Advertisement
ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ವೆನಾÉಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಗಳೂರು: ಬಜಪೆಯ ಪ್ಲಾಮಾ ರೆಸಿಡೆನ್ಸಿ ಕಟ್ಟಡದ ಮುಂಭಾಗದ ಫುಟ್‌ಪಾತ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದಾರೆ. ಸುಮಾರು 55-60 ವರ್ಷ ಪ್ರಾಯವಾಗಿದ್ದು, 5 ಅಡಿ ಎತ್ತರ, ಬಿಳಿ ಗಡ್ಡ-ಮೀಸೆ ಹೊಂದಿದ್ದಾರೆ. ಬಿಳಿ ಮೈಬಣ್ಣ, ಉದ್ದ ಮುಖ, ಸಪೂರ ಶರೀರ ಹೊಂದಿದ್ದಾರೆ. ನಸು ಹಳದಿ ಬಣ್ಣದ ತುಂಬು ತೋಳಿನ ಶರ್ಟ್, ಕಂದು ಬಣ್ಣದ ಪ್ಯಾಂಟ್ ಇದೆ. ಈ ಚಹರೆಯುಳ್ಳ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಬಜಪೆ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟನೆ ತಿಳಿಸಿದೆ.
Related Articles
ಮಂಗಳೂರು: ಬಿಜೈಯ ಪಾಳುಬಿದ್ದ ಮನೆಯೊಂದರಲ್ಲಿ ಮಂಗಳವಾರ ಸುಮಾರು 45-50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
Advertisement
ಮೃತದೇಹ ಕೊಳೆತಿದೆ. ಪಕ್ಕದಲ್ಲಿ ತೆಂಗಿನ ಮರ ಏರುವ ಪರಿಕರಗಳು ಕಂಡುಬಂದಿವೆ. ನೀಲಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಸುಮಾರು 5.2 ಅಡಿ ಎತ್ತರವಿದ್ದು ಕಪ್ಪು ಮೈಬಣ್ಣ ಹೊಂದಿದ್ದಾರೆ. ಅವರ ವಾರಸುದಾರರು ಇದ್ದರೆ ಉರ್ವ ಪೊಲೀಸ್ ಠಾಣೆ (9480802323) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.