Advertisement

Mangaluru ವಿವಿಧ ಭಾಷೆ, ಕಲೆ, ಸಂಸ್ಕೃತಿ ಭಾರತವನ್ನು ಒಗ್ಗೂಡಿಸಿದೆ

11:54 PM Nov 04, 2023 | Team Udayavani |

ಮಂಗಳೂರು: ಕೊಂಕಣಿ ಭಾಷೆಯ ಮೇಲೆ ಇಲ್ಲಿನ ಜನ ಇಟ್ಟಿರುವ ಅಭಿಮಾನ ಮೆಚ್ಚುವಂತಹದ್ದು. ಹಲವು ಭಾಷಾ ಸಮ್ಮೇಳದಲ್ಲಿ ಭಾಗವಹಿಸಿದ್ದು, ಇಂತಹ ಅನುಭವ ಸಿಕ್ಕಿಲ್ಲ. ದೇಶದ ವಿವಿಧ ಭಾಷೆ, ಕಲೆ ಮತ್ತು ಸಂಸ್ಕೃತಿ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಸ್ವಾತಂತ್ರ್ಯಸಂಗ್ರಾಮದ ಸಂದರ್ಭದಿಂದಲೇ ಕೊಂಕಣಿ ದೇಶದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿದೆ ಎಂದು ಕವಿ, ವಿದ್ವಾಂಸ ಹಾಗೂ ವಿಮರ್ಶಕ ಉದಯನ್‌ ವಾಜಪೇಯಿ ಹೇಳಿದರು.

Advertisement

ಅಖಿಲ ಭಾರತ ಕೊಂಕಣಿ ಪರಿಷತ್‌ ನೇತೃತ್ವದಲ್ಲಿ ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರದಲ್ಲಿ ಆಯೋಜನೆಗೊಂಡ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜವನ್ನು ಜಾಗೃತಗೊಳಿಸುವ ಕಾರ್ಯ, ರಾಜಕೀಯ ವ್ಯವಸ್ಥೆ, ಧಾರ್ಮಿಕತೆ, ಸಾಮಾಜಿಕ ವಿಚಾರ ಗಳನ್ನು ಒಗ್ಗೂಡಿಸಿ ಮುನ್ನೆಡೆಯಲು ಸಾಹಿತ್ಯದಿಂದ ಸಾಧ್ಯ ಎಂದರು.

ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಚ್‌.ಎಂ. ಪೆರ್ನಾಲ್‌, ಅಧ್ಯಕ್ಷ ಮೈಕಲ್‌ ಡಿ’ಸೋಜಾ, ಉಪಾಧ್ಯಕ್ಷರು ನಂದಗೋಪಾಲ ಶೆಣೈ, ಕಾರ್ಯದರ್ಶಿ ಟೈಟಸ್‌ ನೊರೊನ್ಹಾ, ಅಖೀಲ ಭಾರತೀಯ ಕೊಂಕಣಿ ಪರಿಷದ್‌ ಉಪಾಧ್ಯಕ್ಷ ಮೆಲ್ವಿನ್‌ ರಾಡ್ರಿಗಸ್‌, ಕಾರ್ಯಾಧ್ಯಕ್ಷ ಚೇತನ್‌ ಆಚಾರ್ಯ ಉಪಸ್ಥಿತರಿದ್ದರು.

ಕೊಂಕಣಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ
ಅಧ್ಯಕ್ಷತೆ ವಹಿಸಿದ್ದ ಕಾದಂಬರಿಗಾರ್ತಿ ಹಾಗೂ ಕೊಂಕಣಿ ಚಳವಳಿಯ ಮುಂದಾಳು ಹೇಮಾ ನಾಯ್ಕ ಮಾತನಾಡಿ, ದೇಶದಲ್ಲಿ 30 ವರ್ಷಗಳಿಂದ ಮಹಿಳಾ ಸ್ಥಾನಮಾನದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕೊಂಕಣಿ ಮಹಿಳೆಯರಿಗೆ ಪ್ರಾಧಾನ್ಯ ನೀಡುತ್ತಾ ಬಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ರಾಜ್ಯಸಭೆಯಲ್ಲೂ ಮಹಿಳಾ ಸಾಹಿತ್ಯ ಪ್ರತಿಧ್ವನಿಸಿರುವುದು ಹೆಮ್ಮೆಯ ವಿಚಾರ. ಆದರೆ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆಗೆ ತಡೆ ಬೀಳದಿರುವುದು ಖೇದಕರ ಸಂಗತಿ ಎಂದು ಹೇಳಿದರು.

Advertisement

ರಾಷ್ಟ್ರ ನಿರ್ಮಾಣದಲ್ಲಿ ಭಾಷೆ ಏಕತೆಯ ಮಂತ್ರ ಸಾರಿದೆ. ಆದರೆ ಭಾಷೆ ಯನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸುವುದು ಸಮಂಜಸವಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next