Advertisement

ಮಂಗಳೂರು ಅಪರಾಧ ಸುದ್ದಿಗಳು (ಮಾರ್ಚ್‌ 9)

11:27 AM Mar 09, 2018 | |

ಕಾರು ಢಿಕ್ಕಿ: ಸಾವು 

Advertisement

ಮಂಗಳೂರು: ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಮುಂಭಾಗ ರಾ. ಹೆ. 66ರಲ್ಲಿ ಬುಧವಾರ ರಾತ್ರಿ ಬಸ್‌ಗೆ ಕಾಯುತ್ತಿದ್ದ  ಮುಕ್ಕ ನಿವಾಸಿ ರಘುನಾಥ ದೇವಾಡಿಗ (54) ಅವರು ಕಾರು ಢಿಕ್ಕಿಯಾಗಿ ಗಂಭೀರ ಗಾಯಗೊಂಡು  ಖಾಸಗಿ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾರೆ.

ಅವರು ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಮೂಲ್ಕಿಯಿಂದ ಸುರತ್ಕಲ್‌ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು.  ರಸ್ತೆಗೆ ಬಿದ್ದ ಅವರ ತಲೆ,  ಎದೆ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಸಮೀಪದ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಿಸದೆ ರಾತ್ರಿ 10.40 ಕ್ಕೆ ಸಾವನ್ನಪ್ಪಿದರು. 
ಟ್ರಾಫಿಕ್‌ ಉತ್ತರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ  ಸೇವಿಸಿ ಸಾವು

ಪುತ್ತೂರು: ವಿಷ ಪದಾರ್ಥ ಸೇವಿಸಿ ಗಂಭೀರ ಸ್ಥಿತಿ ಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನರಿಮೊಗರು ಕಾಯರ್‌ಮುರೇರು ನಿವಾಸಿ ಗಣೇಶ್‌ ಗೌಡ (37) ಚಿಕಿತ್ಸೆ ಫಲಕಾರಿಯಾಗದೆ ಮಾ. 7ರಂದು ಮೃತಪಟ್ಟಿದ್ದಾರೆ.

Advertisement

ಅನಾರೋಗ್ಯದಿಂದ ಬಳಲು ತ್ತಿದ್ದ ಗಣೇಶ್‌  ಜೀವನದಲ್ಲಿ ಜುಗುಪ್ಸೆ ಗೊಂಡು ಮಾ. 6ರಂದು ಮಧ್ಯಾಹ್ನ ಮನೆಯಲ್ಲಿ ವಿಷ ಪದಾರ್ಥ ಸೇವಿಸಿದ್ದರು. ಪುತ್ತೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಅವರನ್ನು ಬುಧವಾರ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.  

ಮೃತರು ಅವಿವಾಹಿತರಾಗಿದ್ದು, ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಮಾವ ಗೋಪಾಲಕೃಷ್ಣ ನೀಡಿದ ದೂರಿನಂತೆ ಪುತ್ತೂರು ನಗರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ಮೂಲದ  ಯುವತಿ ನಾಪತ್ತೆ 

ಮಂಗಳೂರು: ಜಪ್ಪಿನ ಮೊಗರು ಪ್ರಜ್ಞಾ ಸ್ವಾಧಾರ ಗೃಹದಲ್ಲಿ  ಆಶ್ರಯ ಪಡೆದಿದ್ದ ಹುಬ್ಬಳ್ಳಿ ಮೂಲದ ಯುವತಿ ಪ್ರಿಯಾ (27) ಅವರು ಫೆ. 25 ರಂದು ಬೆಳಗ್ಗೆ  ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಂಕನಾಡಿ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಿಯಾ    ಗೋಧಿ ಮೈಬಣ್ಣ, ಸುಮಾರು 5.3 ಅಡಿ ಎತ್ತರ, ದಪ್ಪ ಶರೀರ, ದುಂಡು ಮುಖ, ಕಡು ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ ಮತ್ತು ಟಾಪ್‌ ಧರಿಸಿದ್ದು,  ಕನ್ನಡ, ಹಿಂದಿ, ತುಳು ಮಾತನಾಡುತ್ತಾರೆ.
ಈಕೆ  ಬಗ್ಗೆ  ಮಾಹಿತಿ ಸಿಕ್ಕಿದವರು ನಗರ ಕಂಟ್ರೋಲ್‌ ರೂಂ ಅಥವಾ ಕಂಕನಾಡಿ ನಗರ ಠಾಣೆಗೆ ತಿಳಿಸ ಬಹುದು.

ಮಲಗಿದಲ್ಲಿಂದ  ನಾಪತ್ತೆ : ದೂರು  

ಮಂಗಳೂರು: ಕೂಳೂರು- ಕಾವೂರು ರಸ್ತೆಯ ವಿದ್ಯಾನಗರದಲ್ಲಿ  ವಾಸ ವಾಗಿರುವ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಹಡಗಲಿಯ ಭೀಮಪ್ಪ ಹುಚ್ಚಣ್ಣವರ ಅವರ ಪುತ್ರ ಈರಪ್ಪ (36) ಕಳೆದ ಫೆಬ್ರವರಿ 15ರಂದು ರಾತ್ರಿ ಮಲಗಿದ್ದ ಲ್ಲಿಂದ ಕಾಣೆಯಾಗಿದ್ದು, ಎಲ್ಲ ಕಡೆ ಹುಡುಕಾಡಿದರೂ  ಪತ್ತೆಯಾಗಿಲ್ಲ. 

ಈ ಬಗ್ಗೆ ಕಾವೂರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿದೆ. 
ಈರಪ್ಪ ಅವರು ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದು, ಈ ಬಗ್ಗೆ  ಚಿಕಿತ್ಸೆ ನೀಡಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಭೀಮಪ್ಪ   ಅವರು  ಗದಗ ದಿಂದ ಮಂಗ ಳೂರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದಾರೆ. ಫೆ. 15ರಂದು ರಾತ್ರಿ ಅವರು ತನ್ನ ಪತ್ನಿ ರೇಣುಕಾ, ಪುತ್ರ ಈರಪ್ಪ ಮತ್ತು ಸೊಸೆ ಅಕ್ಕಮ್ಮ ಅವರ ಜತೆ ಮನೆಯಲ್ಲಿ  9 ಗಂಟೆಗೆ ಮಲಗಿದ್ದು, 11 ಗಂಟೆಗೆ ಎಚ್ಚರ ವಾದಾಗ ಈರಪ್ಪ ಕಾಣೆಯಾಗಿದ್ದರು. 

ಈರಪ್ಪ  5.9 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ದೃಢ ಶರೀರ ಹೊಂದಿದ್ದು, ನೀಲಿ ಗೆರೆಗಳ ಟಿ-ಶರ್ಟ್‌ ಮತ್ತು ಕಪ್ಪು ಪ್ಯಾಂಟ್‌ ಧರಿಸಿರುತ್ತಾರೆ. ಕನ್ನಡ  ಮಾತನಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next