Advertisement

ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಾವು ಮೇಳ

11:32 AM May 10, 2017 | Team Udayavani |

ಬೆಂಗಳೂರು: ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಿಂದ ನಗರದ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಆವರಣದಲ್ಲಿ ಮೇ 10ರಿಂದ 12ರವರೆಗೆ ಮಾವು-ಹಲಸು ಮೇಳ ಆಯೋಜಿಸಲಾಗಿದೆ. ಇದೇ ಮೊದಲ ಬಾರಿ ಮೆಟ್ರೋ ನಿಲ್ದಾಣದಲ್ಲಿ ಮೇಳ ನಡೆಯಲಿದ್ದು, ಪ್ರಾಯೋಗಿಕವಾಗಿ ಎರಡು ಮಳಿಗೆಗಳನ್ನು ಮಾತ್ರ ತೆರೆಯಲಾಗುತ್ತಿದೆ.

Advertisement

ಅದಕ್ಕಾಗಿ ಪ್ರತಿ ಮಳಿಗೆಗೆ ದಿನಕ್ಕೆ 575 ರೂ. ಬಾಡಿಗೆಯನ್ನು ನಿಗಮವು ಬಿಎಂಆರ್‌ಸಿಎಲ್‌ಗೆ ನೀಡಲಿದ್ದು, ರೈತರಿಗೆ ಮಳಿಗೆಗಳನ್ನು ಉಚಿತವಾಗಿ ನೀಡುತ್ತಿದೆ. ಮೆಟ್ರೋದಲ್ಲಿ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ರೈತರಿಂದ ಬೇಡಿಕೆ ಬಂದರೆ, ಇತರ ಮೆಟ್ರೋ ನಿಲ್ದಾಣಗಳಲ್ಲಿ ಮೇಳ ನಡೆಸುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ತಿಳಿಸಿದ್ದಾರೆ.

ಮೇ 12ರಿಂದ 17ರವರೆಗೆ ಸಹಕಾರ ನಗರದ ಬಿಬಿಎಂಪಿ ಆಟದ ಮೈದಾನದಲ್ಲಿ ಮಾವು-ಹಲಸು ಮಾರಾಟ ನಡೆಯಲಿದೆ. ಬಿಬಿಎಂಪಿ ಉಚಿತವಾಗಿ ಮೈದಾನ ಒದಗಿಸಿದ್ದು, ಸುಮಾರು 8 ಮಳಿಗೆಗಳನ್ನು ನಿರ್ಮಿಸಿ ಆಸಕ್ತ ರೈತರಿಗೆ ವಿತರಿಸಲಾಗುವುದು. ಹಾಗೇ ನಗರದ ವಿವಿಧೆಡೆ ಬಿಬಿಎಂಪಿ ಆಟದ ಮೈದಾನಗಳು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಮಾವು ಮಾರಾಟಕ್ಕೆ ರೈತರು ಮುಂದೆ ಬಂದರೆ, ನಿಗಮ ಮಳಿಗೆ ನಿರ್ಮಿಸಿ ಕೊಡಲಿದೆ ಎಂದು ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next