Advertisement

Mangaluru: ಜೀವಂತ ಶ್ವಾನವನ್ನು ತ್ಯಾಜ್ಯ ವಾಹನಕ್ಕೆ ನೀಡಿದ ಮಾಲಕರು!

01:29 AM Sep 11, 2024 | Team Udayavani |

ಮಂಗಳೂರು: ಜೀವಂತ ಶ್ವಾನವನ್ನು ಅದರ ಮಾಲಕರು ಪಾಲಿಕೆಯ ತ್ಯಾಜ್ಯ ಕೊಂಡೊಯ್ಯವ ವಾಹನಕ್ಕೆ ಕೊಟ್ಟ ಹೇಯ ಕೃತ್ಯ ನಗರದ ಡೊಂಗರಕೇರಿಯಲ್ಲಿ ನಡೆದಿದೆ.

Advertisement

ಇಲ್ಲಿ ವಾಸಿಸುವ ಕುಟುಂಬವೊಂದರ ಸದಸ್ಯರು ಬೇರೆ ದೇಶದಲ್ಲಿ ವಾಸಿಸುತ್ತಿದ್ದು, ವೃದ್ಧ ಮಹಿಳೆ ಮಾತ್ರ ಈ ಮನೆಯಲ್ಲಿ ವಾಸವಾಗಿದ್ದಾರೆ. ಇಲ್ಲಿನ ಶ್ವಾನ ಇತ್ತೀಚೆಗೆ ಕೆಲವು ಕಡೆ ಉಪಟಳ ಮಾಡಿತ್ತು. ಇದೇ ಕಾರಣಕ್ಕೆ ಮನೆಗೆ ಬರುವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಜೀವಂತ ನಾಯಿಯನ್ನು ನೀಡಲಾಗಿದೆ. ಅದರಂತೆ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಮಿಕರು ಕೂಡ ಯಾವುದೇ ವಿರೋಧ ತೋರದೆ ತ್ಯಾಜ್ಯದೊಡನೆ ನಾಯಿಯನ್ನೂ ಪಚ್ಚನಾಡಿಗೆ ಸಾಗಿಸಿದ್ದಾರೆ.

ಈ ಘಟನೆಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ವೀಡಿಯೊ ಮಾಡಿದ್ದು, ಎರಡು ದಿನಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಕುರಿತು ವಿವರ ನೀಡುವಂತೆ ಪಶುಪಾಲನೆ ಇಲಾಖೆಯಿಂದ ಪಾಲಿಕೆಗೆ ನೋಟಿಸ್‌ ನೀಡಲಾಗಿದೆ. ಶ್ವಾನ ಇನ್ನೂ ಪತ್ತೆಯಾಗಿಲ್ಲ. ಪಚ್ಚನಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕುವ ಕೆಲಸ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next