ಮಂಗಳೂರು: 2018ರಲ್ಲಿ ನಡೆದ ಕೊಲೆ ಪ್ರಕರಣದ ಅಪರಾಧಿಳಿಗೆ ಇಲ್ಲಿನ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳಾದ ಗೌಡಪ್ಪಗೌಡ ಸಣ್ಣ ಗೌಡ್ರು ಮತ್ತು ಹುಲ್ಲಪ್ಪ ಬಸಪ್ಪ ಸೂಡಿ ಶಿಕ್ಷೆಗೊಳಗಾದ ಅಪರಾಧಿಗಳು.
ಪರಿಚಯಸ್ಥ ಮರಿಯಪ್ಪನನ್ನು ಕೊಲೆಗೈದ ಅಪರಾಧಿಗಳೆಂದು ಕೋರ್ಟ್ ತೀರ್ಪು ನೀಡಿದೆ. ಆರೋಪಿಗಳು ಮತ್ತು ಹತ್ಯೆಗೀಡಾದವರೂ ವಲಸೆ ಕಾರ್ಮಿಕರು.
ಸಾಕ್ಷಿಗಳು ಮತ್ತು ಸಲ್ಲಿಸಿದ ಇತರ ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಆರೋಪಿಗಳಿಬ್ಬರನ್ನೂ ಐಪಿಸಿ ಸೆಕ್ಷನ್ 302 ಮತ್ತು 201 ರ ಅಡಿಯಲ್ಲಿ ಪೂರ್ವ ಯೋಜಿತ ಕೊಲೆಯ ತಪ್ಪಿತಸ್ಥರೆಂದು ಘೋಷಿಸಿದರು. ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿತು.
ಗೌಡಪ್ಪ ಗೌಡ್ರು ಸಂತ್ರಸ್ತ ಮರಿಯಪ್ಪನಿಗೆ 10 ಸಾವಿರ ರೂಪಾಯಿ ಬಾಕಿ ಉಳಿಸಿಕೊಂಡಿದ್ದೇ ಯೋಜಿತ ಕೊಲೆಗೆ ಕಾರಣ ಎಂದು ಪ್ರಕರಣದ ದಾಖಲೆಗಳು ಹೇಳಿವೆ. ಸಂತ್ರಸ್ತೆ ಕೊಪ್ಪಳದ ಸ್ವಗ್ರಾಮಕುಷ್ಟಗಿಯಲ್ಲಿ ಮನೆ ನಿರ್ಮಿಸುತ್ತಿದ್ದ, ಬಾಕಿ ಇರುವ ಹಣವನ್ನು ಕೂಡಲೇ ಹಿಂದಿರುಗಿಸುವಂತೆ ಒತ್ತಾಯಿಸಿದ್ದರು. ಇದರಿಂದ ಕೋಪಗೊಂಡ ಗೌಡಪ್ಪ ಮತ್ತು ಬಸಪ್ಪ ಸೂಡಿ ಮೇ 31, 2018 ರಂದು ಮರಿಯಪ್ಪನನ್ನು ಕೊಲ್ಲಲು ಯೋಜನೆ ರೂಪಿಸಿದ್ದರು.
ಇಬ್ಬರೂ ಅಪರಾಧಿಗಳು ಅದೇ ರಾತ್ರಿ ತಾವು ಕೆಲಸ ಮಾಡುತ್ತಿದ್ದ ಸುರತ್ಕಲ್ ಬಳಿಯ ಕೃಷ್ಣಾ ಎಸ್ಟೇಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮರಿಯಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದರು. ನಂತರ ಅವರು ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ, ಅಪರಾಧದ ಸಾಕ್ಷ್ಯವನ್ನು ನಾಶಮಾಡಲು ಹತ್ತಿರದ ಮಳೆ ನೀರಿನ ಕಾಲುವೆಗೆ ಎಸೆಡಿದ್ದರು.ಎರಡು ದಿನಗಳ ನಂತರ ಪಂಪ್ ರಿಪೇರಿ ಮಾಡುವಾಗ ಮೃತದೇಹ ಪತ್ತೆಯಾದಾಗ ವಿಷಯ ಬೆಳಕಿಗೆ ಬಂದಿತ್ತು.