Advertisement

ಕಸದ ಜೊತೆ ಇದ್ದ ಮಾಂಗಲ್ಯ ಸರವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕರು

09:29 PM Feb 11, 2021 | Team Udayavani |

ವಿಜಯಪುರ : ಪೌರಕಾರ್ಮಿಕರು ಗೃಹಿಣಿಯೊಬ್ವರು ಕಸದಲ್ಲಿ ಎಸೆದಿದ್ದ ಚಿನ್ನದ ಮಾಂಗಲ್ಯ ಸರವನ್ನು ಹುಡುಕಿ, ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಜರುಗಿದೆ.

Advertisement

ನಗರದ 22ನೇ ವಾರ್ಡ್ ನಿವಾಸಿ ಗೃಹಿಣಿ ಶಂಕರ್ ಚವ್ಹಾಣ ಎಂಬವರ ಪತ್ನಿ ನಿರ್ಲಕ್ಷ್ಯದಿಂದ ಸುಮಾರು 1 ಲಕ್ಷ ರೂ. ಮೌಲ್ಯದ 20 ಗ್ರಾಂ ಚಿನ್ನದ ಮಾಂಗಲ್ಯವನ್ನು ಕಸದಲ್ಲಿ ಗೂಡಿಸಿ, ಡಬ್ಬಕ್ಕೆ ಹಾಕಿದ್ದರು. ಬಳಿಕ ಕಸ ಸಂಗ್ರಹಕ್ಕೆ ಮನೆಗೆ ಬಂದಿದ್ದ ಪಾಲಿಕೆಯ‌ ಪೌರ ಕಾರ್ಮಿಕರಿಗೆ ಕಸದ ಡಬ್ಬ ನೀಡಿದ್ದರು‌

ಚಿನ್ನದ ಮಾಂಗಲ್ಯ ಕಳೆದುಕೊಂಡಿದ್ದು ತಡವಾಗಿ ಅರಿವಿಗೆ ಬರುತ್ತಲೇ ಶಂಕರ್ ಚವ್ಹಾಣ ಅವರು ತಮ್ಮ ಮನೆಯ ಕಸ ಸಂಗ್ರಹಿಸಿದ ಪೌರ ಕಾರ್ಮಿಕರಾದ ಗಿರೀಶ ಚಿಮ್ಮಲಗಿ ಹಾಗೂ ವಿಜಯ ಕಾಖಂಡಕಿ ಇವರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ರಕ್ತದಲ್ಲಿ ಮುಖ್ಯಮಂತ್ರಿಗೆ ಪತ್ರ

ವಿಷಯ ತಿಳಿದ ಈ ಇಬ್ಬರು ಪೌರ ಕಾರ್ಮಿಕರು ತಾವು ತಂದು ಸುರಿದ ಕಸದ ರಾಶಿಯಲ್ಲಿ ಹುಡುಕಿದಾಗ ಚಿನ್ನದ ಮಾಂಗಲ್ಯ ಸರ ಸಿಕ್ಕಿದೆ.

Advertisement

ಕೂಡಲೇ ಲಕ್ಷಾಂತರ ರೂ. ಮೌಲ್ಯದ ಮಾಂಗಲ್ಯ ಸರವನ್ನು ಶಂಕರ ಚವ್ಹಾಣ ಅವರ ಪತ್ನಿಗೆ ಹಸ್ತಾಂತರ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಇಬ್ಬರು ಪೌರ ಕಾರ್ಮಿಕರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next