Advertisement

Mangaluru University; ಆಗಸ್ಟ್‌ 23ರಿಂದ ಪದವಿ ತರಗತಿ ಆರಂಭಕ್ಕೆ ಶತಪ್ರಯತ್ನ

12:08 AM Aug 21, 2023 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟಿರುವ ಪದವಿ ಕಾಲೇಜುಗಳಲ್ಲಿ 2023-24ನೇ ಸಾಲಿನ ತರಗತಿ ಗಳನ್ನು ಆ. 23ರಿಂದ ಆರಂಭಿಸಲು ವಿ.ವಿ.ಯು ಶತಪ್ರಯತ್ನ ನಡೆಸುತ್ತಿದೆ.

Advertisement

ಈಗಾಗಲೇ ನಡೆದಿರುವ ಪದವಿ ಪರೀಕ್ಷೆ ಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ ಯಾದರೂ ಪದವಿ ತರಗತಿಗಳ ಆರಂಭವನ್ನು ಇನ್ನಷ್ಟು ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ಆ. 23ರಿಂದ ಪದವಿ ತರಗತಿಗಳ ಆರಂಭಕ್ಕೆ ಸರ್ವ ಸಿದ್ಧತೆ ನಡೆಸುವಂತೆ ವಿ.ವಿ.ಯು ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಿದೆ.

ಮೊದಲಿಗೆ 2023-24ನೇ ಸಾಲಿನ ಪದವಿ ತರಗತಿಗಳನ್ನು ಆ. 1ರಿಂದ ಆರಂಭಿಸಲು ನಿರ್ಧರಿಸ ಲಾಗಿತ್ತು. ಆದರೆ ಪದವಿ ಪರೀಕ್ಷೆಗಳು ನಡೆಯುವ ಕಾರಣ ಇದನ್ನು ಆ. 17ಕ್ಕೆ ಮುಂದೂಡಲಾಗಿತ್ತು. ಕೊನೆಗೆ ಅದೂ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಆ. 8ರಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಆ. 23ರಿಂದ ಪದವಿ ತರಗತಿ ಆರಂಭದ ಬಗ್ಗೆ ತಿಳಿಸಲಾಗಿತ್ತು.

ಮೌಲ್ಯಮಾಪನ ಸವಾಲು
ಈಗಾಗಲೇ ನಡೆದ ಪದವಿ ಪರೀಕ್ಷೆಯ ಮೌಲ್ಯಮಾಪನ ಸದ್ಯ ಕೊನೆಯ ಹಂತದಲ್ಲಿದೆ. ಕೆಲವು ಉಪನ್ಯಾಸಕರು ಮೌಲ್ಯಮಾಪನದಲ್ಲಿ ತೊಡಗಿಕೊಂಡಿದ್ದು, ಆ. 23ಕ್ಕೆ ಕಾಲೇಜು ಆರಂಭವಾದರೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಕಾಲೇಜು ಆರಂಭದ ಸಂದರ್ಭ ಸಂಬಂಧಪಟ್ಟ ಕಾಲೇಜಿನವರು ಈ ಸವಾಲನ್ನು ಎದುರಿಸಬೇಕಾಗಿದೆ.

ಮಂಗಳೂರು ವಿ.ವಿ. ಕುಲಸಚಿವ ರಾಜು ಚಲ್ಲಣ್ಣವರ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಪದವಿ ತರಗತಿಗಳು ಆ. 23ರಿಂದ ಆರಂಭವಾಗಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಾಗಲೇ ಮೌಲ್ಯಮಾಪನ ಬಹುತೇಕ ಮುಕ್ತಾಯ ಹಂತದಲ್ಲಿದೆ. ಆದರೆ ಯುಯುಸಿಎಂಎಸ್‌ ಸರ್ವರ್‌ ಸ್ವಲ್ಪ ನಿಧಾನಗತಿಯಲ್ಲಿದ್ದು, ಅಂಕ ಅಪ್‌ಲೋಡ್‌ ಮಾಡಲು ಕೊಂಚ ಸಮಸ್ಯೆ ಆಗುತ್ತಿದೆ. ಅದರ ಬಗ್ಗೆ ನಿಗಾ ಇರಿಸಲಾಗುವುದು. ತರಗತಿ ಆರಂಭವನ್ನು ಮತ್ತೆ ಮುಂದೂಡುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

Advertisement

ಮಂಗಳೂರು ವಿ.ವಿ.ವ್ಯಾಪ್ತಿಯಲ್ಲಿ ಆ. 23ರಿಂದ ಪದವಿ ತರಗತಿ ಆರಂಭಿಸಲೇ ಬೇಕಿದೆ. ಒಂದು ವೇಳೆ ಮತ್ತೆ ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆ ಆಗುತ್ತದೆ. ಹೀಗಾಗಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಕ್ಷಿಪ್ರವಾಗಿ ಮೌಲ್ಯಮಾಪನ ಕಾರ್ಯವೂ ನಡೆಯುತ್ತಿದೆ.
-ಪ್ರೊ| ಜಯರಾಜ್‌ ಅಮೀನ್‌
ಕುಲಪತಿ (ಪ್ರಭಾರ), ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next