Advertisement
ಹಲವಾರು ವರ್ಷದಿಂದ ಡ್ರಗ್ಸ್ ಮಾಫಿಯಾ ಕರಾವಳಿ ಭಾಗದಲ್ಲಿ ವ್ಯಾಪಕವಾಗಿದ್ದು, ಪಾರ್ಟಿಗಳಿಗೆ ಪೂರೈಕೆಯಾಗುತ್ತಿದೆ. ಸಾಕಷ್ಟು ಯುವಕ ಯುವತಿಯರ ಜೀವನ ಹಾಳಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸರಕಾರದ ಗಮನಕ್ಕೆ ಸಾಕಷ್ಟು ಬಾರಿ ಇದನ್ನು ತರಲಾಗಿದೆ. ಮಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿದ್ದು, ಇದರ ಹಿಂದೆ ದೊಡ್ಡ ಜಾಲವೇ ಇದೆ. ಕೇರಳ-ಗೋವಾ ಸಹಿತ ವಿವಿಧ ರಾಜ್ಯಗಳಿಂದ ಮಾದಕ ಪದಾರ್ಥ ಬರುತ್ತಿರುವುದು ಆತಂಕಕಾರಿ ವಿಚಾರ.
Related Articles
ಡಿ. 27ರಂದು ಬೋಳಾರದ ಸಿಟಿ ಬೀಚ್ನಲ್ಲಿ ಆಯೋಜಿಸಿರುವ ಇಸ್ರೇಲ್ ಮೂಲದ ಅಂತಾರಾಷ್ಟ್ರೀಯ ಡಿಜೆ ಪ್ಲೇಯರ್ ಸಜಂಕಾ ಅವರ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್-ಬಜರಂಗದಳ ವಿರೋಧ ವ್ಯಕ್ತಪಡಿಸಿವೆ. ಡಿಜೆ ಸಜಂಕಾ ಹಿಂದೂ ದೇವರ ಮಂತ್ರ, ಶ್ಲೋಕಗಳನ್ನು ವಿಡಂಬನೆ ಮಾಡುವ ವ್ಯಕ್ತಿಯಾಗಿದ್ದು, ಆತನ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಪೊಲೀಸರಿಗೆ ಮನವಿ ಮಾಡಲಾಗಿದೆ.
Advertisement