Advertisement

ಸಮಾಜ ವಿರೋಧಿ ಶಕ್ತಿಗಳನ್ನು ದಮನಿಸಿ; ವಿಹಿಂಪ, ಬಜರಂಗ ದಳ ಆಗ್ರಹ

12:53 AM Feb 24, 2022 | Team Udayavani |

ಮಂಗಳೂರು: ಸಮಾಜ ವಿರೋಧಿ ಶಕ್ತಿಗಳನ್ನು ದಮನಿಸುವ ಜವಾಬ್ದಾರಿ ಸರಕಾರಕ್ಕಿದೆ. ಈ ಬಗ್ಗೆ ಸರಕಾರ ದೃಢ ನಿಧಾರ ತೆಗೆದುಕೊಳ್ಳಬೇಕು ಎಂದು ವಿಶ್ವಹಿಂದೂ ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಆಗ್ರಹಿಸಿದ್ದಾರೆ.

Advertisement

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್‌ ಬಜರಂಗ ದಳ ವತಿಯಿಂದ ಕದ್ರಿ ಮಲ್ಲಿಕಟ್ಟೆಯಲ್ಲಿ ಬುಧವಾರ ನಡೆದ ಪ್ರತಿಭಟನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹಿಂದೂ ಧರ್ಮಕ್ಕಾಗಿ, ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ಕೆಲಸ ಮಾಡುವ ಹಿಂದೂ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಈ ರೀತಿ ಹತ್ಯೆ ಮಾಡಿದವರ ಮೇಲಿನ ಪ್ರಕರಣಗಳನ್ನು ಸಿದ್ದರಾಮಯ್ಯ ಸರ ಕಾರ ಓಟ್‌ಬ್ಯಾಂಕ್‌ಗಾಗಿ ಹಿಂಪಡೆದಿತ್ತು. ಈಗಲೂ ಸಮಾಜ ವಿರೋಧಿ ಶಕ್ತಿಗಳು ವಿಜೃಂಭಿಸು ತ್ತಿದ್ದರೂ ಈಗಿನ ಬಿಜೆಪಿ ಸರಕಾರ ಸೂಕ್ತ ಕಾರ್ಯಾಚರಣೆ ಮಾಡುವಲ್ಲಿ ವಿಫ‌ಲವಾಗಿದೆ.ಸರಕಾರ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸ ಬಾರದು ಎಂದು ಹೇಳಿದರು.

ವಿಹಿಂಪ ವಿಭಾಗ ಸಹ ಕಾರ್ಯದರ್ಶಿ ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ಹಿಂದುತ್ವಕ್ಕಾಗಿ ಕೆಲಸ ಮಾಡಿದ
ಹತ್ತಾರು ಮಂದಿ ಹತ್ಯೆಗೀಡಾಗಿದ್ದಾರೆ. ಹತ್ಯೆಗೈದವರು ರಾಜಾರೋಷವಾಗಿ ತಿರುಗಾಡು ತ್ತಿ ದ್ದಾರೆ. ಡ್ರಗ್ಸ್‌, ಗೋಹತ್ಯೆ ಮೂಲಕ ಹಣ ಸಂಗ್ರಹಿಸಿ ಅದನ್ನು ಹಿಂದೂಗಳ ಹತ್ಯೆ ಮಾಡಿದವರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಎನ್‌ಕೌಂಟರ್‌ ಮಾಡಿ
ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ಮಾತನಾಡಿ, ಗೋಕಳವು, ಲವ್‌ ಜೆಹಾದ್‌ ಮೂಲಕ ಹಿಂದೂ ಸಮಾಜದಲ್ಲಿ ಭಯ ಮೂಡಿಸಲು ಯತ್ನಿಸಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಹರ್ಷ ಹತ್ಯೆ ನಡೆದಿದೆ. ಇನ್ನು ಸಹಿಸಲು ಸಾಧ್ಯವಿಲ್ಲ. ಹರ್ಷ ಅವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಸರಕಾರ ಹೇಳಿಕೆಗಳನ್ನು ನೀಡುವ ಬದಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಆಗ್ರಸಿದರು.
ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್‌, ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್‌, ಉಪಾಧ್ಯಕ್ಷರಾದ ಹರೀಶ್‌ ಕುಮಾರ್‌ ಶೇಟ್‌, ರತೀಂದ್ರನಾಥ್‌, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಸಹ ಕಾರ್ಯದರ್ಶಿ ರವಿ ಅಸೈಗೋಳಿ, ಮಾತೃಶಕ್ತಿಯ ಜಿಲ್ಲಾ ಸಹ ಪ್ರಮುಖ ರಾದ ಸುಜಾತಾ ಕಂದಾವರ ಪದವು,ಶಾರದಮ್ಮ, ಬಜರಂಗದಳ ಸಹಸಂಚಾಲಕ ನವೀನ್‌ ಮೂಡುಶೆಡ್ಡೆ, ಸಂಸ್ಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next