Advertisement

ನೀರು ಸಂಗ್ರಹಕ್ಕಾಗಿ ಕೆಲಸಕ್ಕೆ ರಜೆ ಹಾಕುವ ಪರಿಸ್ಥಿತಿ…!

11:35 AM May 18, 2019 | Naveen |

ಮಹಾನಗರ: ನಗರದಲ್ಲಿ ಕುಡಿಯುವ ನೀರು ಪೂರೈಕೆ ಸಮಸ್ಯೆಯಾದರೆ ಸಾರ್ವಜನಿಕರಿಗೆ ಮುಖ್ಯವಾಗಿ ಉದ್ಯೋಗಸ್ಥ ಕುಟುಂಬಗಳಿಗೆ ವಿತರಣೆಯಾಗುವ ನೀರನ್ನು ಸಂಗ್ರಹಿಸುವ ಚಿಂತೆ. ಇದರಿಂದಾಗಿ ಬಹಳಷ್ಟು ಕುಟುಂಬಗಳಿಗೆ ಕೆಲಸಕ್ಕೆ ರಜೆ ಮಾಡಿ ನೀರು ಸಂಗ್ರಹಿಸುವ ಪರಿಸ್ಥಿತಿ ಎದುರಾಗಿದೆ.

Advertisement

ನಗರದಲ್ಲಿ ಸದ್ಯ ನೀರು ರೇಷನಿಂಗ್‌ ಜಾರಿಯಲ್ಲಿದೆ. ಇದರಂತೆ ಮೂರು ದಿನ ನೀರು ಸ್ಥಗಿತ ಮಾಡಿ ನಾಲ್ಕು ದಿನ ನೀರು ಪೂರೈಕೆ ಮಾಡಲಾಗುತ್ತದೆ. ನೀರು ಪೂರೈಸುವ ನಾಲ್ಕು ದಿನಗಳ ಅವಧಿಯಲ್ಲಿ ದಿನವಿಡೀ ನೀರು ಬರುವುದಿಲ್ಲ. ಪ್ರತಿಯೊಂದು ಪ್ರದೇಶಕ್ಕೂ ಗಂಟೆಯ ಆಧಾರದಲ್ಲಿ ನೀರು ನೀಡಲಾಗುತ್ತದೆ. ಆಯಾಯ ಪ್ರದೇಶಗಳ ಜನರು ಈ ಅವಧಿಯಲ್ಲಿ ನೀರು ಸಂಗ್ರಹಿಸಿಡಬೇಕು.

ತುಂಬೆಯಿಂದ ನಗರದ ನೀರು ಸಂಗ್ರಹ ಸ್ಥಾವರಗಳಿಗೆ ಸರಬರಾಜು ಆರಂಭಗೊಂಡಾಗ ವಾಲ್ವ್ಮೆನ್‌ಗಳು ತಮ್ಮ ಪಂಪ್‌ಹೌಸ್‌ ವ್ಯಾಪ್ತಿಯ ನೀರು ವಿತರಣೆ ಮಾರ್ಗದ ಪ್ರದೇಶಗಳಿಗೆ ವಿತರಣೆ ಆರಂಭಿಸುತ್ತಾರೆ. ಒಂದು ಪ್ರದೇಶದ ವಾಲ್ವ್ಗಳನ್ನು ಒಪನ್‌ ಮಾಡಿ ಒಂದು ಅಥವಾ ಎರಡು ತಾಸು ನೀರು ನೀಡಿ ಬಂದ್‌ ಮಾಡುತ್ತಾರೆ. ಇನ್ನೊಂದು ಪ್ರದೇಶದ ವಾಲ್ವ್ ಒಪನ್‌ ಮಾಡಿ ಅಲ್ಲಿಗೆ ಅದೇ ರೀತಿ ನೀರು ನೀಡುತ್ತಾರೆ. ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುವ ಪ್ರದೇಶಗಳಿಗೆ ಇದೇ ವ್ಯವಸ್ಥೆ ಮುಂದುವರಿಯುತ್ತದೆ. ಮೂರು ದಿನ ಸ್ಥಗಿತದ ಬಳಿಕ ಬೆಳಗ್ಗೆ 6 ಗಂಟೆಗೆ ನೀರು ವಿತರಣೆ ಆರಂಭವಾಗುತ್ತದೆ ಎಂದು ಪ್ರಕಟನೆ ಹೇಳುತ್ತದೆಯಾದರೂ ಹೆಚ್ಚಿನ ಪ್ರದೇಶಗಳಿಗೆ ನೀರು ಬರುವಾಗ ರಾತ್ರಿಯಾಗುತ್ತದೆ.

ಪ್ರಸ್ತುತ ಉದ್ಯೋಗಸ್ಥ ಕುಟುಂಬಗಳಿಗೆ ಎದುರಾಗಿರುವ ಸಮಸ್ಯೆ ಎಂದರೆ ತಮ್ಮ ಪ್ರದೇಶಕ್ಕೆ ಯಾವಾಗ ನೀರು ಬರುತ್ತದೆ ಎಂಬುದನ್ನು ಕಾಯುವುದು. ದಿನದ ಯಾವುದೇ ಹೊತ್ತಿನಲ್ಲೂ ನೀರು ಬರಬಹುದು.

ಕೆಲಸಕ್ಕೆ ರಜೆ
ನೀರಿನ ಪ್ರಶರ್‌ ಇಲ್ಲದಿರುವುದರಿಂದ ಒವರ್‌ ಹೆಡ್‌ ಟ್ಯಾಂಕಿಗಳಿಗೆ ನೀರು ಹೋಗುವುದಿಲ್ಲ. ಅದುದರಿಂದ ಡ್ರಮ್‌ಗಳಲ್ಲಿ, ಬಕೇಟು ಇತ್ಯಾದಿಗಳಲ್ಲಿ ಸಂಗ್ರಹಿಸಿಡಬೇಕಾಗುತ್ತದೆ. ಗಂಡ ಹೆಂಡತಿ ಇಬ್ಬರೇ ಇರುವ ಮತ್ತು ಇಬ್ಬರೂ ಉದ್ಯೋಗದಲ್ಲಿರುವ ಮನೆಗಳಲ್ಲಿ ಹಗಲು ಹೊತ್ತು ಅಂದರೆ ಸಾಮಾನ್ಯವಾಗಿ ಬೆಳಗ್ಗೆ 8.30ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ನೀರು ಬಂದರೆ ಆ ವೇಳೆ ಅವರು ಕಚೇರಿಗಳಲ್ಲಿ ಅಥವಾ ಕೆಲಸದ ತಾಣಗಳಲ್ಲಿರುವುದರಿಂದ ಅದನ್ನು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಸಂಗ್ರಹಿಸಿಡದಿದ್ದರೆ ಮತ್ತೆ ಮೂರು ದಿನ ನೀರು ಇರುವುದಿಲ್ಲ. ಆದುದರಿಂದ ಗಂಡ ಅಥವಾ ಹೆಂಡತಿಯ ಪೈಕಿ ಯಾರಾದರೊಬ್ಬರು ನೀರು ಹಿಡಿದಿಡಲು ಕೆಲಸಕ್ಕೆ ರಜೆ ಮಾಡಲೇ ಬೇಕು.

Advertisement

ಟ್ಯಾಂಕರ್‌ ನೀರಿನಲ್ಲೂ ಇದೇ ಸಮಸ್ಯೆ
ನೀರು ಪೂರೈಕೆ ಅವಧಿಯಲ್ಲೂ ನೀರು ಹೋಗದ ಎತ್ತರದ ಪ್ರದೇಶಗಳು ಸಹಿತ ಕೆಲವು ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಇಲ್ಲೂ ಟ್ಯಾಂಕರ್‌ಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ನೀರು ಸರಬರಾಜು ಮಾಡುತ್ತವೆ.

ಈ ಅವಧಿಯಲ್ಲಿ ಉದ್ಯೋಗಸ್ಥ ಕುಟುಂಬಗಳ ಸದಸ್ಯರು ಕಚೇರಿಯಲ್ಲಿರುತ್ತಾರೆ. ಅದುದರಿಂದ ಈ ನೀರು ಅವರಿಗೆ ಪ್ರಯೋಜನಕ್ಕೆ ಬರುವುದಿಲ್ಲ.

ಹೀಗೆ ಮಾಡಿದರೆ ಉತ್ತಮ
ಸಮಸ್ಯೆಗೆ ಪರಿಹಾರ ಎಂದರೆ ಬೆಳಗಿನ ಜಾವದಿಂದ ಆರಂಭಿಸಿ 8 ಗಂಟೆಯವರೆಗೆ ಹಾಗೂ ಸಂಜೆ 6 ಗಂಟೆಯಿಂದ ರಾತ್ರಿವರೆಗೆ ನೀರು ಪೂರೈಕೆಯಾದರೆ ಉದ್ಯೋಗಸ್ಥ ಕುಟುಂಬಗಳಿಗೂ ನೀರು ಲಭ್ಯವಾಗುತ್ತದೆ. ಒಟ್ಟಾರೆಯಾಗಿ ನೀರಿನ ಸರಬರಾಜು ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯ.

ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ

ಹೆಚ್ಚಿನ ಉದ್ಯೋಗಸ್ಥರು ಬೆಳಗ್ಗೆ 8 ಗಂಟೆಗೆ ಮನೆಯಿಂದ ತೆರಳಿ ಸಂಜೆ ಹಿಂದಿರುವಾಗ 6 ರಿಂದ 7 ಗಂಟೆಯಾಗುತ್ತದೆ. ಪ್ರಸ್ತುತ ಬರುವ ನೀರಿನಲ್ಲಿ ಪ್ರಶರ್‌ ಇಲ್ಲದಿರುವುದರಿಂದ ಓವರ್‌ಟ್ಯಾಂಕ್‌ಗಳಿಗೂ ನೀರು ಹೋಗುವುದಿಲ್ಲ. ಇದರಿಂದಾಗಿ ಉದ್ಯೋಗಸ್ಥ ಕುಟುಂಬಗಳಿಗೆ ಹಗಲು ಹೊತ್ತಿನಲ್ಲಿ ನೀರು ಬಂದರೆ ಅದನ್ನು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ.
ಜಯಂತಿ,

ಬ್ಯಾಂಕ್‌ ಉದ್ಯೋಗಿ, ಜಪ್ಪಿನಮೊಗರು
ವಿಶೇಷ ವರದಿ
Advertisement

Udayavani is now on Telegram. Click here to join our channel and stay updated with the latest news.

Next