಾ, ನೀಲಂ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ ಸೇರಿದಂತೆ 12 ಬಗೆಯ ವಾಣಿಜ್ಯ ಮಾವಿನ ತಳಿಗಳು, ಜಿಕೆವಿಕೆ, ಐಐಎಚ್‌ಆರ್‌ಗಳಲ್ಲಿ ಸಂಶೋಧನೆ ನಡೆಸಿದ ಹೊಸ ಹಲಸಿನ ತಳಿಗಳು ಹಾಗೂ ರೈತರು ಬೆಳೆದ ನಾನಾ ತಳಿಯ ಹಲಸಿನ ಬರಲಿವೆ. ಇನ್ನು ಈ ವರ್ಷ ಜುಲೈ ಅಂತ್ಯದವರೆಗೆ ಹಣ್ಣು ಗ್ರಾಹಕರಿಗೆ ಲಭ್ಯವಾಗಲಿವೆ.

ರಾಸಾಯನಿಕ ಮಾವಿಗಿಲ್ಲ ಅವಕಾಶ: ಮೇಳಗಳಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ಸಹಜವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಕೃತಕವಾಗಿ ಮಾಗಿಸಿದ ಮಾವು ಮೇಳದಲ್ಲಿ ನಿಷೇಧ. ಇನ್ನು ಹಣ್ಣಿನ ಗುಣಮಟ್ಟ, ದರ ನಿಗದಿಗೆ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ಸದಸ್ಯರು ರಾಸಾಯನಿಕ ಬಳಸಿದ ಹಣ್ಣುಗಳ ಬಗ್ಗೆ ನಿಗಾ ವಹಿಸುತ್ತದೆ.

Advertisement

“ಮ್ಯಾಂಗೊ ಪಿಕ್ಕಿಂಗ್‌ ಟೂರ್‌’: ಗ್ರಾಹಕರು ನೇರವಾಗಿ ತೋಟಕ್ಕೆ ಲಗ್ಗೆ ಇಟ್ಟು ಮರದಿಂದ ಮಾವು ಕಿತ್ತು ಸವಿಯಲೆಂದೇ ಮಾವು ನಿಗಮದ ವತಿಯಿಂದ ಈ ಬಾರಿಯೂ ಮ್ಯಾಂಗೊ ಪಿಕ್ಕಿಂಗ್‌ ಟೂರ್‌ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಮಾವು ನಿಗಮದ ವೆಬ್‌ಸೈಟ್‌ನಲ್ಲಿ ನೋಂದಣಿ ಆರಂಭವಾಗಿದ್ದು, ಭಾನುವಾರದಂದು ಬೆಂಗಳೂರಿನಿಂದ ಸಾರ್ವಜನಿಕರನ್ನು ರಾಮನಗರ, ಕೋಲಾರ, ತುಮಕೂರು ಜಿಲ್ಲೆಗಳ ಯಾವುದಾದರೊಂದು ಮಾವು ತೋಟಗಳಿಗೆ ಬಸ್‌ಗಳಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಬೆಳಗ್ಗೆಯಿಂದ ಸಂಜೆವರೆಗೂ ತೋಟ ಸುತ್ತಿ ಗ್ರಾಹಕರು ತಮಗೆ ಬೇಕಾದಷ್ಟು ಮಾವನ್ನು ಕಿತ್ತು ಖರೀದಿಸಬಹುದು. ಆಸಕ್ತರು ನಿಗಮದ ಡಿಡಿಡಿ.ksಞಛಞcl.ಟ್ಟಜ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಹಾಪ್‌ಕಾಮ್ಸ್‌ನಲ್ಲಿ ಮೇ.17 ರಿಂದ ಮಾವು ಮೇಳ ಆರಂಭವಾಗಲಿದ್ದು, ಸುಗ್ಗಿ ಮುಗಿಯುವವರೆಗೂ ಮೇಳ ನಡೆಯಲಿದೆ. ಎಲ್ಲಾ ಹಾಪ್‌ಕಾಮ್ಸ್‌ ಮಳಿಗೆಗಳಲ್ಲೂ ಪ್ರತ್ಯೇಕ ಜಾಗ ಮಾಡಿ ವಿವಿಧ ತಳಿಯ ಮಾವುಗಳನ್ನು ಮಾರಾಟ ಮಾಡಲಾಗುತ್ತದೆ. ಗ್ರಾಹಕರು ಹಾಪ್‌ಕಾಮ್ಸ್‌ಗೆ ಭೇಟಿ ನೀಡಿ ನೈಸರ್ಗಿಕ ಹಾಗೂ ಗುಣಮಟ್ಟದ ಮಾವನ್ನು ಖರೀದಿಸಿಬಹುದು.
-ಪ್ರಸಾದ್‌, ಹಾಪ್‌ಕಾಮ್ಸ್‌ ಎಂ.ಡಿ

Advertisement

Udayavani is now on Telegram. Click here to join our channel and stay updated with the latest news.

Next