Advertisement
ಇಲ್ಲಿಯವರೆಗೆ ಕೆಎಎಸ್ ಅಧಿಕಾರಿ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ಕೆ. ಅವರು ಪ್ರಭಾರ ನೆಲೆಯಲ್ಲಿ ಮಂಗಳೂರು ವಿ.ವಿ. ಕುಲಸಚಿವರಾಗಿ ಕರ್ತವ್ಯದಲ್ಲಿದ್ದರು.
ಈ ಮಧ್ಯೆ ಜೂನ್‌ನಿಂದಲೇ ಖಾಲಿಯಾಗಿರುವ ಮಂಗಳೂರು ವಿ.ವಿ. ಕುಲಪತಿ ಹುದ್ದೆಯ ನೇಮಕಕ್ಕೆ ಸರಕಾರ ಇನ್ನೂ ಮನಸ್ಸು ಮಾಡಿಲ್ಲ. ಶೋಧನಾ ಸಮಿತಿ ಈಗಾಗಲೇ ಕೆಲವರ ಹೆಸರನ್ನು ಶಿಫಾರಸು ಮಾಡಿದ್ದರೂ ಕುಲಪತಿ ನೇಮಕ ಮಾತ್ರ ಇನ್ನೂ ಅಂತಿಮವಾಗದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.