Advertisement

ಇಂದು ಮಂಗಳೂರು ವಿವಿ ಪದವಿ ಫಲಿತಾಂಶ

04:15 AM Jul 05, 2018 | Karthik A |

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯ ಎಪ್ರಿಲ್‌ – ಮೇ 2018ರಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಫಲಿತಾಂಶ ಜು. 5ರಂದು ಅಪರಾಹ್ನ 3 ಗಂಟೆಗೆ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ (www.mangaloreuniversity.ac.in) ಪ್ರಕಟಗೊಳ್ಳಲಿದೆ.

Advertisement

ಪದವಿಗಳಾದ ಬಿ.ಎ./ ಬಿ.ಎಸ್‌ಸಿ./ ಬಿ.ಕಾಂ./ ಬಿ.ಸಿ.ಎ./ ಬಿಬಿಎಂ/ ಬಿಬಿಎ/ ಬಿ.ಎಸ್‌ಸಿ. (ಎಫ್‌.ಎನ್‌.ಡಿ)/ ಬಿ.ಎಚ್‌.ಎಂ./ ಬಿ.ಎಚ್‌.ಎಸ್‌/ ಬಿ.ಎಸ್‌ಸಿ  (ಎಫ್‌.ಡಿ./ಐ.ಡಿ.)/ಬಿ.ಎ.ಎಸ್‌.ಎಲ್‌.ಪಿ, ಬಿ.ಎಸ್‌.ಡಬ್ಲ್ಯೂ/ಬಿ.ಎ. (ಎಚ್‌.ಆರ್‌.ಡಿ.) ವಿಷಯಗಳ ಫಲಿತಾಂಶ ಪ್ರಕಟಗೊಳ್ಳಲಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ವಿದ್ಯಾರ್ಥಿಗಳು ಜು. 14ರೊಳಗೆ ಆನ್‌ಲೈನ್‌ ಅಂಕಪಟ್ಟಿಯೊಂದಿಗೆ ಕಾಲೇಜು ಮುಖಾಂತರ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next